»   » 'ಬಿಗ್ ಬಾಸ್ ಕನ್ನಡ-5': ಮನೆಯಿಂದ ಹೊರಬಂದ 'ಡೆವಿಲ್' ಮೇಘ

'ಬಿಗ್ ಬಾಸ್ ಕನ್ನಡ-5': ಮನೆಯಿಂದ ಹೊರಬಂದ 'ಡೆವಿಲ್' ಮೇಘ

Posted By:
Subscribe to Filmibeat Kannada

'ಡೆವಿಲ್ ಈಸ್ ಹಿಯರ್' ಎನ್ನುತ್ತ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಘ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

'ದೊಡ್ಮನೆ'ಯೊಳಗೆ ಮೇಘ ಕಾಲಿಟ್ಟಾಗ, ಆಕೆ ಬಗ್ಗೆ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿತ್ತು. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಸೈಲೆಂಟ್ ಆಗಿದ್ದ ಮೇಘ ಎರಡನೇ ವಾರವೇ ಹೊರಬಿದ್ದಿದ್ದಾರೆ. ಮುಂದೆ ಓದಿರಿ...

ಕಮ್ಮಿ ವೋಟ್ ಬಿದ್ದಿದ್ರಿಂದ...

ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಕೊಡಗಿನ ಶನಿವಾರಸಂತೆಯ ಹುಡುಗಿ ಮೇಘಗೆ ಕಮ್ಮಿ ವೋಟುಗಳು ಬಿದ್ದಿದ್ರಿಂದ ಆಕೆ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ.

ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಎಂಟು ಮಂದಿ ನಾಮಿನೇಟ್ ಆಗಿದ್ದರು.!

ದಿವಾಕರ್, ಸಮೀರಾಚಾರ್ಯ, ಕೃಷಿ ತಾಪಂಡ, ರಿಯಾಝ್, ಆಶಿತಾ, ಜಗನ್ನಾಥ್, ದಯಾಳ್ ಪದ್ಮನಾಭನ್ ಹಾಗೂ ಮೇಘ ಕಳೆದ ವಾರ ನಾಮಿನೇಟ್ ಆಗಿದ್ದರು. ಎಂಟು ಮಂದಿ ಪೈಕಿ ಮೇಘಗೆ ಮನೆಯಿಂದ ಹೊರಹೋಗಲು ಗೇಟ್ ಪಾಸ್ ಸಿಕ್ಕಿದೆ.

ಈ ವಾರ 'ಬಿಗ್ ಬಾಸ್' ಮನೆಯ ಅರ್ಧದಷ್ಟು ಸದಸ್ಯರು ನಾಮಿನೇಟ್.!

ಯಾರೆಲ್ಲ ಮೇಘ ಹೆಸರು ತೆಗೆದುಕೊಂಡಿದ್ದರು.?

ಜಗನ್ನಾಥ್, ದಯಾಳ್, ಕೃಷಿ, ಸಿಹಿ ಕಹಿ ಚಂದ್ರು ಹಾಗೂ ತೇಜಸ್ವಿನಿ... ಮೇಘ ರನ್ನ ನಾಮಿನೇಟ್ ಮಾಡಿದ್ದರು.

ಯಾರು ಏನೇ ಹೇಳಿದರೂ, ಜನರ ಬೆಂಬಲ ಮಾತ್ರ ಜನಸಾಮಾನ್ಯರಿಗೆ.!

ಮತ್ತೆ ಕಾಮನ್ ಮ್ಯಾನ್.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲ ವಾರ 'ಜನಸಾಮಾನ್ಯ'ರಾದ ಸುಮಾ ರಾಜ್ ಕುಮಾರ್ ಔಟ್ ಆಗಿದ್ದರು. ಎರಡನೇ ವಾರ ಕೂಡ ಸೆಲೆಬ್ರಿಟಿ ಅಲ್ಲದ ಮೇಘ ಹೊರಗೆ ಬಂದಿದ್ದಾರೆ. ''ನಮ್ಮ ಮತ ಜನಸಾಮಾನ್ಯರಿಗೆ'' ಅಂತ ವೀಕ್ಷಕರು ಸಾರಿ ಸಾರಿ ಹೇಳಿದರೂ, 'ಬಿಗ್ ಬಾಸ್' ಮನೆಯಿಂದ 'ಕಾಮನ್ ಮ್ಯಾನ್' ಹೊರಗೆ ಬರುತ್ತಿರುವುದು ಮಾತ್ರ ಬೇಸರದ ಸಂಗತಿ.

English summary
Week 2: Megha eliminated from Bigg Boss Kannada 5.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada