»   » 'ಬಿಗ್' ಮನೆಯಿಂದ ಎಲಿಮಿನೇಟ್ ಆದರು ಕೃಷಿ ತಾಪಂಡ.!

'ಬಿಗ್' ಮನೆಯಿಂದ ಎಲಿಮಿನೇಟ್ ಆದರು ಕೃಷಿ ತಾಪಂಡ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐದು ವಾರಗಳು ಸಮಾಪ್ತಿ ಆಗಿದೆ. ಐದನೇ ವಾರ 'ಬಿಗ್ ಬಾಸ್' ಮನೆಯಿಂದ ಕೃಷಿ ತಾಪಂಡ ಹೊರ ಬಂದಿದ್ದಾರೆ. ಈ ಮೂಲಕ 'ಬಿಗ್ ಬಾಸ್' ಮನೆಯಲ್ಲಿ ಮತ್ತೊಮ್ಮೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಶಾಕ್ ಸಿಕ್ಕಂತಾಗಿದೆ.

ಅನುಪಮಾ ಗೌಡ, ಸಿಹಿ ಕಹಿ ಚಂದ್ರು, ಆಶಿತಾ, ಜೆಕೆ, ಶ್ರುತಿ ಪ್ರಕಾಶ್... ಈ ಎಲ್ಲರ ಜೊತೆ ಖುಷಿ ಖುಷಿಯಿಂದ ಇರುತ್ತಿದ್ದ ಕೃಷಿ ತಾಪಂಡ, ಅನೇಕ ಬಾರಿ ಅಡುಗೆ ವಿಷಯಕ್ಕೆ ರಗಳೆ ಮಾಡಿಕೊಂಡಿದ್ದರು.

ಅಡುಗೆ ಮನೆ ಮ್ಯಾಟರ್ ನಲ್ಲಿ ಮೂಗು ತೂರಿಸಿ ಜನಸಾಮಾನ್ಯ ಸ್ಪರ್ಧಿಗಳ ಬೇಸರಕ್ಕೆ ಕಾರಣವಾಗಿದ್ದ ಕೃಷಿ ತಾಪಂಡ, ಈ ವಾರ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದಾರೆ. ಇದರಿಂದ ''ಕೃಷಿ ನನಗೆ ಕ್ಲೋಸ್ ಫ್ರೆಂಡ್'' ಎನ್ನುತ್ತಿದ್ದ ಅನುಪಮಾ ಗೌಡಗೆ ದೊಡ್ಡ ಶಾಕ್ ಸಿಕ್ಕಂತಾಗಿದೆ. ಮುಂದೆ ಓದಿರಿ....

ವೀಕ್ಷಕರ ಬೆಂಬಲ ಕಡಿಮೆ

ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ನಟಿ ಕೃಷಿ ತಾಪಂಡ ಅವರಿಗೆ ಕಮ್ಮಿ ವೋಟ್ ಗಳು ಬಿದ್ದಿದ್ವು. ಹೀಗಾಗಿ, ಆಕೆ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!

ಆರು ಮಂದಿ ನಾಮಿನೇಟ್ ಆಗಿದ್ದರು

ನಿವೇದಿತಾ ಗೌಡ, ಕೃಷಿ ತಾಪಂಡ, ಸಿಹಿ ಕಹಿ ಚಂದ್ರು, ಜಗನ್ನಾಥ್ ಚಂದ್ರಶೇಖರ್, ಆಶಿತಾ ಹಾಗೂ ದಿವಾಕರ್ ನಾಮಿನೇಟ್ ಆಗಿದ್ದರು. ಆರು ಮಂದಿ ಪೈಕಿ ಕೃಷಿ ತಾಪಂಡ ಅವರಿಗೆ ಹೊರ ಹೋಗಲು ಗೇಟ್ ಪಾಸ್ ಸಿಕ್ಕಿದೆ.

ನಾಮಿನೇಟ್ ಮಾಡಿದ್ದು ಇಬ್ಬರೇ.!

ಹಾಗ್ನೋಡಿದರೆ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಕೃಷಿ ತಾಪಂಡ ವಿರುದ್ಧ ವೋಟ್ ಮಾಡಿದ್ದು ಇಬ್ಬರೇ. (ದಿವಾಕರ್ ಮತ್ತು ರಿಯಾಝ್).!

ಐದು ವಾರ, ಮೂರು ಸೆಲೆಬ್ರಿಟಿ ಔಟ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದು ವಾರಗಳಲ್ಲಿ ಮೂರು ಸೆಲೆಬ್ರಿಟಿಗಳು (ದಯಾಳ್, ತೇಜಸ್ವಿನಿ, ಕೃಷಿ ತಾಪಂಡ) ಔಟ್ ಆಗಿದ್ದಾರೆ. ಜನಸಾಮಾನ್ಯ ಸ್ಪರ್ಧಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಇದರಿಂದ ದೊಡ್ಡ ಶಾಕ್ ಸಿಕ್ಕಿರುವುದಂತೂ ಸತ್ಯ.

English summary
Bigg Boss Kannada 5: Week 5: Krishi Thapanda eliminated. ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ವಾರಕ್ಕೆ ನಟಿ ಕೃಷಿ ತಾಪಂಡ ಔಟ್ ಆಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada