twitter
    For Quick Alerts
    ALLOW NOTIFICATIONS  
    For Daily Alerts

    ಬಹುಮುಖ್ಯ ಬದಲಾವಣೆ ಜೊತೆ ಬರ್ತಿದೆ 'ಬಿಗ್ ಬಾಸ್ ಕನ್ನಡ-7'

    |

    Recommended Video

    Bigg Boss Kannada 07 : ಬದಲಾವಣೆ ಜೊತೆ ಬರ್ತಿದೆ 'ಬಿಗ್ ಬಾಸ್ ಕನ್ನಡ-7' | FILMIBEAT KANNADA

    ಕನ್ನಡ ಮನರಂಜನೆ ವಾಹಿನಿಗಳ ಟಿ.ಆರ್.ಪಿ ಪಟ್ಟಿಯಲ್ಲಿ ಜೀ ಕನ್ನಡ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ಇದೆ. ಪಾರು ಧಾರಾವಾಹಿ, ಸರಿಗಮಪ 16, ಗಟ್ಟಿಮೇಳ ಧಾರಾವಾಹಿ, ಡಿಕೆಡಿ ಅಂತಹ ವೀಕೆಂಡ್ ಶೋ ಮತ್ತು ದಿನನಿತ್ಯ ಧಾರಾವಾಹಿಯ ಸಹಾಯದಿಂದ ಜೀ ಕನ್ನಡ ಟಾಪ್ ನಲ್ಲಿದೆ.

    ಹೀಗಾಗಿ, ಮತ್ತೊಮ್ಮೆ ಮೊದಲ ಸ್ಥಾನ ಪಡೆಯಲು ಕಲರ್ಸ್ ಕನ್ನಡ ನಿರ್ಧರಿಸಿದ್ದು, ಇದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿದೆ. ಸದ್ಯದಲ್ಲೇ ಬಿಗ್ ಬಾಸ್ ಕನ್ನಡ 7ನೇ ಆವೃತ್ತಿ ಬರಲಿದೆ. ಆ ಕಾರ್ಯಕ್ರಮಕ್ಕೆ ಹೆಚ್ಚು ವೀಕ್ಷಕರಿದ್ದಾರೆ. ಹಾಗಾಗಿ, ಈ ಶೋ ಮುಂದಿಟ್ಟುಕೊಂಡು ಟಿ.ಆರ್.ಪಿಯಲ್ಲಿ ಟಾಪ್ ಗೆ ಬರಬೇಕು ಎಂಬ ಯೋಜನೆ ಹಾಕಿದೆ.

    ಅದಕ್ಕಾಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಹುಮುಖ್ಯವಾದ ಬದಲಾವಣೆ ಮಾಡಿದೆ. ಏನದು? ಮುಂದೆ ಓದಿ.....

    ಸೂಪರ್ ಟು ಕನ್ನಡಕ್ಕೆ ಶಿಫ್ಟ್

    ಸೂಪರ್ ಟು ಕನ್ನಡಕ್ಕೆ ಶಿಫ್ಟ್

    ಬಿಗ್ ಬಾಸ್ ಕನ್ನಡದ ನಾಲ್ಕು ಆವೃತ್ತಿಗಳು ಆರಂಭದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿತ್ತು. ಆಮೇಲೆ ಕಲರ್ ಸೂಪರ್ ವಾಹಿನಿ ಬಂದ ಕಾರಣ, ಆ ವಾಹಿನಿಯನ್ನ ಮೇಲಕ್ಕೆ ತರಬೇಕು ಎಂಬ ಉದ್ದೇಶದಿಂದ ಸೂಪರ್ ವಾಹಿನಿಗೆ ಬಿಗ್ ಬಾಸ್ ಅಂತ ದೊಡ್ಡ ಶೋವನ್ನ ಶಿಫ್ಟ್ ಮಾಡಿದ್ದರು. ಇದೀಗ, ಮತ್ತೆ ಕಲರ್ಸ್ ಕನ್ನಡಕ್ಕೆ ಬಿಗ್ ಬಾಸ್ ಶಿಫ್ಟ್ ಆಗಿದೆ.

    ಸುದೀಪ್ ಪ್ರೋಮೋ ಕಾಪಿ ಮಾಡಿದ್ರಾ ತೆಲುಗು ಬಿಗ್ ಬಾಸ್?ಸುದೀಪ್ ಪ್ರೋಮೋ ಕಾಪಿ ಮಾಡಿದ್ರಾ ತೆಲುಗು ಬಿಗ್ ಬಾಸ್?

    No 1 ಸ್ಥಾನದ ಮೇಲೆ ಕಣ್ಣಿಟ್ಟ ಕಲರ್ಸ್ ಕನ್ನಡ

    No 1 ಸ್ಥಾನದ ಮೇಲೆ ಕಣ್ಣಿಟ್ಟ ಕಲರ್ಸ್ ಕನ್ನಡ

    ಸುದೀರ್ಘವಾಗಿ ಮೊದಲ ಸ್ಥಾನದಲ್ಲಿದ್ದ ಕಲರ್ಸ್ ಕನ್ನಡ ಕಾಲಕ್ರಮೇಣ ಮೊದಲ ಸ್ಥಾನವನ್ನ ಇನ್ನೊಂದು ವಾಹಿನಿಗೆ ಬಿಟ್ಟುಕೊಟ್ಟಿತ್ತು. ಇದೀಗ, ಮತ್ತೆ ಆ ಪಟ್ಟ ವಾಪಸ್ ಪಡೆಯಲು ನಿರ್ಧರಿಸಿದ್ದು, ಅದಕ್ಕಾಗಿ ಬಿಗ್ ಬಾಸ್ ಮೊರೆ ಹೋಗಿದೆ. ಹಾಗಾಗಿ, ಕಲರ್ಸ್ ಕನ್ನಡ ವಾಹಿನಿಗೆ ಬಿಗ್ ಬಾಸ್ ವಾಪಸ್ ಆಗ್ತಿದೆ. ಇದು ಸಹಜವಾಗಿ ಕಿರುತೆರೆ ಲೋಕದಲ್ಲಿ ಬದಲಾವಣೆ ತರುವ ನಿರೀಕ್ಷೆ ಇದೆ.

    ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಇವರೆಲ್ಲ ಇದ್ದರೆ ಚೆಂದವಂತೆ.!ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಇವರೆಲ್ಲ ಇದ್ದರೆ ಚೆಂದವಂತೆ.!

    ವಾರಾಂತ್ಯದಲ್ಲಿ ಕೈಹಿಡಿಯುತ್ತಿಲ್ಲ ರಿಯಾಲಿಟಿ ಶೋಗಳು

    ವಾರಾಂತ್ಯದಲ್ಲಿ ಕೈಹಿಡಿಯುತ್ತಿಲ್ಲ ರಿಯಾಲಿಟಿ ಶೋಗಳು

    ಹಾಗ್ನೋಡಿದ್ರೆ, ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ವಾಹಿನಿಯಲ್ಲಿ ರಿಯಾಲಿಟಿ ಶೋಗಳು ಕೈಹಿಡಿಯುತ್ತಿಲ್ಲ. ಮಜಾ ಟಾಕೀಸ್ ಮತ್ತು ಮಜಾಭಾರತ, ಕನ್ನಡದ ಕೋಟ್ಯಧಿಪತಿ, ಕಾಮಿಡಿ ಕಂಪನಿ ಕಮಾಲ್ ಮಾಡುತ್ತಿಲ್ಲ. ಹಾಗಾಗಿ, ಬಿಗ್ ಬಾಸ್ ಶೋ ಮೂಲಕ ಮತ್ತೆ ಹಳೇ ಖದರ್ ಗೆ ಬರುವ ಹುಮ್ಮಸ್ಸಿನಲ್ಲಿರಬಹುದು.

    ಬಿಗ್ ಬಾಸ್ ಯಾವಾಗ?

    ಬಿಗ್ ಬಾಸ್ ಯಾವಾಗ?

    ತೆಲುಗು, ತಮಿಳಿನಲ್ಲಿ ಬಿಗ್ ಬಾಸ್ ಈಗಾಗಲೇ ಆರಂಭವಾಗಿದ್ದು, ಕನ್ನಡದಲ್ಲಿ ಯಾವಾಗ ಎಂಬ ಕುತೂಹಲ ಕಾಡ್ತಿದೆ. ಸದ್ಯದವರೆಗೂ ಬಿಗ್ ಬಾಸ್ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಆಯೋಜಕರು. ಇದೇ ಮೊದಲ ಸಲ ಏಳನೇ ಆವೃತ್ತಿ ಬಗ್ಗೆ ವಿಷಯ ಬಹಿರಂಗ ಮಾಡಿದ್ದು, ವಾಹಿನಿ ಬದಲಿಸಿದೆ ಎಂದಷ್ಟೇ ತಿಳಿಸಿದ್ದಾರೆ. ಬಹುಶಃ ಸೆಪ್ಟೆಂಬರ್ ಅಂತ್ಯಕ್ಕೆ ಅಥವಾ ಅಕ್ಟೋಬರ್ ಆರಂಭದಲ್ಲಿ ಬಿಗ್ ಬಾಸ್ ಆರಂಭವಾಗಬಹುದು.

    English summary
    Bigg boss kannada 7 telecasting in colors kannada channel. last two time show was telecasted in colors super.
    Sunday, September 1, 2019, 13:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X