For Quick Alerts
  ALLOW NOTIFICATIONS  
  For Daily Alerts

  ನಾಮಿನೇಷನ್‌ನಲ್ಲಿ ಶಂಕರ್ ಅಶ್ವಥ್ ಟಾರ್ಗೆಟ್: 11 ಮತ ಬಿದ್ದರೂ ಸೇಫ್ ಆಗಿದ್ದು ಏಕೆ?

  |

  ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿ ಮೊದಲ ವಾರದಲ್ಲಿ ಮನೆಯಿಂದ ಯಾರು ಹೊರಗೆ ಹೋಗಬೇಕು ಎನ್ನುವುದಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಮನೆ ಸದಸ್ಯರ ಮತಗಳ ಅನುಸಾರ ಆರು ಮಂದಿ ನಾಮಿನೇಟ್ ಆಗಿದ್ದರು. ಈ ಪೈಕಿ ಹಿರಿಯ ಕಲಾವಿದ ಶಂಕರ್ ಅಶ್ವಥ್‌ ಅವರಿಗೆ ಹೆಚ್ಚು ಮತ ಬಂದಿತ್ತು.

  ಆದ್ರೆ, ಕೊನೆ ಘಳಿಗೆಯಲ್ಲಿ ಬಿಗ್ ಬಾಸ್ ಕೊಟ್ಟ ಟ್ವಿಸ್ಟ್ ಕಾರಣದಿಂದ ಶಂಕರ್ ಅಶ್ವಥ್ ಸೇಫ್ ಆದರು. ಹದಿನಾರು ಸದಸ್ಯರಲ್ಲಿ ಹನ್ನೊಂದು ಮಂದಿ ಶಂಕರ್ ಅವರನ್ನು ಟಾರ್ಗೆಟ್ ಮಾಡಿದರು. ಅದರಲ್ಲಿ ಬಹುತೇಕರದ್ದು ಒಂದೇ ಕಾರಣ ಆಗಿತ್ತು. ಈ ಕಾರಣದಿಂದ ಶಂಕರ್ ಅಶ್ವಥ್ ಮಾನಸಿಕವಾಗಿ ಸ್ವಲ್ಪ ಬೇಸರಗೊಂಡರು, ನಂತರ ಮಾತಿನಲ್ಲೇ ತಿರುಗೇಟು ನೀಡಿದರು. ಅಷ್ಟಕ್ಕೂ, ಶಂಕರ್ ಅವರನ್ನು ಟಾರ್ಗೆಟ್ ಮಾಡಿದ ಆ ಹನ್ನೊಂದು ಮಂದಿ ಯಾರು? ಅತಿ ಹೆಚ್ಚು ವೋಟ್ ಪಡೆದರೂ ಶಂಕರ್ ಸೇಫ್ ಆಗಿದ್ದು ಹೇಗೆ? ಮುಂದೆ ಓದಿ....

  ಬಿಗ್ ಬಾಸ್ ಕನ್ನಡ 8: ಪ್ರಶಾಂತ್ ಸಂಬರ್ಗಿ ಮತ್ತು ದಿವ್ಯಾ ನಡುವಿನ ಕನೆಕ್ಷನ್ ಏನು?

  ಯಾರೆಲ್ಲಾ ನಾಮಿನೇಟ್ ಮಾಡಿದರು?

  ಯಾರೆಲ್ಲಾ ನಾಮಿನೇಟ್ ಮಾಡಿದರು?

  ರೇಸರ್ ಅರವಿಂದ್, ಚಂದ್ರಕಲಾ ಮೋಹನ್, ಧನುಶ್ರೀ, ದಿವ್ಯಾ ಸುರೇಶ್, ದಿವ್ಯ ಉರುಡಗ, ಗೀತಾ ಭಟ್, ಪ್ರಶಾಂತ್ ಸಂಬರ್ಗಿ, ಶುಭಾ ಪೂಂಜಾ, ವೈಷ್ಣವಿ ಗೌಡ, ರಘು ಗೌಡ, ವಿಶ್ವನಾಥ್ ಅವರು ಹಿರಿಯ ಕಲಾವಿದ ಶಂಕರ್ ಅವರನ್ನು ನಾಮಿನೇಟ್ ಮಾಡಿದರು.

  ಬಿಗ್ ಬಾಸ್ ಕನ್ನಡ 8: ಗೆದ್ದು ಬೀಗಿದ ಕ್ಷಣವನ್ನು ನೆನೆದು ಕಣ್ಣೀರಿಟ್ಟ ಬಿಗ್ ಮನೆಯ ಸ್ಪರ್ಧಿಗಳು

  ಎಲ್ಲರ ಕಾರಣವೂ ಒಂದೇ

  ಎಲ್ಲರ ಕಾರಣವೂ ಒಂದೇ

  ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಹೋಲಿಸಿಕೊಂಡರೆ ಶಂಕರ್ ಅವರನ್ನು ಬಹಳ ಹಿರಿಯರು. ಟಾಸ್ಕ್ ಮಾಡುವ ಸಂದರ್ಭದಲ್ಲಿ ಶಂಕರ್ ಅವರಿಗೆ ಕಷ್ಟ ಆಗಬಹುದು. ದೈಹಿಕವಾಗಿ ಕಷ್ಟವಾಗಬಹುದು. ಅನಾರೋಗ್ಯದ ಸಮಸ್ಯೆ ಎದುರಾಗಬಹುದು ಎಂಬ ಕಾರಣಗಳನ್ನು ಸ್ಪರ್ಧಿಗಳು ನೀಡಿದರು.

  ಹೆಚ್ಚು ಮತ ಪಡೆದರೂ ಶಂಕರ್ ಸೇಫ್

  ಹೆಚ್ಚು ಮತ ಪಡೆದರೂ ಶಂಕರ್ ಸೇಫ್

  ಶಂಕರ್ ಅಶ್ವಥ್ ಜೊತೆ ಮಂಜು ಪಾವಗಡ, ಧನುಶ್ರೀ, ನಿಧಿ ಸುಬ್ಬಯ್ಯ ಹಾಗೂ ನಿರ್ಮಲಾ ಸತ್ಯ ನಾಮಿನೇಟ್ ಆಗಿದ್ದರು. ಆದರೆ, ಬಿಗ್ ಬಾಸ್ ಸೂಚನೆ ಮೆರೆಗೆ ಮನೆಯ ಕ್ಯಾಪ್ಟನ್ ಶಮಂತ್ ಆಯ್ಕೆಯಿಂದ ಶಂಕರ್ ಅಶ್ವಥ್ ಅವರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆದರು.

  ಕ್ಯಾಪ್ಟನ್‌ಗೆ ವಿಶೇಷ ಅಧಿಕಾರ

  ಕ್ಯಾಪ್ಟನ್‌ಗೆ ವಿಶೇಷ ಅಧಿಕಾರ

  ಮನೆಯ ಕ್ಯಾಪ್ಟನ್ ಪಟ್ಟಕ್ಕಾಗಿ ನಡೆದ ಟಾಸ್ಕ್‌ನಲ್ಲಿ ಗೆದ್ದ ಶಮಂತ್ ಈ ವಾರ ಬಿಗ್ ಬಾಸ್ ಮನೆಯ ನಾಯಕತ್ವ ವಹಿಸಿಕೊಂಡಿದ್ದರು. ನಾಮಿನೇಟ್ ಆದವರ ಪೈಕಿ ಒಬ್ಬರು ಸೇಫ್ ಮಾಡಲು ಬಿಗ್ ಬಾಸ್ ಕ್ಯಾಪ್ಟನ್ ಅಧಿಕಾರ ನೀಡಿತು. ಈ ಅಧಿಕಾರ ಬಳಸಿ, ಹಿರಿಯರು, ಅವರ ಜ್ಞಾನದ ಅಗತ್ಯವಿದೆ ಎಂಬ ಕಾರಣ ನೀಡಿ ಶಂಕರ್ ಅವರನ್ನು ಶಮಂತ್ ಉಳಿಸಿಕೊಂಡರು.

  ನೇರವಾಗಿ ನಾಮಿನೇಟ್ ಆದ ನಿರ್ಮಲಾ

  ನೇರವಾಗಿ ನಾಮಿನೇಟ್ ಆದ ನಿರ್ಮಲಾ

  ಮೊದಲ ದಿನದ ಟಾಸ್ಕ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕಾಗಿ ನಿರ್ಮಲಾ ಸತ್ಯ ಅವರನ್ನು ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದರು. ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಧನುಶ್ರೀ ಹಾಗೂ ನಿರ್ಮಲಾ ಸತ್ಯ ಒಂದು ತಂಡದಲ್ಲಿ ಆಡಿದ್ದರು.

  English summary
  Bigg Boss Kannada 8: Senior Actor shankar ashwath safe from first week Elimination Process.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X