For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್ ವಿತ್ ರಮೇಶ್'ನಲ್ಲಿ ಹಾಸ್ಯ ನಟ ಚಿಕ್ಕಣ್ಣ

  |
  Weekend with Ramesh Season 4: ಮುಂದಿನ ವಾರದ ವೀಕೆಂಡ್ ವಿಥ್ ರಮೇಶ್ ನಲ್ಲಿ ಮತ್ತೊಬ್ಬ ಹಾಸ್ಯ ನಟ

  ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಮುಂದಿನ ಸಂಚಿಕೆಯ ಅತಿಥಿಯ ಹೆಸರು ಬಹಿರಂಗವಾಗಿದೆ. ಹಾಸ್ಯ ನಟ ಚಿಕ್ಕಣ್ಣ ಈ ವಾರದ ಸಾಧಕರಾಗಿದ್ದಾರೆ.

  ಜೀ 5 ಕನ್ನಡ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಮುಂದಿನ ಅತಿಥಿಯ ಬಗ್ಗೆ ಸುಳಿವು ನೀಡಲಾಗಿದೆ. ಚಿಕ್ಕಣ್ಣ ಅವರ ಫೋಟೋವನ್ನು ಸ್ವಲ್ಪ ಬ್ರಾರ್ ಮಾಡಿದ್ದು, ವೀಕ್ಷಕರಿಗೆ ಪ್ರಶ್ನೆ ಕೇಳಲಾಗಿದೆ. ಫೋಟೋ ನೋಡಿದ ತಕ್ಷಣ ಸುಲಭವಾಗಿ ಇದು ಚಿಕ್ಕಣ್ಣ ಎನ್ನುವುದು ತಿಳಿಯುತ್ತಿದೆ.

  'ಕಿರಾತಕ' ಸಿನಿಮಾದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿದ ಚಿಕ್ಕಣ್ಣ ಇಂದು ಕನ್ನಡದ ಬಹು ಬೇಡಿಕೆಯ ಕಾಮಿಡಿಯನ್ ಆಗಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ನಟ ಇದೀಗ ಸಾಧಕರ ಸೀಟ್ ಮೇಲೆ ಕುಳಿತುಕೊಂಡಿದ್ದಾರೆ. ಮುಂದೆ ಓದಿ...

  ಅಧ್ಯಕ್ಷರ ನಂತರ ಉಪಾಧ್ಯಕ್ಷ

  ಅಧ್ಯಕ್ಷರ ನಂತರ ಉಪಾಧ್ಯಕ್ಷ

  ಕಳೆದ ವಾರ ನಟ ಶರಣ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದರು. ಹಾಸ್ಯ ನಟ ನಿಂದ ನಾಯಕ ನಟನಾದ ಶರಣ್ ಕಥೆ ರೋಚಕವಾಗಿತ್ತು. ವಿಶೇಷ ಅಂದರೆ, 'ಅಧ್ಯಕ್ಷ' ಚಿತ್ರದಲ್ಲಿ ಶರಣ್ ಜೊತೆಗೆ ಉಪಾಧ್ಯಕ್ಷನಾಗಿದ್ದ ಚಿಕ್ಕಣ್ಣ ಕಾಣಿಸಿಕೊಂಡಿದ್ದು, ಈ ವಾರದ ಅತಿಥಿ ಅವರೇ ಆಗಿದ್ದಾರೆ. ಅಧ್ಯಕ್ಷರ ಬಳಿಕ ಉಪಾಧ್ಯಕ್ಷರ ದರ್ಬಾರ್ ಶುರುವಾಗಿದೆ.

  'ಕಿರಾತಕ' ಚಿತ್ರದಿಂದ ಇಲ್ಲಿಯವರೆಗೆ

  'ಕಿರಾತಕ' ಚಿತ್ರದಿಂದ ಇಲ್ಲಿಯವರೆಗೆ

  ಚಿಕ್ಕಣ್ಣ 'ಕಾಮಿಡಿ ಕಿಲಾಡಿ' ಸೇರಿದಂತೆ ಕೆಲವು ಟಿವಿ ಶೋ ಗಳನ್ನು ಮಾಡಿಕೊಂಡು ಇದ್ದರು. ಒಂದು ಕಾರ್ಯಕ್ರಮದಲ್ಲಿ ಅವರ ನಟನೆಯನ್ನು ನೋಡಿ ನಟ ಯಶ್ 'ಕಿರಾತಕ' ಸಿನಿಮಾಗೆ ಅವಕಾಶ ನೀಡಿದರು. ಅಲ್ಲಿಂದ ಶುರುವಾದ ಚಿಕ್ಕಣ್ಣ ಕೆರಿಯರ್ ನಾನ್ ಸ್ಪಾಪ್ ಆಗಿ ಇಂದಿನವರೆಗೆ ಮುಂದುವರೆಯುತ್ತಲೇ ಇದೆ.

  63ಕ್ಕೂ ಚಿತ್ರಗಳಲ್ಲಿ ನಟನೆ

  63ಕ್ಕೂ ಚಿತ್ರಗಳಲ್ಲಿ ನಟನೆ

  'ಕಿರಾತಕ' ಸಿನಿಮಾದಿಂದ ಶುರುವಾಗಿ 'ಅಮರ್' ಸಿನಿಮಾದ ವರೆಗೆ ಚಿಕ್ಕಣ್ಣ ಜನರನ್ನು ನಗಿಸುತ್ತಿದ್ದಾರೆ. ಈವರೆಗೆ 63ಕ್ಕೂ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಈ ಪೈಕಿ 'ಅಧ್ಯಕ್ಷ' 'ರಾಜಾಹುಲಿ', 'ಮಾಸ್ಟರ್ ಪೀಸ್', 'ರಾಜಕುಮಾರ', 'ಚೌಕ' 'ರಾಂಬೋ 2' ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿದೆ. ಕನ್ನಡದ ಬಹುತೇಕ ಸ್ಟಾರ್ ಗಳ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದಾರೆ.

  ನಿಮ್ಮ ಅಭಿಪ್ರಾಯ ಏನು?

  ನಿಮ್ಮ ಅಭಿಪ್ರಾಯ ಏನು?

  ಹಾಸ್ಯ ನಟ ಚಿಕ್ಕಣ್ಣ ಈ ವಾರದ 'ವೀಕೆಂಡ್ ವಿತ್ ರಮೇಶ್' ಅತಿಥಿಯಾಗಿದ್ದಾರೆ. ಸಾಧರ ಸೀಟ್ ಮೇಲೆ ಚಿಕ್ಕಣ್ಣ ಕುಳಿತಿದ್ದು, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕೆಳಗಿನ ಕಾಮೆಂಟ್ಸ್ ಬಾಕ್ಸ್ ಮೂಲಕ ನಮಗೆ ತಿಳಿಸಿ.

  English summary
  Kannada comedy actor Chikanna will the next guest of Zee Kannada channel's Weekend With Ramesh 4. Chikanna acted more than 63 movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X