ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾಶ್ರೀಗೆ ಮಗು, ಚಿತ್ರ ಹಂಚಿಕೊಂಡ ಪೋಷಕರು?

By ಪೂರ್ವ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರದೇ ಆದ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಹೌದು ರಿಯಾಲಿಟಿ ಶೋ ಮೂಲಕ ಅಥವಾ ಕಾಮಿಡಿ ಶೋ ಮೂಲಕ ಅಥವ ಸಂಗೀತ ಲೋಕದಲ್ಲಿ ಅವರದೇ ಆದ ಛಾಪು ಮೂಡಿಸಿರುವ ಅದೆಷ್ಟೋ ದೈತ್ಯಪ್ರತಿಭೆಗಳು ನಮ್ಮ ಕನ್ನಡದಲ್ಲಿ ಹೊರ ಹೊಮ್ಮಿದ್ದಾರೆ.

ಕನ್ನಡದಲ್ಲಿ ರಿಯಾಲಿಟಿ ಶೋ ಮೂಲಕವೇ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಾಲಿನಲ್ಲಿ ಬರುವ ಒಂದು ರಿಯಾಲಿಟಿ ಶೋ ಎಂದರೆ ಅದು ಕನ್ನಡದ ಕಾಮಿಡಿ ಕಿಲಾಡಿಗಳು. ಸೀಸನ್ ಒಂದರಲಿ ಗೋವಿಂದೇ ಗೌಡ, ದಿವ್ಯಶ್ರೀ, ಸಂಜು ಬಸಯ್ಯ, ಕಾರ್ತಿಕ ನಯನಾ, ಜೊತೆಗೆ ಶಿವರಾಜ್ ಕೆ ಆರ್ ಪೇಟೆ ಹಾಗೆ ಸಾಕಷ್ಟು ಕಲಾವಿದರು ಈ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕವೇ ಪ್ರಖ್ಯಾತಿ ಹೊಂದಿದ್ದವರು.

'ಕಾಮಿಡಿ ಕಿಲಾಡಿಗಳು' ಶೋನಿಂದಲೇ ಜನಪ್ರಿಯರಾಗಿರುವ ಗೋವಿಂದೇಗೌಡ ಈ ಹಿಂದೆ 'ಜಂಥರ್ ಮಂಥರ್' ಅನ್ನೋ ಸಿನಿಮಾ ಮಾಡಿದ್ದಾರೆ. ಇದರಲ್ಲಿ 'ಕಾಮಿಡಿ ಕಿಲಾಡಿಗಳು' ಶೋನ ಬಹುತೇಕ ಕಲಾವಿದರು ನಟಿಸಿದ್ದರು. 'ಕೆಜಿಎಫ್' ಸಿನಿಮಾದಲ್ಲಿನ ಅವರ ಪಾತ್ರ ಎಲ್ಲರ ಗಮನಸೆಳೆದಿತ್ತು. ಸದ್ಯ ಅನೇಕ ಕನ್ನಡ ಸಿನಿಮಾಗಳಲ್ಲಿ ಗೋವಿಂದೇಗೌಡ ನಟಿಸುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಗೋವಿಂದೇ ಗೌಡ ಮತ್ತು ದಿವ್ಯಶ್ರೀ. ಇಬ್ಬರೂ ಸ್ಪರ್ಧಿಗಳಾಗಿ ಜರ್ನಿ ಆರಂಭಿಸಿ, ಸ್ನೇಹಿತರಾಗಿ ಆನಂತರ ಪೋಷಕರ ಒಪ್ಪಿಗೆ ಪಡೆದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Comedy kiladigalu Govinde Gowda and Divya welcomed first baby

ಕಾಮಿಡಿ ಕಿಲಾಡಿಗಳು ಶೋ ಮೂಲಕವೇ ವೇದಿಕೆ ಹತ್ತಿದ ಗೋವಿಂದೇಗೌಡ ದಿವ್ಯಶ್ರೀ ಅವರ ನಡುವೆ ಆರಂಭದಲ್ಲಿ ಇವರಿಬ್ಬರ ನಡುವೆ ಸ್ನೇಹ ಬೆಳೆಯಿತು. ನಂತರ ಆ ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ಒಪ್ಪಿಗೆ ಪಡೆದು 2019ರಲ್ಲಿ ಸರಳವಾಗಿ ದಿವ್ಯಶ್ರೀ ಗೋವಿಂದಗೌಡ ಮದುವೆಯನ್ನು ಸಹ ಆಗಿದ್ದರು. ದಿವ್ಯಶ್ರೀ ಮತ್ತು ಗೋವಿಂದೆ ಗೌಡ ಜೋಡಿ ಪೋಷಕರಾಗುತ್ತಿರುವ ಸುದ್ದಿ ಕೇಳಿಬಂದಿತ್ತು. ನಂತರ ದಿವ್ಯಶ್ರೀ ಅವರ ಸೀಮಂತ ಕಾರ್ಯವನ್ನು ಕೂಡ ಅವರ ಮನೆಯವರು ಭರ್ಜರಿಯಾಗಿ ಮಾಡಿದ್ದರು. ಬಳಿಕ ಹೆಣ್ಣುಮಗುವಿಗೆ ಜನ್ಮ ನೀಡಿರುವ ದಿವ್ಯಶ್ರೀ ಅವರು ಆ ಮಗುವಿನ ಫೋಟೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗುವಿನ ಚಿತ್ರ ಹಂಚಿಕೊಂಡಿರುವ ದಿವ್ಯಾಶ್ರೀ, ಮಗುವಿನ ಜೊತೆ ಯುಗಾದಿ ಹಬ್ಬ ಆಚರಿಸುತ್ತಿದ್ದೇವೆ ಎಂದು ಸಕ್ಕತ್ ಖುಷಿಯಿಂದಲೇ ಬರೆದುಕೊಂಡಿದ್ದಾರೆ. ನಟ ಗೋವಿಂದೇಗೌಡ ಮತ್ತು ದಿವ್ಯ ಅವರು ಈಗಾಗಲೇ ದೊಡ್ಡ ಪರದೆಯಲ್ಲಿ ನಟಿಸುತ್ತಿದ್ದು, ಆ ಯಶಸ್ವಿಯ ಜೊತೆ ಅವರಿಗೆ ಇದೀಗ ಹೆಣ್ಣು ಮಗು ಕೂಡ ಜನನ ಆಗಿದೆ. ಎಲ್ಲರೂ ಕೂಡ ವಿಷಯ ತಿಳಿದು ಶುಭಕೋರಿದ್ದಾರೆ.

More from Filmibeat

English summary
Comedy kiladigalu Govinde Gowda and Divya welcomed first baby. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X