For Quick Alerts
  ALLOW NOTIFICATIONS  
  For Daily Alerts

  ಮೈತ್ರಿಯಾ ಗೌಡ ಈಗ ಕಿರುತೆರೆಯ 'ಡಾನ್ಸಿಂಗ್ ಸ್ಟಾರ್'

  By Harshitha
  |

  ನಟಿಸಿದ ಸಿನಿಮಾಗಳು ಒಂದೋ ಎರಡೋ...ಆದರೂ ಇಡೀ ಗಾಂಧಿನಗರ ಮತ್ತು ಕರ್ನಾಟಕದ ಮೂಲೆ ಮೂಲೆಯಲ್ಲಿ ಏಕ್ದಂ ಫೇಮಸ್ ಆಗಿರುವ ನಟೀಮಣಿ ಮೈತ್ರಿಯಾ ಗೌಡ.

  ''ಕೇಂದ್ರ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ನನ್ನ ಗಂಡ'' ಅಂತ್ಹೇಳಿ ಎಲ್ಲರ ಮನೆ ಮಾತಾಗಿದ್ದ ಮೈತ್ರಿಯಾ ಗೌಡ, ಇದೀಗ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಬೆಳ್ಳಿಪರದೆ ಬಿಟ್ಟು ಸಣ್ಣ ಪರದೆ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಮಂಡ್ಯದ ಈ ಚೆಲುವೆ.

  ನೀವೆಲ್ಲಾ ಈ ಹಿಂದೆ ಊಹಿಸಿದಂತೆ, 'ಬಿಗ್ ಬಾಸ್' ಮುಂದಿನ ಆವೃತ್ತಿಗೆ ಮೈತ್ರಿಯಾ ಸ್ಪರ್ಧಿಸುತ್ತಿಲ್ಲ. ಬದಲಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಜನಪ್ರಿಯತೆ ಪಡೆದಿರುವ ಡಾನ್ಸಿಂಗ್ ಸ್ಟಾರ್ ಕಾರ್ಯಕ್ರಮದ 2 ನೇ ಆವೃತ್ತಿಯಲ್ಲಿ ಸ್ಪರ್ಧಾಳು ಆಗಿದ್ದಾರೆ ಮೈತ್ರಿಯಾ ಗೌಡ. [ಯಾರೀ ಮೈತ್ರಿಯಾ ಗೌಡ? ರಿಯಲ್ ಕಹಾನಿ]

  ಮೊದಲೇ ಮೈತ್ರಿಯಾ ಗೌಡ ಪಾರ್ಟಿ ಫ್ರೀಕ್. ಹೀಗಿರುವಾಗ ಮೈತ್ರಿಯಾ ಡಾನ್ಸ್ ಬಗ್ಗೆ ಕೆಮ್ಮಂಗಿರುತ್ತಾ ಹೇಳಿ. ಅದಾಗಲೇ ಅನೇಕ ಬಾರಿ ನೃತ್ಯ ಪ್ರದರ್ಶನ ನೀಡಿರುವ ಮೈತ್ರಿಯಾ ಮತ್ತಷ್ಟು ಜನಪ್ರಿಯತೆ ಪಡೆಯುವುದಕ್ಕೆ ಇದು ಒಳ್ಳೆಯ ವೇದಿಕೆ ಅಷ್ಟೆ. [ಗೌಡರ ಪದಚ್ಯುತಿಗೊಳಿಸಲು ರಾಷ್ಟ್ರಪತಿಗೆ ಮೈತ್ರಿಯಾ ಪತ್ರ]

  Dancing Star-2

  ಮೈತ್ರಿಯಾಗೆ ಚಾಲೆಂಜ್ ಹಾಕುವುದಕ್ಕೆ ಇರುವ ತಾರಾ ಬಳಗದ ಪಟ್ಟಿ ಕೂಡ ದೊಡ್ಡದಿದೆ. ಅದ್ರಲ್ಲಿ ಮೊದಲಿಗರು ಚಂದನವನದ ಚಂದ್ರಿಕೆ ಚಂದ್ರಿಕಾ..! ಈ ಹಿಂದೆ ಡಾನ್ಸ್ ರಿಯಾಲಿಟಿ ಶೋವೊಂದಕ್ಕೆ ತೀರ್ಪುಗಾರರಾಗಿದ್ದ ಚಂದ್ರಿಕಾ ಇದೀಗ ಖುದ್ದು ಸ್ಪರ್ಧೆಗೆ ಇಳಿದಿದ್ದಾರೆ. [ಐಟಂ ಸಾಂಗ್ ಮೂಲಕ ಚಂದ್ರಿಕಾ ಸೆಕೆಂಡ್ ಇನ್ನಿಂಗ್ಸ್]

  ಹಾಗೆ, ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಬಿಗ್ ಸ್ಕ್ರೀನ್ ನ ಈ ತಾರೆಯರ ಜೊತೆ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ, ಸುಕ್ರಿತಾ ಸೇರಿದಂತೆ ಕಿರುತೆರೆಯ ಸ್ಟಾರ್ ಗಳೂ 'ಡಾನ್ಸಿಂಗ್ ಸ್ಟಾರ್' ಆಗುವುದಕ್ಕೆ ಸೆಣಸಾಡಲಿದ್ದಾರೆ.

  ಸದ್ಯಕ್ಕೆ ಸ್ಪರ್ಧಿಗಳ ಪರಿಚಯವಾಗುತ್ತಿದೆ. ಅಷ್ಟು ಬಿಟ್ಟರೆ, ಅವರನ್ನ ತಿದ್ದಿ ತೀಡುವ ಮಾಸ್ಟರ್ ಗಳು ಇನ್ನೂ ಸಸ್ಪೆನ್ಸ್ ಲಿಸ್ಟ್ ನಲ್ಲಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ 'ಡಾನ್ಸಿಂಗ್ ಸ್ಟಾರ್-2' ಕಾರ್ಯಕ್ರಮಕ್ಕೆ ತೀರ್ಪುಗಾರರಾಗುತ್ತಾರೆ ಅನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. [ಕಿರುತೆರೆಗೆ ಅಡಿಯಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್]

  ಕಳೆದ ಬಾರಿ ಕಾಳಿ ಸ್ವಾಮಿ ಮತ್ತು ನರ್ಸ್ ಜಯಲಕ್ಷ್ಮೀ ಭಾಗವಹಿಸಿ, 'ಡಾನ್ಸಿಂಗ್ ಸ್ಟಾರ್'ನಲ್ಲಿ ಸುದ್ದಿ ಮಾಡಿದ್ದರು. ಈಗ ವಿವಾದಾತ್ಮಕ ನಟಿ ಮೈತ್ರಿಯಾ ಗೌಡ ಸರದಿ. ಫೆಬ್ರವರಿ 7 ರಿಂದ ಎಲ್ಲರ ಡ್ಯಾನ್ಸ್ ಮಸ್ತಿ ನಿಮ್ಮ ಕಣ್ಣಮುಂದೆ ಬರಲಿದೆ. (ಫಿಲ್ಮಿಬೀಟ್ ಕನ್ನಡ)

  English summary
  Controversial Kannada Actress Mythriya Gowda is taking part in ETV Kannada's most Popular Dance Reality Show, Dancing Star-2.
  Monday, January 26, 2015, 17:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X