»   » 'ದಸರಾ ಹಬ್ಬ'ದಲ್ಲಿ ಸುವರ್ಣ ಸ್ಟಾರ್ಸ್ ಗಳ ಮೋಜು-ಮಸ್ತಿ

'ದಸರಾ ಹಬ್ಬ'ದಲ್ಲಿ ಸುವರ್ಣ ಸ್ಟಾರ್ಸ್ ಗಳ ಮೋಜು-ಮಸ್ತಿ

Posted By:
Subscribe to Filmibeat Kannada

'ದಸರಾ' ಅನ್ನೋದು ವಿಶೇಷವಾಗಿ ನವ ದೇವತೆಗಳಿಗೆ ಮಿಸಲಾಗಿರುವ ಹಬ್ಬ. ಅಂತೆಯೇ, 'ನವರಾತ್ರಿ' ಎಂಬ ಥೀಮ್ ಇಟ್ಟುಕೊಂಡಿರುವ ಈ ಮಹೋತ್ಸವದಲ್ಲಿ, ಸ್ಟಾರ್ ಸುವರ್ಣ ವಾಹಿನಿಯ ಮಹಿಳಾ ಪಾತ್ರಧಾರಿಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಈ ಸು-ಸಂದರ್ಭದಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಎಲ್ಲಾ ಕಲಾವಿದರು ಭಾಗವಹಿಸಿ, ವೀಕ್ಷಕರಿಗೆ ಮನರಂಜನೆಯನ್ನು ನೀಡಲಿದ್ದಾರೆ.

'ಅವನು ಮತ್ತು ಶ್ರಾವಣಿ'ಯ ನಾಯಕಿ ಶ್ರಾವಣಿ, 'ಜಸ್ಟ್ ಮಾತ್ ಮಾತಲ್ಲಿ'ಯ ಸಿಂಧು, 'ಅಮ್ಮ' ಧಾರಾವಾಹಿಯ ಶಾಲಿನಿ, ದುರ್ಗಾ, ಅಮೃತ ಮತ್ತು ವರ್ಷಾ ಈ ಮಹೋತ್ಸವಕ್ಕೆ ಮೆರಗನ್ನು ನೀಡಲಿದ್ದಾರೆ.[ಈ ವಾರದ ವಿಶೇಷ: 'ಮಹಾದೇವ'ನಿಂದ ಚಿತ್ರಾಸುರನ ವಧೆ]

Dasara Special: Suvarna Serial Star's 'Suvarna Mahostava'

ಈ ದಸರಾ ವೇದಿಕೆಯಲ್ಲಿ ಸ್ಟಾರ್ ಸುವರ್ಣಕ್ಕೆ ಕೀರ್ತಿಯಂತಿರುವ ಶಕುಂತಲಾದೇವಿ (ಹೇಮಾ ಚೌಧರಿ), ಜಯಕ್ಕ (ಜಯಲಕ್ಷ್ಮೀ) ಮತ್ತು ಸುಕನ್ಯ (ಕೌಸಲ್ಯ) ಅವರಿಗೆ ಸ್ಟಾರ್ ಸುವರ್ಣವಾಹಿನಿಯ ಹೆಮ್ಮೆಯ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಜೊತೆಗೆ ಇನ್ನಷ್ಟು ವಿಶೇಷ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ನೀಡಲಾಗುವುದು.

ಸೂರ್ಯ-ಶ್ರಾವಣಿ, ಯಶ್-ಸಿಂಧು, ಚರಿತ್-ಅನುಷಾ, ಅಮೃತ-ಅಜಯ್ ಜೋಡಿಗಳಿಂದ ರೋಮ್ಯಾಂಟಿಕ್ ಪಾರ್ಪಾಮೆನ್ಸ್ ಗಳು ಈ ವೇದಿಕೆಯಲ್ಲಿ ಎಲ್ಲರಿಗೂ ಮುದ ನೀಡಲಿವೆ.['ಕನೆಕ್ಷನ್'ನಲ್ಲಿ ಕನೆಕ್ಟ್ ಆದ ಗಾನ ಕೋಗಿಲೆಗಳು & ಕಿರುತೆರೆ ಹಕ್ಕಿಗಳು]

Dasara Special: Suvarna Serial Star's 'Suvarna Mahostava'

ಅಲ್ಲದೆ 'ಡ್ಯಾನ್ಸ್ ಡ್ಯಾನ್ಸ್'ನ ವಿಜೇತ ತೌಶೀರ್ ಮತ್ತು ಮಕ್ಕಳು ವಿಶೇಷ ನೃತ್ಯವನ್ನು ಮಾಡಲಿದ್ದಾರೆ. ಹಾಗೆ ಅಭಿಮಾನಿಗಳ ಜೊತೆ ಕಿರುತೆರೆ ನಟ ನಟಿಯರ ಪರಸ್ಪರ ಸಂಭಾಷಣೆಯೂ ನಡೆಯಲಿದೆ.

ಒಂದಿಷ್ಟು ಮೋಜು, ಒಂದಿಷ್ಟು ಮಸ್ತಿ ಜೊತೆಗೆ ಸ್ಟಾರ್ ಗಳ ಕಲರವ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ (ಸೆಪ್ಟಂಬರ್ 22) ದಂದು ಸಂಜೆ 6 ಗಂಟೆಗೆ ನಡೆಯಬೇಕಿತ್ತು. ಆದರೆ ಕಾವೇರಿ ವಿವಾದದಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

English summary
Dasara Special: Suvarna Serial Star's 'Suvarna Mahostava' on September 22, Vasanth Nagar Ambedkar Bhavan, Bengaluru, At 6 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada