»   » 'ಗುರುಪ್ರಸಾದ್ ಅಂದರೆ ಭಯ ಜಾಸ್ತಿ' ಹೀಗೆ ಹೇಳಿದ್ದು ಧನಂಜಯ್

'ಗುರುಪ್ರಸಾದ್ ಅಂದರೆ ಭಯ ಜಾಸ್ತಿ' ಹೀಗೆ ಹೇಳಿದ್ದು ಧನಂಜಯ್

Posted By:
Subscribe to Filmibeat Kannada

ನಿರ್ದೇಶಕ 'ಮಠ' ಗುರುಪ್ರಸಾದ್ ಮತ್ತು ನಟ ಧನಂಜಯ್ ಅಪ್ಪಟ್ಟ ಗುರು - ಶಿಷ್ಯರಾಗಿದ್ದರು. 'ಎರಡನೇ ಸಲ' ಸಿನಿಮಾದ ಸಮಯದಲ್ಲಿ ನಡೆದ ಘಟನೆಗಳಿಂದ ಅವರ ಸಂಬಂಧ ಕೆಟ್ಟು ಹೋಗಿತ್ತು. ಗುರು ಶಿಷ್ಯ ಇಬ್ಬರ ಕದನದ ನಂತರ ಒಬ್ಬರ ಮುಖ ಒಬ್ಬರು ನೋಡಿರಲಿಲ್ಲ. ಆದರೆ ಈಗ ಮತ್ತೆ ಇಬ್ಬರು ಒಬ್ಬರ ಮಾತಿಗೆ ಒಬ್ಬರು ಟಾಂಗ್ ನೀಡಿದ್ದರು.

'ಟಗರು' ಸಿನಿಮಾದ ಡೈಲಾಗ್ ಒಂದರಲ್ಲಿ ಧನಂಜಯ್ ಪರೋಕ್ಷವಾಗಿ ಗುರುಪ್ರಸಾದ್ ಗೆ ಟಾಂಗ್ ನೀಡಿದ್ದಾರೆ ಎಂದು ಅನಿಸಿತ್ತು. ಅದಕ್ಕೆ ಗುರುಪ್ರಸಾದ್ ಕೂಡ ಪ್ರತಿಕ್ರಿಯೆ ನೀಡಿದ್ದು, ಅದು ಒಂದು ಸಾಯುವ ಪಾತ್ರದ ಬಾಯಿಂದ ಬಂದ ಮಾತು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು. ಅದೆಲ್ಲದರ ನಂತರ ಈಗ 'ಗುರುಪ್ರಸಾದ್ ಅಂದರೆ ಜಾಸ್ತಿ ಭಯ' ಎಂದು ಧನಂಜಯ್ ಹೇಳಿದ್ದಾರೆ. ಅದು ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಮುಂದೆ ಓದಿ..

'ಟಗರು' ಡೈಲಾಗ್ ನಿಂದ ಗುರು - ಶಿಷ್ಯರ ಮಾತಿನ ಸಮರ ಮತ್ತೆ ಶುರು

ನಿರ್ದೇಶಕರ ಬಗ್ಗೆ ಹೇಳಿ

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಕನ್ನಡದ ಈ ನಿರ್ದೇಶಕರ ಬಗ್ಗೆ ಒಂದು ಸಾಲಿನಲ್ಲಿ ಹೇಳಿ ಎಂದು ಪ್ರಶ್ನೆ ಹೇಳಿದರು. ಧನಂಜಯ್ ಜೊತೆಗೆ ಸಿನಿಮಾ ಮಾಡಿದ ಕೆಲವು ನಿರ್ದೇಶಕರ ಹೆಸರನ್ನು ಹೇಳಿದರು.

ಗುರುಪ್ರಸಾದ್ ಅಂದರೆ ಜಾಸ್ತಿ ಭಯ

ಆಗ ಗುರುಪ್ರಸಾದ್ ಬಗ್ಗೆ ಪ್ರಶ್ನೆ ಕೇಳಿದಾಗ ಧನಂಜಯ್ ಮೊದಲು ಏನು ಹೇಳಲಿ ಎಂದು ನಕ್ಕರು. ಆಮೇಲೆ 'ಗುರುಪ್ರಸಾದ್ ಅಂದರೆ ಭಯ ಜಾಸ್ತಿ' ಎಂದರು. ಆದರೆ ಧನಂಜಯ್ ಹೇಳಿದ ಉತ್ತರ ಗುರುಪ್ರಸಾದ್ ಅವರಿಗೆ ಭಯ ಜಾಸ್ತಿ ಅಂತಲೋ ಅಧವಾ ಧನಂಜಯ್ ಗೆ ಗುರುಪ್ರಸಾದ್ ಕಂಡರೆ ಭಯ ಅಂತಲೋ ಎನ್ನುವ ಗೊಂದಲ ಮೂಡಿಸಿತು.

'ಡಾಲಿ' ಧನಂಜಯ್ ಬಗ್ಗೆ ಕೇಳಿದ್ರೆ ಗುರುಪ್ರಸಾದ್ ಹೀಗೆ ಹೇಳಿದ್ದಾರೆ !

ಗುಡ್ ಅಟ್ ಡೈಲಾಗ್ಸ್

ಶಿವರಾಜ್ ಕುಮಾರ್ ನಿರ್ದೇಶಕರ ಹೆಸರನ್ನು ಮುಂದುವರೆಸಿದರು. ಪವನ್ ಒಡೆಯರ್ ಅಂತ ಹೇಳಿದಾಗ ಧನಂಜಯ್ ಅವರು 'ಗುಡ್ ಅಟ್ ಡೈಲಾಗ್ಸ್' ಎಂದರು. ಪವನ್ ಒಳ್ಳೆಯ ಡೈಲಾಗ್ ಬರೆಯುತ್ತಾರೆ ಎನ್ನುವುದು ಧನಂಜಯ್ ಅಭಿಪ್ರಾಯವಾಗಿದೆ. ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಸಿನಿಮಾದಲ್ಲಿ ಧನಂಜಯ್ ನಟಿಸಿದ್ದಾರೆ.

ಎಪಿ ಅರ್ಜುನ್

ನಿರ್ದೇಶಕ ಎ.ಪಿ.ಅರ್ಜುನ್ ತುಂಬ ಕೋಪಿಸ್ಟ ಅಂತ ನಟ ಧನಂಜಯ್ ಹೇಳಿದ್ದಾರೆ. ಧನಂಜಯ್ ಮತ್ತು ಶೃತಿ ಹರಿಹರನ್ ಕಾಂಬಿನೇಶನ್ ನಲ್ಲಿ ಬಂದ 'ರಾಟೆ' ಸಿನಿಮಾವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದಾರೆ.

ಪ್ರೀತಮ್ ಗುಬ್ಬಿ

ಧನಂಜಯ್ 'ನಿರ್ದೇಶಕ ಪ್ರೀತಮ್ ಗುಬ್ಬಿ ಈಸಿ ಗೋಯಿಂಗ್ ನಿರ್ದೇಶಕ ಎಂದು ಹೇಳಿದರು. ಪ್ರೀತಮ್ ಗುಬ್ಬಿ ನಿರ್ದೇಶನದ 'ಬಾಕ್ಸರ್' ಸಿನಿಮಾದಲ್ಲಿ ಧನಂಜಯ್ ನಟಿಸಿದ್ದಾರೆ.

ಸೂರಿ

ಧನಂಜಯ್ ಇತ್ತೀಚಿಗಷ್ಟೆ ನಿರ್ದೇಶಕ ಸೂರಿ ಜೊತೆಗೆ ಕೆಲಸ ಮಾಡಿದ್ದಾರೆ. ಸೂರಿ ಸೃಷ್ಟಿ ಮಾಡಿದ 'ಟಗರು' ಸಿನಿಮಾದ ಡಾಲಿ ಪಾತ್ರ ಧನಂಜಯ್ ಗೆ ದೊಡ್ಡ ಹೆಸರು ತಂದು ಕೊಟ್ಟಿದೆ. ಸೋ, ಧನಂಜಯ್ ಪ್ರಕಾರ ಸೂರಿ ಒಬ್ಬ ವರ್ಸಟೈಲ್ ಡೈರೆಕ್ಟರ್ ಅಂತೆ. ಅವರು ಎಲ್ಲ ರೀತಿಯ ಸಿನಿಮಾಗಳನ್ನು ಮಾಡಬಹುದಂತೆ.

English summary
Actor Dhananjay spoke about kannada directors in Star Suvarna's new show 'No1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X