For Quick Alerts
  ALLOW NOTIFICATIONS  
  For Daily Alerts

  ಅತ್ಯಾಚಾರ ಆರೋಪಿ ನಟನ ಬೆಂಬಲಕ್ಕೆ ನಟಿ, ನಿರ್ಮಾಪಕಿ

  |

  ಕಿರುತೆರೆ ನಟ ಪರ್ಲ್ ವಿ ಪುರಿ ವಿರುದ್ಧ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಮಾಡಲಾಗಿದೆ. ಪುರಿಯನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

  ಹಲವು ವರ್ಷಗಳಿಂದ ಕಿರುತೆರೆಯಲ್ಲಿ ನಟಿಸುತ್ತಿರುವ ವಿ ಪುರಿ ಹಿಂದಿ ಧಾರಾವಾಹಿ ವಲಯದಲ್ಲಿ ಜನಪ್ರಿಯ ನಟ. ಹಲವಾರು ಧಾರಾವಾಹಿಗಳು, ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ಮೇಲೆ ಹೀನ ಆರೋಪ ಮಾಡಿ ಜೈಲಿಗೆ ಕಳುಹಿಸಲಾಗಿದೆ. ಆದರೆ ಪುರಿ ಜೊತೆಗೆ ಕೆಲಸ ಮಾಡಿರುವ ನಟಿ, ನಿರ್ಮಾಪಕಿ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.

  ವಿ ಪುರಿಗೆ ಕೆಲಸ ಕೊಟ್ಟಿದ್ದ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ 'ಸಂತ್ರಸ್ತೆಯ ತಾಯಿಯೇ ನನಗೆ ಹೇಳಿದ್ದಾಳೆ ಪುರಿಯದ್ದು ಏನೂ ತಪ್ಪಿಲ್ಲ ಎಂದು' ಎಂದಿದ್ದಾರೆ.

  ಈ ಬಗ್ಗೆ ಪೋಸ್ಟ್ ಬರೆದಿರುವ ಏಕ್ತಾ ಕಪೂರ್, 'ಇಬ್ಬರ ವ್ಯಕ್ತಿಗಳ ಜಗಳದಲ್ಲಿ ಮೂರನೇ ವ್ಯಕ್ತಿಯನ್ನು ಬಲವಂತದ ಬಲಿ ಪಡೆಯಲಾಗುತ್ತಿದೆ. ಸಂತ್ರಸ್ತೆಯ ತಾಯಿಯೇ ನನಗೆ ಹೇಳಿದ್ದಾಳೆ, ಆಕೆಯ ಪತಿ ಉದ್ದೇಶಪೂರ್ವಕವಾಗಿ ಪುರಿ ಹೆಸರು ಎಳೆದು ತಂದಿದ್ದಾನೆಂದು' ಎಂದಿದ್ದಾರೆ.

  ಚಿತ್ರೀಕರಣದಲ್ಲಿ ತೊಡಗಿದ್ದ ಮಹಿಳೆ ಆಕೆಯ ಮಗಳನ್ನು ಸೆಟ್‌ನಲ್ಲಿ ಬಿಟ್ಟಿದ್ದಾಗ ವಿ ಪುರಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಮಗುವಿನ ತಂದೆ-ತಾಯಿಯ ನಡುವೆ ಮಗುವಿನ ವಿಷಯಕ್ಕೆ ಪರಸ್ಪರ ಜಗಳಗಳು ನಡೆಯುತ್ತಿದ್ದು ಅದೇ ಕಾರಣಕ್ಕೆ ಮಗುವಿನ ತಂದೆ ಉದ್ದೇಶಪೂರ್ವಕವಾಗಿ ಈ ದೂರು ನೀಡಿದ್ದಾರೆ ಎನ್ನಲಾಗಿದೆ.

  ನಟಿ ಅಸ್ಮಿತಾ ಸೂದ್ ಸಹ ಪುರಿಗೆ ಬೆಂಬಲ ವ್ಯಕ್ತಪಡಿಸಿದ್ದು, 'ನಟ ಪರ್ಲ್ ವಿ ಪುರಿ ಜೊತೆಗೆ 2015 ರಿಂದಲೂ ನಾನು ಕೆಲಸ ಮಾಡಿದ್ದೇನೆ. ಆತ ಆ ರೀತಿಯ ವ್ಯಕ್ತಿ ಅಲ್ಲ. ಸೂಕ್ತವಾಗಿ ತನಿಖೆ ನಡೆದು ಸತ್ಯ ಹೊರಗೆ ಬರಬೇಕು' ಎಂದಿದ್ದಾರೆ.

  ಏಕ್ತಾ ಕಪೂರ್, ಅಸ್ಮಿತಾ ಸೂದ್ ಹೊರತುಪಡಿಸಿ ಅನಿತಾ ಹಂಸಾನಂದಾನಿ, ಕ್ರಿಸ್ಟರ್ ಡಿ ಸೋಜಾ ಇನ್ನೂ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

  ಆದರೆ ಏಕ್ತಾ ಕಪೂರ್ ಸಾಮಾಜಿಕ ಜಾಲತಾಣ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ವಾಸಾಯಿ ಡಿಸಿಪಿ, ಪರ್ಲ್ ವಿ ಪುರಿ ವಿರುದ್ಧ ಮಾಡಿರುವ ಆರೋಪಗಳು ಸುಳ್ಳಲ್ಲ. ನಮ್ಮ ತನಿಖೆಯಲ್ಲಿ ಆತನ ವಿರುದ್ಧ ಸಾಕ್ಷ್ಯಗಳು ದೊರೆತಿವೆ ಹಾಗಾಗಿ ಆತನನ್ನು ಬಂಧಿಸಿದ್ದೇವೆ' ಎಂದಿದ್ದಾರೆ.

  English summary
  Producer Ekta Kapoor and many actress support actor Pearl V Puri who was arrested in minor rape case.
  Sunday, June 6, 2021, 10:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X