Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರೀಕರಣದ ಸೆಟ್‌ನಲ್ಲಿಯೇ ಜನಪ್ರಿಯ ನಟಿ ಸಾವು!
ಸಿನಿಮಾ ಸೆಟ್‌ನಲ್ಲಿಯೇ ಜನಪ್ರಿಯ ನಟಿಯೊಬ್ಬಾರು ಹಠಾತ್ ನಿಧನ ಹೊಂದಿದ್ದು, ನಟಿಯದ್ದು ಆತ್ಮಹತ್ಯೆಯೊ ಕೊಲೆಯೋ ಎಂಬ ಅನುಮಾನ ಶುರುವಾಗಿದೆ.
ಸಬ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಅಲಿ ಬಾಬಾ ದಾಸ್ತಾನ್ ಎ ಕಾಬೂಲ್' ಹೆಸರಿನ ಜನಪ್ರಿಯ ಶೋನಲ್ಲಿ ಕಾಣಿಸಿಕೊಂಡಿದ್ದ ನಟಿ ತುನಿಶಾ ಶರ್ಮಾ ಅದೇ ಶೋನ ಸೆಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಟುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ನಟಿಯದ್ದು ಕೊಲೆ ಎಂಬ ಅನುಮಾನವೂ ಇದೆ.
ಮುಂಬೈನ ವಾಸವಿಯ ಸ್ಟುಡಿಯೋ ಒಂದರಲ್ಲಿ ತುನಿಶಾ ಶರ್ಮಾ ಶನಿವಾರ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಶೂಟಿಂಗ್ ನಡೆಯುವ ವೇಳೆ ಮಧ್ಯೆ ಬ್ರೇಕ್‌ಗೆಂದು ತುನಿಶಾ ಶರ್ಮಾ ಹೋಗಿದ್ದರು. ಶೌಚಾಲಯಕ್ಕೆ ಹೋಗಿದ್ದ ತುನಿಶಾ ಶರ್ಮಾರ ಮೃತದೇಹ ಅದೇ ಶೌಚಾಲಯದಲ್ಲಿ ಪತ್ತೆಯಾಗಿದೆ.
ತುನಿಶಾ ಶರ್ಮಾರದ್ದು ಆತ್ಮಹತ್ಯೆಯೊ ಅಥವಾ ಕೊನೆಯೊ ಎಂಬ ಬಗ್ಗೆ ಖಾತ್ರಿ ಇಲ್ಲ. ಪೊಲೀಸರು ಟುನಿಶಾರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ವರದಿ ಬಂದ ಬಳಿಕವಷ್ಟೆ ಸಾವಿನ ನಿಖರ ಕಾರಣ ತಿಳಿಯಲಿದೆ.
ತುನಿಶಾ ಶರ್ಮಾ ಮೊದಲಿಗೆ ಸೋನಿ ಟಿವಿಯಲ್ಲಿ ಪ್ರಸಾರವಾದ 'ಮಹಾರಾಣ ಪ್ರತಾಪ್' ಧಾರಾವಾಹಿಯೊಂದರ ಮೂಲಕ ನಟನೆ ಆರಂಭಿಸಿದರು. ಕಲರ್ಸ್ ಟಿವಿಯಲ್ಲಿ ಪ್ರಸಾರವಾದ 'ಚಕ್ರವರ್ತಿ ಅಶೋಕ್ ಸಾಮ್ರಾಟ್' ಧಾರಾವಾಹಿಯಲ್ಲಿ ರಾಣಿ ಅಹಿಂಕರ ಪಾತ್ರದಲ್ಲಿ ನಟಿಸಿದರು. 'ಫಿತೂರ್' ಸಿನಿಮಾದಲ್ಲಿ ಕತ್ರಿನಾ ಕೈಫ್‌ರ ಯೌವ್ವನದ ಪಾತ್ರದಲ್ಲಿ ನಟಿಸಿದರು. 'ಭಾರ್ ಭಾರ್ ದೇಖೋ', 'ಮಿನಿ ಕಹಾನಿ 2' ಸಿನಿಮಾಗಳಲ್ಲಿ ನಟಿಸಿದರು. ಇನ್ನೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಟುನಿಶಾ ಶರ್ಮಾ, ಪ್ರಸ್ತುತ ಸಬ್‌ನ ಶೋ ಹಾಗೂ ಕಲರ್ಸ್‌ನ 'ಇಂಟರ್ನೆಟ್ ವಾಲಾ ಲವ್' ಧಾರಾವಾಹಿಯಲ್ಲಿ ನಟಿಸುತ್ತಿದ್ದರು.
ತುನಿಶಾ ಶರ್ಮಾ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮುಂಬೈ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ.