Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Seetharaama: 'ಸೀತಾ ರಾಮ' ಧಾರಾವಾಹಿ ಪ್ರಸಾರಕ್ಕೆ ಹೆಚ್ಚಿದ ಬೇಡಿಕೆ
ಹಲವು ವರ್ಷಗಳಿಂದ ಸನ್ನಿಧಿಯನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಬಯಸಿದ್ದ ಅಭಿಮಾನಿಗಳಿಗೆ ಈಗ ಖುಷಿ ತಂದಿದೆ. ನಟಿ ವೈಷ್ಣವಿ ಗೌಡ ಅವರು ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಯನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಸುಮಾರು ವರ್ಷಗಳ ಹಿಂದೆ ಮೂಡಿ ಬಂದಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರು ಸನ್ನಿಧಿ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರದ ಮೂಲಕ ವೈಷ್ಣವಿ ಅವರನ್ನು ಸನ್ನಿಧಿ ಎಂದೇ ಗುರುತಿಸುತ್ತಿದ್ದರು.
Hitler
Kalyana:
ಏಜೆಗೆ
ಪ್ರಪೋಸ್
ಮಾಡಲು
ಲೀಲಾ
ಪ್ಲಾನ್!
ವೈಷ್ಣವಿ ಗೌಡ 'ಅಗ್ನಿಸಾಕ್ಷಿ' ಧಾರಾವಾಹಿ ಮುಗಿದ ಮೇಲೆ ಮತ್ತೆ ಯಾವ ಸೀರಿಯಲ್‌ನಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ಬಿಗ್ ಬಾಸ್ ಸೀಸನ್ 8ರಲ್ಲಿ ವೈಷ್ಣವಿ ಗೌಡ ಅವರು ಭಾಗವಹಿಸಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ವೈಷ್ಣವಿ ಅವರು ಧಾರಾವಾಹಿಯಲ್ಲಿ ನಟಿಸಲೇಬೇಕು ಎಂಬ ಕೂಗು ಜೋರಾಯಿತು. ಇದಾದ ಬಳಿಕ ವೈಷ್ಣವಿ ಅವರು 'ಬಹುಕೃತ ವೇಷಂ' ಎಂಬ ಚಿತ್ರದಲ್ಲೂ ಬಣ್ಣ ಹಚ್ಚಿದರು. ಇನ್ನು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿಲ್ಲವಾದರೂ, ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ವಿವಿಧ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ. ಭರತನಾಟ್ಯ, ಕಥಕ್ ಡ್ಯಾನ್ಸ್ ಅನ್ನು ಮಾಡುತ್ತಿರುತ್ತಾರೆ.

ಊಟದ ಕಡೆ ಹೆಚ್ಚು ಒಲವು
ಇದರೊಂದಿಗೆ ವೈಷ್ಣವಿ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು. ತಮ್ಮ ವಯಕ್ತಿಕ ವಿಚಾರಗಳನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ, ಶಾಪಿಂಗ್ ಮಾಡುತ್ತಿದ್ದರು, ಕೆಲ ಸೆಲಬ್ರಿಟಿಗಳ ಸಂದರ್ಶನ ಮಾಡಿದರು. ಇತ್ತೀಚೆಗೆ ಊಟದ ಕಡೆಗೆ ಹೆಚ್ಚು ಒಲವು ತೋರುತ್ತಿರುವ ವೈಷ್ಣವಿ ಅವರು, ಚಿಕನ್ ರೆಸಿಪಿ, ರಮ್ ಕೇಕ್ ಮಾಡುವುದು ಹೇಗೆ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮೇಕಪ್ ಬಗ್ಗೆಯೂ ಸಾಕಷ್ಟು ಟಿಪ್ಸ್‌ಗಳನ್ನು ನೀಡಿದ್ದಾರೆ. ಇನ್ನು ಅವರ ಮದುವೆಯ ವಿಚಾರವಾಗಿಯೂ ಯೂಟ್ಯೂಬ್‌ನಲ್ಲಿ ಮಾತನಾಡಿದ್ದರು.

ರಿತೂ ಸಿಂಗ್ ಆಕ್ಟಿಂಗ್ ಸೂಪರ್
ಇದೀಗ ವೈಷ್ಣವಿ ಗೌಡ ಅವರು 'ಸೀತಾ ರಾಮ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ಈ ಧಾರಾವಾಹಿ ಮೂಡಿ ಬರಲಿದ್ದು, ಇದರಲ್ಲಿ 'ಡ್ರಾಮಾ ಜೂನಿಯರ್ಸ್' ಖ್ಯಾತಿಯ ರಿತೂ ಸಿಂಗ್ ಕೂಡ ಅಭಿನಯಿಸಿದ್ದಾಳೆ. ರಿತೂ ಸಿಂಗ್ ಮೂಲತಃ ನೇಪಾಳಿಯವರಾಗಿದ್ದರು, ಇನ್ನೂ ತೊದಲು ನುಡಿಯುತ್ತಲೇ 'ಡ್ರಾಮಾ ಜ್ಯೂನಿಯರ್ಸ್'ನಲ್ಲಿ ಫೇಮಸ್ ಆಗಿದ್ದರು. ವೈಷ್ಣವಿ ಗೌಡ ಜೋಡಿಯಾಗಿ ನಟ ಗಗನ್ ಚಿನ್ನಪ್ಪ ಅವರು ನಟಿಸುತ್ತಿದ್ದಾರೆ. ಇದು ಸೀತಾ ಹಾಗೂ ರಾಮನ ಪ್ರೇಮ ಕಥೆಯಾಗಿದ್ದು, ಇದಕ್ಕೆ ಸಿಹಿ ಪಾತ್ರದ ರಿತೂ ಸಿಂಗ್ ಸೇತುವೆಯಾಗಿದ್ದಾಳೆ. ಪ್ರೋಮೋ ನೋಡಿದವರೆಲ್ಲಾ ಧಾರಾವಾಹಿಯನ್ನು ನೋಡಲು ಕಾಯುತ್ತಿದ್ದು, ರಿತೂ ಆಕ್ಟಿಂಗ್‌ಗೆ ಫಿದಾ ಆಗಿದ್ದಾರೆ.

ಧಾರಾವಾಹಿಗೆ ಹೆಚ್ಚಿದ ಬೇಡಿಕೆ
ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸೀತಾ ರಾಮ ಧಾರಾವಾಹಿ ಪ್ರೋಮೋ ಅಪ್ ಲೋಡ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳೆಲ್ಲಾ ಧಾರಾವಾಹಿಯನ್ನು ಬೇಗ ಪ್ರಸಾರ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ. ಸಾಕಷ್ಟು ಮಂದಿ ಇದನ್ನು ಪ್ರೈಮ್ ಟೈಂಗೆ ಹಾಕಿ ಎಂದು ಕೇಳುತ್ತಿದ್ದಾರೆ. ಅಲ್ಲದೇ, ವೈಷ್ಣವಿ ಅನ್ನು ಸೀತಾಳಾಗಿ ನೋಡಲು ಕಾತುರರಾಗಿದೆ. ನಮಗೆ ನೋಡಲು ಸಾಧ್ಯವಾಗದ ಸಮಯಕ್ಕೆ ಪ್ರಸಾರ ಮಾಡಬೇಡಿ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.