»   » ಜೀ ಕನ್ನಡದಲ್ಲಿ 'ಗಜಕೇಸರಿ' ಕೃಷ್ಣ ನಿರ್ದೇಶನದ 'ಗೃಹಲಕ್ಷ್ಮಿ'

ಜೀ ಕನ್ನಡದಲ್ಲಿ 'ಗಜಕೇಸರಿ' ಕೃಷ್ಣ ನಿರ್ದೇಶನದ 'ಗೃಹಲಕ್ಷ್ಮಿ'

Posted By:
Subscribe to Filmibeat Kannada

'ಮುಂಗಾರು ಮಳೆ' ಚಿತ್ರದ ಛಾಯಾಗ್ರಾಹಕ, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಗಜಕೇಸರಿ' ನಿರ್ದೇಶಕ ಕೃಷ್ಣ ಮೊದಲ ಬಾರಿಗೆ ಕಿರುತೆರೆ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ. ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ 'ಗೃಹಲಕ್ಮ್ಮಿ', ಜೀ ಕನ್ನಡ ವಾಹಿನಿಯಲ್ಲಿ ಇದೇ ಜೂನ್ 8 ರಿಂದ ಸಂಜೆ 6.30 ರಿಂದ 7 ಗಂಟೆಯವರೆಗೆ ಪ್ರಸಾರವಾಗಲಿದೆ.

ಆರ್.ಆರ್.ಆರ್ ಕ್ರಿಯೇಷನ್ಸ್ ಮೂಲಕ ಈ ಧಾರಾವಾಹಿಯನ್ನು ನಟಿ ಸ್ವಪ್ನ ಕೃಷ್ಣ ನಿರ್ಮಿಸುತ್ತಿದ್ದಾರೆ. ಗಿರೀಶ್ ಕುಮಾರ್ ಸಂಚಿಕೆ ನಿರ್ದೇಶಕರಾಗಿದ್ದು, ಸೆಲ್ವಂ ಚಿತ್ರಕಥೆ ಬರೆಯುತ್ತಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ರೆಡ್ ಎಪಿಕ್ ಕ್ಯಾಮೆರಾದಲ್ಲಿ 'ಗೃಹಲಕ್ಷ್ಮಿ' ಧಾರಾವಾಹಿಯನ್ನ ಚಿತ್ರೀಕರಿಸುತ್ತಿರುವುದು ವಿಶೇಷ.

'Gajakesari' Krishna turns serial director for 'Gruhalakshmi'

'ಶ್ರೀರಸ್ತು ಶುಭಮಸ್ತು', 'ಜೊತೆ ಜೊತೆಯಲಿ', 'ಶುಭ ವಿವಾಹ', 'ಲವ್ ಲವಿಕೆ', 'ಒಂದೂರಲ್ಲಿ ರಾಜಾ ರಾಣಿ' ಅಂತಹ ವಿನೂತನ ಶೈಲಿಯ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡಿದ ಜೀ ವಾಹಿನಿ ಈಗ 'ಗೃಹಲಕ್ಷ್ಮಿ' ಮೂಲಕ ಮತ್ತೊಂದು ಕೌಟುಂಬಿಕ ಧಾರಾವಾಹಿಯನ್ನು ವೀಕ್ಷಕರ ಮುಂದೆ ತರುತ್ತಿದೆ. [ಜೀ ಕನ್ನಡದಲ್ಲಿ ಎರಡು ಹೊಸ ಅಲೆಯ ಧಾರಾವಾಹಿ]

'ಗೃಹಲಕ್ಷ್ಮಿ' ಗಂಡ-ಹೆಂಡತಿ ಮತ್ತು ಮೂವರು ಮಕ್ಕಳ ನೆಮ್ಮದಿಯುತ ಕುಟುಂಬದ ಕಥೇ. ಕುಟುಂಬದ ಒಡತಿಯ ಹೆಸರೇ ಲಕ್ಷ್ಮಿ. ಕಟ್ಟದ ನಿರ್ಮಾಣ ಕಂಪನಿಯ ಒಡೆಯ ರಾಘವ. ಈ ಆದರ್ಶ ದಂಪತಿಗಳಿಗೆ ಮೂವರು ಮಕ್ಕಳು. [ಜೀ ಕನ್ನಡ 'ಒಗ್ಗರಣೆ ಡಬ್ಬಿ' ಘಮಲಿಗೆ 500ರ ಸಂಭ್ರಮ]

'Gajakesari' Krishna turns serial director for 'Gruhalakshmi'

ಕುಟುಂಬದ ಆಗು-ಹೋಗು ಮತ್ತು ಸುಖ-ದುಃಖಗಳಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಸ್ಪಂದಿಸುವ ಲಕ್ಷ್ಮಿ ಮೇಲೆ ಗಂಡ ಮತ್ತು ಮಕ್ಕಳು ಹೆಚ್ಚು ಅವಲಂಬಿತರಾಗಿರುತ್ತಾರೆ. ಆದರೆ, ಲಕ್ಷ್ಮಿ ಮನಸಲ್ಲೇನೋ ಒಂದು ದೊಡ್ಡ ಕೊರಗಿದೆ. ಅದು ಏನು? ಅದರಿಂದ ಆಕೆ ಪಾರಾಗುವುದು ಹೇಗೆ? ಆ ಪಯಣದಲ್ಲಿ ಅವಳ ಕಷ್ಟಕ್ಕೆ ಜೊತೆಯಾಗುವುದು ಯಾರ್ಯಾರು ಅನ್ನೋದೇ ಕಥೆಯ ಮುಖ್ಯ ಎಳೆ. [ಹೊಸ ಇತಿಹಾಸ ಸೃಷ್ಟಿಸಿದ ಜೀ ಕನ್ನಡ 'ರಾಧಾ ಕಲ್ಯಾಣ']

'Gajakesari' Krishna turns serial director for 'Gruhalakshmi'

ನಿರೂಪಕಿಯಾಗಿ ಗುರುತಿಸಿಕೊಂಡಿರುವ ಸನಾತನಿ, ಲಕ್ಷ್ಮಿಯಾಗಿ ಅಭಿನಯಿಸುತ್ತಿದ್ದು, ಚಂದ್ರು ಬಿ ಅಮಿತ್, ಮೋನಿಶಾ ಶ್ರೇಯಾ ಮತ್ತು ಹಿರಿಯ ನಟಿ ಜಯಮ್ಮ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾವಿರ ಸಂಚಿಕೆ ಪೂರೈಸಿರುವ 'ರಾಧಾ ಕಲ್ಯಾಣ' ಮುಕ್ತಾಯವಾಗುತ್ತಿದ್ದು, ಈ ಹೊಸ ಧಾರಾವಾಹಿ ಅದೇ ಸಮಯದಲ್ಲಿ ಪ್ರಸಾರವಾಗಲಿದೆ.

English summary
Family Entertainment Channel Zee Kannada is coming up with the new serial called 'Gruhalakshmi'. Interestingly, 'Krishna' of 'Gajakesari' fame is directing this serial for Zee Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada