»   » 'ಸೂಪರ್ ಟಾಕ್ ಟೈಂ' ಕಾರ್ಯಕ್ರಮ ಈಗ 'ಗೋಲ್ಡನ್ ಟಾಕ್ ಟೈಂ' ಆಯ್ತು

'ಸೂಪರ್ ಟಾಕ್ ಟೈಂ' ಕಾರ್ಯಕ್ರಮ ಈಗ 'ಗೋಲ್ಡನ್ ಟಾಕ್ ಟೈಂ' ಆಯ್ತು

Posted By:
Subscribe to Filmibeat Kannada
Ganesh and his wife shilpa ganesh in super talk time show

'ಕಲರ್ಸ್ ಕನ್ನಡ' ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ಸೂಪರ್ ಟಾಕ್ ಟೈಂ' ಕೂಡ ಒಂದು. ಅಕುಲ್ ಬಾಲಾಜಿ ನಿರೂಪಣೆ ಮಾಡುವ ಈ ಕಾರ್ಯಕ್ರಮಕ್ಕೆ ಈಗ ನಿಜಕ್ಕೂ ಒಂದು ಕಳೆ ಬಂದಿದೆ. ಅದಕ್ಕೆ ಕಾರಣ ಆಗಿರುವುದು ಗೋಲ್ಡನ್ ಸ್ಟಾರ್ ಗಣೇಶ್.

'ಜಂಬೋ' ಅನಿಲ್ ಕುಂಬ್ಳೆ ಜೊತೆ 'ಗೋಲ್ಡನ್ ಸ್ಟಾರ್' ಗಣೇಶ್ ಸೂಪರ್ ಸೆಲ್ಫಿ

ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಗಣೇಶ್ ಈಗ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಅತಿಥಿಗಳಾಗಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಶಿಲ್ಪಾ ಗಣೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಣೇಶ್ ದಂಪತಿ ಕಾಣಿಸಿಕೊಂಡಿರುವ ಈ ಸಂಚಿಕೆ ಈಗ ತುಂಬ ವಿಶೇಷವಾಗಿದೆ.

Ganesh and his wife Shilpa Ganesh in 'Super talk time'

ಗಣೇಶ್ ಅವರ ಈ ಸಂಚಿಕೆ ತುಂಬ ಮುಖ್ಯವಾಗಿರುವುದಕ್ಕೆ ಕಾರಣವೂ ಇದೆ. ಯಾಕಂದ್ರೆ, ನಟ ಅನಂತ್ ನಾಗ್ ಅವರನ್ನು ಹೊರತು ಪಡಿಸಿ ಕನ್ನಡದ ದೊಡ್ಡ ಸ್ಟಾರ್ ನಟರುಗಳು ಈವರೆಗೂ 'ಸೂಪರ್ ಟಾಕ್ ಟೈಂ' ನಲ್ಲಿ ಕಾಣಿಸಿಕೊಂಡಿಲ್ಲ. ಹೌದು, ಕಾರ್ಯಕ್ರಮದಲ್ಲಿ ಅನೇಕ ನಟ, ನಟಿಯರು ಭಾಗಿಯಾಗಿದ್ದರು ಕೂಡ ಶಿವಣ್ಣ, ಉಪೇಂದ್ರ, ದರ್ಶನ್, ಪುನೀತ್, ಸುದೀಪ್, ಗಣೇಶ್ ರೀತಿಯ ಪ್ರಮುಖ ಸ್ಟಾರ್ ನಟರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ.

Ganesh and his wife Shilpa Ganesh in 'Super talk time'

ಇದರೊಂದಿಗೆ ಗಣೇಶ್ ತಮ್ಮ ಪತ್ನಿ ಶಿಲ್ಪಾ ಗಣೇಶ್ ರೊಂದಿಗೆ ಈ ಕಾರ್ಯಕ್ರಮಕ್ಕೆ ಬಂದಿರುವುದು ಮತ್ತೊಂದು ವಿಶೇಷ. ಶಿಲ್ಪಾ ಗಣೇಶ್ ಹೆಚ್ಚಾಗಿ ಯಾವುದೇ ಟಿವಿ ಕಾರ್ಯಕ್ರಮಕ್ಕೂ ಬರುವುದಿಲ್ಲ. ಜೊತೆಗೆ ಗಣೇಶ್ ಅವರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೂ ಶಿಲ್ಪಾ ಮಿಸ್ ಆಗಿದ್ದರು. ಸೋ... ಈ ಎಲ್ಲ ಕಾರಣಗಳಿಂದ ಗಣೇಶ್ ಅತಿಥಿ ಆಗಿರುವ ಈ ಕಾರ್ಯಕ್ರಮ ಈಗ 'ಗೋಲ್ಡನ್ ಟಾಕ್ ಟೈಂ' ಆಗಿದೆ.

English summary
Golden Star Ganesh and his wife Shilpa Ganesh in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada