»   » ಫೆಬ್ರವರಿ 13 ರಿಂದ ಕರುನಾಡ ಮನೆ ಮನೆಯಲ್ಲೂ ಗಣೇಶೋತ್ಸವ.!

ಫೆಬ್ರವರಿ 13 ರಿಂದ ಕರುನಾಡ ಮನೆ ಮನೆಯಲ್ಲೂ ಗಣೇಶೋತ್ಸವ.!

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ 'ಹರಹರ ಮಹಾದೇವ' ಧಾರಾವಾಹಿಯಲ್ಲಿ ಮತ್ತೊಂದು ರೋಚಕ ಘಟ್ಟ ಎದುರಾಗುತ್ತಿದೆ.[ಮಹಾದೇವ 'ವಿಷಕಂಠ'ನಾದ ರೋಚಕ ಕಥೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ.!]

ಸತಿ-ಶಿವನ ಪ್ರೇಮಕಥೆಯಿಂದ ಪ್ರಾರಂಭವಾದ ಈ ಧಾರಾವಾಹಿಯಲ್ಲಿ ಸತಿ ಸ್ವಯಂವರ, ಸತಿ-ಮಹಾದೇವ ವಿವಾಹ, ಸತಿ ದಹನ, ವೀರಭದ್ರ ಅವತಾರ, ದಕ್ಷನ ಸಂಹಾರ, ಪಾರ್ವತಿ-ಮಹಾದೇವ ಪ್ರೇಮ ಕಥೆ, ಸುಬ್ರಮಣ್ಯನ ಜನ್ಮ ವೃತ್ತಾಂತ, ತಾರಕಾಸುರ ಸಂಹಾರ, ಮಹಾದೇವ 'ವಿಷಕಂಠ'ನಾದ ಪುಣ್ಯಕಥೆಯನ್ನ ಇದುವರೆಗೂ ನೀವು ಕಣ್ತುಂಬಿಕೊಂಡಿದ್ದೀರಿ. ಇದೀಗ ಗಣೇಶನ ಜನ್ಮ ವೃತ್ತಾಂತವನ್ನು ನೀವು ನೋಡುವ ಸಮಯ ಬಂದಿದೆ.

ಗಣೇಶನ ಆಗಮನ

ಬರುವ ಸೋಮವಾರ... ಅಂದ್ರೆ ಫೆಬ್ರವರಿ 13 ರಂದು 'ಹರಹರ ಮಹಾದೇವ' ಧಾರಾವಾಹಿಯಲ್ಲಿ ಗಣೇಶನ ಆಗಮನವಾಗಲಿದೆ. ಸರ್ವವಿಘ್ನಗಳನ್ನು ನಿವಾರಿಸಲು ಕರುನಾಡ ಮನೆ ಮನೆಗೆ ಗಣೇಶ ಬರಲಿದ್ದಾನೆ.

ಗಣೇಶನ ತುಂಟಾಟ

ಶಿವ ತಪಸ್ಸಿಗೆ ಹೋದ ಸಂದರ್ಭದಲ್ಲಿ ಗಣೇಶನ ಜನನವಾಗುತ್ತದೆ. ಮಹಾದೇವ ಮತ್ತೆ ಮರಳುವವರೆಗೂ ಕೈಲಾಸವೆಲ್ಲ ಗಣೇಶನ ತುಂಟಾಟಕ್ಕೆ ಸಾಕ್ಷಿಯಾಗುತ್ತದೆ.

ಸ್ಟಾರ್ ಸುವರ್ಣ ವಾಹಿನಿ ಕೊಡುಗೆ

'ಹರಹರ ಮಹಾದೇವ' ಧಾರಾವಾಹಿ ಮೂಲಕ ವೀಕ್ಷಕರಿಗೆ ಗಣೇಶನ ಚರಿತ್ರೆಯನ್ನೂ ಸ್ಟಾರ್ ಸುವರ್ಣ ವಾಹಿನಿ ತಲುಪಿಸುತ್ತಿದೆ.

ಪ್ರಸಾರ ಯಾವಾಗ್ಲಿಂದ.?

ಗಣೇಶನ ಆಗಮನದ ಮಹಾ ಸನ್ನಿವೇಶವನ್ನೊಳಗೊಂಡ ಕಂತು ಫೆಬ್ರವರಿ 13 ರಿಂದ ರಾತ್ರಿ 7.30ಕ್ಕೆ ಪ್ರಸಾರವಾಗಲಿದ್ದು, ವೀಕ್ಷಕರಿಗೆ ಭಕ್ತಿ ಪೂರ್ವಕವಾದ ಮನರಂಜನೆಯನ್ನು ನೀಡಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ.

English summary
Episode of Ganesha's birth will be aired in Star Suvarna Channel's 'Hara Hara Mahadeva' from 13th February at 7.30 PM.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X