»   » ಮಹಾದೇವ 'ವಿಷಕಂಠ'ನಾದ ರೋಚಕ ಕಥೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ.!

ಮಹಾದೇವ 'ವಿಷಕಂಠ'ನಾದ ರೋಚಕ ಕಥೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ.!

Posted By:
Subscribe to Filmibeat Kannada

ಸತಿ-ಶಿವನ ಪ್ರೇಮಕಥೆಯಿಂದ ಪ್ರಾರಂಭವಾದ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಸತಿ ಸ್ವಯಂವರ, ಸತಿ-ಮಹಾದೇವ ವಿವಾಹ, ಸತಿ ದಹನ, ವೀರಭದ್ರನ ಅವತಾರ, ದಕ್ಷನ ಸಂಹಾರ, ಪಾರ್ವತಿ-ಮಹಾದೇವ ಪ್ರೇಮ ಕಥೆ, ಶಿವ-ಪಾರ್ವತಿ ಕಲ್ಯಾಣ, ಕಾರ್ತಿಕೇಯನ ಜನ್ಮ, ತಾರಕಾಸುರನ ಸಂಹಾರ ವೃತ್ತಾಂತವನ್ನ ಇದುವರೆಗೂ ನೀವು ಕಣ್ತುಂಬಿಕೊಂಡಿದ್ದೀರಿ.

ಇದೀಗ ಸಮುದ್ರ ಮಂಥನದ ರೋಚಕ ಅಧ್ಯಾಯವನ್ನು ನೋಡುವ ಸಮಯ ಬಂದಿದೆ.

ಮಹಾಸಾಗರಕ್ಕೆ ಬೀಳುವ ಅಮೃತ ಕಲಶ

ಬಲಿ ಹಾಗೂ ಇಂದ್ರನ ನಡುವೆ ನಡೆದ ಹೊಡೆದಾಟದಲ್ಲಿ ಅಮೃತ ಕಲಶ ಮಹಾಸಾಗರಕ್ಕೆ ಬೀಳುತ್ತದೆ. ಅಮೃತವಿಲ್ಲದೇ ದೇವತೆಗಳೆಲ್ಲರೂ ನಿತ್ರಾಣರಾಗುತ್ತಾರೆ. ಎಲ್ಲರೂ ಮಹಾದೇವನ ಬಳಿ ಹೋದಾಗ, ಮಹಾದೇವ ಅಮೃತ ಮಂಥನವಾಗಬೇಕೆಂದೂ ಮತ್ತು ಅದನ್ನು ಸುರಾಸುರರು ಸೇರಿ ನಡೆಸಬೇಕೆಂದು ಹೇಳುತ್ತಾರೆ.[ರಕ್ತಬೀಜಾಸುರನ ಸಂಹಾರಕ್ಕೆ ಪಾರ್ವತಿಯ 'ಭದ್ರಕಾಳಿ' ಅವತಾರ]

ಸಮುದ್ರ ಮಂಥನ ಅಧ್ಯಾಯ

ಅದರಂತೆ ವಾಸುಕಿಯು ಹಗ್ಗವಾದರೆ, ಸುರಾಸುರರು ಎರಡು ಬದಿಯಿಂದ ಮಂಥನ ಶುರು ಮಾಡುತ್ತಾರೆ. [ಶಿವ-ಪಾರ್ವತಿ ಕಲ್ಯಾಣ: ಅದ್ಭುತ ದೃಶ್ಯಕಾವ್ಯ ನೋಡಲು ಮರೆಯದಿರಿ]

ವಿಷ ಉತ್ಪತ್ತಿ

ಸಮುದ್ರ ಮಂಥನದಲ್ಲಿ ಮೊದಲು ವಿಷ ಉತ್ಪತ್ತಿ ಆದಾಗ ಎಲ್ಲರೂ ಕಂಗಾಲಾಗುತ್ತಾರೆ. ನಂತರ ಲೋಕವನ್ನು ವಿಷದಿಂದ ರಕ್ಷಿಸಲು ಮಹಾದೇವ ವಿಷ ಸೇವಿಸುತ್ತಾನೆ.

'ವಿಷಕಂಠ'ನಾಗುವ ಮಹಾದೇವ

ಪತಿದೇವನ ದೇಹದಲ್ಲಿ ವಿಷ ಸೇರಬಾರದೆಂಬ ಕಾರಣಕ್ಕೆ ಪಾರ್ವತಿಯು ಮಹಾದೇವನ ಕುತ್ತಿಗೆಯನ್ನು ಬಿಗಿದು ಹಿಡಿಯುತ್ತಾಳೆ. ಹೀಗೆ ಸಮುದ್ರ ಮಂಥನದಿಂದ ಮಹಾದೇವನಿಗೆ ವಿಷಕಂಠ/ನೀಲಕಂಠ ಎಂಬ ಹೆಸರು ಬರುತ್ತದೆ.

ಪ್ರಸಾರ ಯಾವಾಗ?

ಮಹಾದೇವ ವಿಷಕಂಠನಾದ ರೋಮಾಂಚನಕಾರಿ ಸಮುದ್ರ ಮಂಥನದ ವಿಶೇಷ ಸಂಚಿಕೆಗಳು ಇದೇ 21-01-2017 ರಿಂದ ಪ್ರಾರಂಭವಾಗಿ ವಾರ ಪೂರ್ತಿ ಪ್ರಸಾರವಾಗುತ್ತದೆ. ಮಹಾದೇವನ ಈ ಮಹಾ ಮಹಿಮೆಯನ್ನು ವೀಕ್ಷಕರು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಣ್ತುಂಬಿಕೊಳ್ಳಬಹುದು.

English summary
Episode of 'Samudra Manthana' will be aired in Star Suvarna Channel's 'Hara Hara Mahadeva' from 21-01-2017 at 7.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada