»   » ಹರಹರ ಮಹಾದೇವ 'ಶಿವರಾತ್ರಿ' ವಿಶೇಷ: 'ಗಜಮುಖ'ನಾಗಿ ವಿನಾಯಕನ ಎಂಟ್ರಿ

ಹರಹರ ಮಹಾದೇವ 'ಶಿವರಾತ್ರಿ' ವಿಶೇಷ: 'ಗಜಮುಖ'ನಾಗಿ ವಿನಾಯಕನ ಎಂಟ್ರಿ

Posted By:
Subscribe to Filmibeat Kannada

ಗಣೇಶನ ಆಗಮನದಿಂದ ನಳನಳಿಸುತ್ತಿರುವ ಕೈಲಾಸದಲ್ಲಿ... ಆನಂದದಿಂದ ಮಹಾದೇವನ ಬರುವಿಕೆಗಾಗಿ ಕಾಯುತ್ತಿರುವ ಪಾರ್ವತಿಗೆ ಒಂದು ಘೋರ ಸಂಕಷ್ಟ ಎದುರಾಗುತ್ತದೆ.

ಮಹಾದೇವನ ಸ್ವಾಗತಕ್ಕೆ ಪಾರ್ವತಿ ಸಿದ್ಧತೆ ಆರಂಭಿಸಿ, ಅಭ್ಯಂಜನ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿ, ಕಾವಲಿಗೆ ಗಣೇಶನನ್ನು ನಿಲ್ಲಿಸಿರುತ್ತಾಳೆ. ಹಲವಾರು ದಿನಗಳ ನಂತರ ತನ್ನ ಮನದರಸಿಯನ್ನು ಕಾಣಲು ನೇರ ಸ್ನಾನಗೃಹಕ್ಕೆ ಬರುವ ಮಹಾದೇವನ ಪರಿಚಯವಿಲ್ಲದೆ ಗಣೇಶ ಮಹಾದೇವನನ್ನು ಒಳಹೋಗದಂತೆ ತಡೆಯುತ್ತಾನೆ.[ಮಹಾ ಶಿವರಾತ್ರಿ ಹಬ್ಬ, ಸ್ಟಾರ್ ಸುವರ್ಣ ವಾಹಿನಿ ಹಾಗೂ 'ಮಹಾಯಾಗ']

'Hara Hara Mahadeva' Shivaratri special: Ganesha become 'Gajamukha'

ಮಹಾದೇವ ಎಷ್ಟೇ ಹೇಳಿದರೂ, ಅವನನ್ನು ತಂದೆ ಎಂದು ಒಪ್ಪದ ಗಣೇಶ ಒಳಹೋಗದಂತೆ ನಿರ್ಬಂಧ ಹೇರುತ್ತಾನೆ. ಕೋಪಗೊಳ್ಳುವ ಮಹಾದೇವ ತನ್ನ ತ್ರಿಶೂಲದಿಂದ ಗಣೇಶನ ಕುತ್ತಿಗೆಯನ್ನು ತುಂಡರಿಸುತ್ತಾನೆ. ಇದರಿಂದ ಪಾರ್ವತಿ ಅತ್ಯಂತ ದುಃಖಿತಳಾಗುತ್ತಾಳೆ.

ಪಾರ್ವತಿ ಮನವೊಲಿಸಲು ಮಹಾದೇವ ಆನೆಯೊಂದರ ಮುಖವನ್ನು ವಿನಾಯಕನ ಕುತ್ತಿಗೆಗೆ ಜೋಡಿಸಿ ಗಣೇಶನನ್ನು ಗಜಮುಖನನ್ನಾಗಿ ಮಾಡುತ್ತಾನೆ.[ಫೆಬ್ರವರಿ 13 ರಿಂದ ಕರುನಾಡ ಮನೆ ಮನೆಯಲ್ಲೂ ಗಣೇಶೋತ್ಸವ.!]

ಈ ಸನ್ನಿವೇಶವನ್ನೊಳಗೊಂಡ ಸಂಚಿಕೆ ಫೆಬ್ರವರಿ 24 ರಂದು ಶುಕ್ರವಾರ 'ಮಹಾ ಶಿವರಾತ್ರಿ' ಪ್ರಯುಕ್ತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 7.30ರಿಂದ ಪ್ರಸಾರ ಆಗಲಿದೆ.

English summary
Episode of Gajamukha's entry will be aired in Star Suvarna Channel's 'Hara Hara Mahadeva' on 24th February at 7.30 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada