For Quick Alerts
  ALLOW NOTIFICATIONS  
  For Daily Alerts

  'ಅಗ್ನಿಸಾಕ್ಷಿ' ಚಂದ್ರಿಕಾಳ ಮೌನ ಸನ್ನಿಧಿಗೆ ಭಯ ಹುಟ್ಟಿಸಿದೆ

  By Pavithra
  |
  ಅಗ್ನಿಸಾಕ್ಷಿ ಚಂದ್ರಿಕಾ ಮೌನದ ಹಿಂದಿದೆ ದುರುದ್ದೇಶ | Sannidhi is scared of chadnrika's silence

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರ ಆಗುವ ಅಗ್ನಿಸಾಕ್ಷಿ ಧಾರಾವಾಹಿಗೆ ಅಪಾರ ಅಭಿಮಾನಿ ಬಳಗವಿದೆ. ಕೇವಲ ಹೆಣ್ಣುಮಕ್ಕಳು ಮಾತ್ರವಲ್ಲದೆ ಯುವಕ ಯುವತಿಯರು ಕೂಡ ಈ ಧಾರಾವಾಹಿಯ ಹುಚ್ಚು ಹಿಡಿಸಿಕೊಂಡಿದ್ದಾರೆ. ಸಿನಿಮಾ ಸ್ಟೈಲ್ ನಲ್ಲೇ ಸಾಗುತ್ತಿರುವ ಅಗ್ನಿಸಾಕ್ಷಿ ಸೀರಿಯಲ್ ಕೆಲವರಿಗಂತು ಶತ್ರುವಿನಂತೆ.

  ಯಾಕಂದ್ರೆ ಈ ಧಾರಾವಾಹಿ ಬಂದಾಗ ಚಾಲನ್ ಬದಲಾಗುವುದಿಲ್ಲ ಎನ್ನುವುದೊಂದೆ ದೂರು. ಅಷ್ಟರ ಮಟ್ಟಿಗೆ ಈ ಧಾರಾವಾಹಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಸದ್ಯ ಈಗ ಧಾರಾವಾಹಿಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಕಟ್ಟಿಕೊಡುವ ಪ್ರಯತ್ನ ನಾವು ಮಾಡುತ್ತಿದ್ದೇವೆ.

  'ಧಾರಾವಾಹಿ ನಿಲ್ಲಿಸು' ಎಂದು ದೇವರಿಗೆ ಮನವಿ ಮಾಡುತ್ತಿರುವ ಪ್ರೇಕ್ಷಕ'ಧಾರಾವಾಹಿ ನಿಲ್ಲಿಸು' ಎಂದು ದೇವರಿಗೆ ಮನವಿ ಮಾಡುತ್ತಿರುವ ಪ್ರೇಕ್ಷಕ

  ನಿನ್ನೆ ಅಂದರೆ ಏರ್ಪಿಲ್ 17ರಂದು ನಡೆದ ಅಗ್ನಿಸಾಕ್ಷಿ ಧಾರಾವಾಹಿಯ ಎಪಿಸೋಡ್ ಅನ್ನು ನೀವೇನಾದ್ರು ಮಿಸ್ ಮಾಡಿಕೊಂಡಿದ್ದೀರಾ? ಹಾಗಾದರೆ ನೀವು ಈ ಸ್ಟೋರಿಯನ್ನು ಓದಲೇ ಬೇಕು. ನಿನ್ನೆ ಅಂತದ್ದೇನಾಯ್ತು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ ಮುಂದೆ ಓದಿ

  ಅಗ್ನಿಸಾಕ್ಷಿಯಲ್ಲಿ ಹೊಸ ತಿರುವು

  ಅಗ್ನಿಸಾಕ್ಷಿಯಲ್ಲಿ ಹೊಸ ತಿರುವು

  ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಕಿಶೋರ್ ಕೊಲೆ ಆಗಿದೆ. ಇನ್ನು ಮುಂದೆ ಯಾವುದೇ ಸಮಸ್ಯೆ ಇಲ್ಲ ಎಂದು ಸಿದ್ಧಾರ್ಥ್ ಹಾಗೂ ಸನ್ನಿಧಿ ಎಂದುಕೊಳ್ಳುವಷ್ಟರಲ್ಲಿ ಹೊಸ ಸಮಸ್ಯೆಗಳು ಆರಂಭ ಆಗಿದೆ. ಧಾರಾವಾಹಿಯಲ್ಲಿ ಕಿಶೋರ್ ತಮ್ಮ ಕೌಶಿಕ್ ಆಟ ಶುರುವಾಗಿದ್ದು ಕೌಶಿಕ್ ಯಾರಿಗೂ ತಿಳಿಯದಂತೆ ಸಿದ್ದಾರ್ಥ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾನೆ.

  ಚಂದ್ರಿಕಾ ಮೌನವೇ ಸಮಸ್ಯೆ

  ಚಂದ್ರಿಕಾ ಮೌನವೇ ಸಮಸ್ಯೆ

  ವಾಸುದೇವ ಕುಟುಂಬಕ್ಕೆ ಶತ್ರುವಾಗಿರುವ ಚಂದ್ರಿಕಾ ಕಿಶೋರ್ ಮರಣ ಹೊಂದಿದ ನಂತರ ಮೌನ ತಾಳಿದ್ದಾಳೆ. ಮನೆಯವರಿಗೆ ತಿಳಿಯದಂತೆ ಕೌಶಿಕನನ್ನು ಮನೆಗೆ ಕರೆದುಕೊಂಡು ಬಂದಿರುವ ಚಂದ್ರಿಕಾ ಸೈಲೆಂಟ್ ಆಗಿದ್ದುಕೊಂಡು ಸಂಚು ರೂಪಿಸುತ್ತಿದ್ದಾಳೆ.

  ಸನ್ನಿಧಿ ಮನಸ್ಸಿನಲ್ಲಿ ಹೊಸ ಭಯ

  ಸನ್ನಿಧಿ ಮನಸ್ಸಿನಲ್ಲಿ ಹೊಸ ಭಯ

  ಧಾರಾವಾಹಿಯ ನಾಯಕಿ ಸನ್ನಿಧಿಯ ಮನಸ್ಸಿನಲ್ಲಿ ಭಯ ಹುಟ್ಟಿಕೊಂಡಿದೆ. ಚಂದ್ರಿಕಾ ಮೌನವಾಗಿದ್ದು ಸಮಸ್ಯೆಗಳನ್ನ ಹೆಚ್ಚು ಮಾಡುತ್ತಿದ್ದಾಳೆ ಎನ್ನುವುದು ಸನ್ನಿಧಿ ಭಯಕ್ಕೆ ಮುಖ್ಯ ಕಾರಣ.

  ಹೊಸ ಸಂಚು ರೂಪಿಸಿರುವ ಚಂದ್ರಿಕಾ

  ಹೊಸ ಸಂಚು ರೂಪಿಸಿರುವ ಚಂದ್ರಿಕಾ

  ಇನ್ನು ನಿನ್ನೆಯ ಸಂಚಿಕೆಯಲ್ಲಿ ಚಂದ್ರಿಕಾ ಹಾಗೂ ಕೌಶಿಕ್ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ನೋಡುಗರಿಗೆ ಇವರ ಮಧ್ಯೆವೇ ಜಗಳ ಶುರುವಾಗುತ್ತೆ ಎನ್ನುವಷ್ಟರಲ್ಲಿ ಕಥೆಗೆ ಹೊಸ ಟ್ವಿಸ್ಟ್ ನೀಡಿ ಸಂಚಿಕೆಯನ್ನ ನಿಲ್ಲಿಸಿದ್ದಾರೆ. ಹೊಸ ಆಯಾವ ಯಾವುದು ಎನ್ನುವುದು ಮುಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ.

  ತಾಳ್ಮೆ ಪರೀಕ್ಷಿಸುತ್ತಿರುವ 'ಅಗ್ನಿಸಾಕ್ಷಿ' ನೋಡಿ ನೋಡಿ ರೋಸಿ ಹೋದ ವೀಕ್ಷಕರು.!ತಾಳ್ಮೆ ಪರೀಕ್ಷಿಸುತ್ತಿರುವ 'ಅಗ್ನಿಸಾಕ್ಷಿ' ನೋಡಿ ನೋಡಿ ರೋಸಿ ಹೋದ ವೀಕ್ಷಕರು.!

  English summary
  New twist has come up in Colors Kannada Channel's popular serial 'Agnisakshi'. Here is the complete report on April 17th episode

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X