For Quick Alerts
  ALLOW NOTIFICATIONS  
  For Daily Alerts

  'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ- ಅಂತರ ಲವ್ ಸ್ಟೋರಿ

  By ಪ್ರಿಯಾ ದೊರೆ
  |

  Article desc: 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆಯ ಪ್ರೀತಿಯ ಅಂಬಾರಿಯನ್ನು ಲೀಲಾ ಬಿಸಾಡಿದ್ದಾಳೆ. ಇದರಿಂದ ಕೋಪಗೊಂಡ ಎಜೆ, ಲೀಲಾಳ ಕತ್ತು ಹಿಡಿದಿದ್ದಾನೆ. ಇನ್ನೇನು ತಾನು ಸತ್ತೇ ಹೋದೆ ಎನ್ನುವಷ್ಟರಲ್ಲಿ ಲೀಲಾ ಬಚಾವ್ ಆಗಿದ್ದಾಳೆ.

  ಗೊಂಬೆಗಳಿಗೆ ಲೀಲಾ ಪೂಜೆ ಮಾಡುವಾಗ ಎಜೆಯನ್ನು ಹೇಗೆ ಉಳಿಸಿಕೊಲ್ಳುವುದು.? ಈ ವಿಕ್ರಮ್ ಯಾವಾಗ ಬೇಕಿದ್ದರೂ ಏನನ್ನಾದರೂ ಮಾಡುತ್ತಾನೆ. ಎಜೆಗೆ ಏನೂ ಆಗದಂತೆ ನೋಡಿಕೊಳ್ಳಬೇಕು ಎಂದು ಯೋಚಿಸುತ್ತಲೇ ಇರುತ್ತಾಳೆ. ಆಗ ಎಜೆ ಕೈಯಲ್ಲಿರುವ ಅಂಬಾರಿಯನ್ನು ನೋಡಿದ ಲೀಲಾ, ಇದರಿಂದಲೇ ಎಜೆಯನ್ನು ವಿಕ್ರಮ್ ಸಾಯಿಸಬಹುದೇನು ಎಂದು ಯೋಚಿಸುತ್ತಾಳೆ.

  ಬೆಟ್ಟದ ಹೂವಿನ ಟೀಂ ನೋಡಿ ವಾವ್ ಎಂದ ಪ್ರೇಕ್ಷಕರು.. ಕಾರಣ ಆ ಒಂದು ಫೋಟೊ..!ಬೆಟ್ಟದ ಹೂವಿನ ಟೀಂ ನೋಡಿ ವಾವ್ ಎಂದ ಪ್ರೇಕ್ಷಕರು.. ಕಾರಣ ಆ ಒಂದು ಫೋಟೊ..!

  ಲೀಲಾ ಊಹಿಸಿದ್ದನ್ನು ವಿಕ್ರಮ್ ಗಮನಿಸುತ್ತಾನೆ. ನೀನು ಊಹೆ ಸರಿಯಾಗಿದೆ ಎನ್ನುತ್ತಾನೆ. ನಿನ್ನ ಊಹೆ ಸರಿಯಾಗಿದೆ ಲೀಲಾ ಆ ಅಂಬಾರಿಯೇ ನನ್ನ ಅಸ್ತ್ರ. ಅದರಿಂದಲೇ ಎಜೆ ಪ್ರಾಣವನ್ನು ತೆಗೆಯುವುದು. ಈಗ ಏನ್ ಮಾಡ್ತೀಯಾ ಎನ್ನುತ್ತಾನೆ. ಅದಕ್ಕೆ ಲೀಲಾ ಅದನ್ನು ಎಜೆಯಿಂದ ದೂರ ಮಾಡುವುದು ಗೊತ್ತು ಎನ್ನುತ್ತಾಳೆ.

  ಲೀಲಾಳನ್ನು ಕೊಂದೇ ಬಿಟ್ನಾ ಎಜೆ..?

  ಲೀಲಾಳನ್ನು ಕೊಂದೇ ಬಿಟ್ನಾ ಎಜೆ..?

  ಲೀಲಾ ತಕ್ಷಣವೇ ಆ ಅಂಬಾರಿಯನ್ನು ತೆಗೆದುಕೊಂಡು ಮನೆಯಿಂದ ಆಚೆ ಓಡಿ ಬರುತ್ತಾಳೆ. ಗೇಟ್‌ನಿಂದ ಹೊರಗೆ ಅಂಬಾರಿಯನ್ನು ಬಿಸಾಡುತ್ತಾಳೆ. ಇದನ್ನು ನೋಡುವ ಎಜೆ ಗಾಬರಿಯಾಗಿ ಓಡಿ ಬರುತ್ತಾನೆ. ಅಂಬಾರಿ ಬಳಿ ಹೋಗಿ ಅಂತರಾ ಎಂದು ಅಳುತ್ತಾನೆ. ಬಳಿಕ ಲೀಲಾ ಕುತ್ತಿಗೆಗೆ ಕೈ ಹಾಕಿ ಸಾಯಿಸಲು ಮುಂದಾಗುತ್ತಾನೆ. ಯಾರೂ ನನ್ನನ್ನು ತಡೆಯಬೇಡಿ. ನೀನು ನನ್ನ ಅಂತರಾಳನ್ನು ಸಾಯಿಸಿಬಿಟ್ಟೆಯಾ.? ಯಾಕೆ ನನ್ನ ಅಂತರಾನ ಸಾಯಿಸಿದೆ ಎಂದು ಹೇಳುತ್ತಾನೆ. ಇನ್ನೇನು ಲೀಲಾ ಸತ್ತೇ ಹೋದಳು ಎಂದುಕೊಳ್ಳುವಷ್ಟರಲ್ಲಿ ವಿಕ್ರಮ್ ತಡೆಯುತ್ತಾನೆ.

  ವೈದ್ಯರ ಮಾತನ್ನು ಕೇಳಿ ಆರ್ಯ ಬದುಕಿದ್ದಾನೆ ಎಂಬ ಸತ್ಯವನ್ನು ಪ್ರಿಯದರ್ಶಿನಿ ಮುಚ್ಚಿಡುತ್ತಾಳಾ..?ವೈದ್ಯರ ಮಾತನ್ನು ಕೇಳಿ ಆರ್ಯ ಬದುಕಿದ್ದಾನೆ ಎಂಬ ಸತ್ಯವನ್ನು ಪ್ರಿಯದರ್ಶಿನಿ ಮುಚ್ಚಿಡುತ್ತಾಳಾ..?

  ಸ್ವಲ್ಪದರಲ್ಲೇ ಲೀಲಾ ಬಚಾವ್

  ಸ್ವಲ್ಪದರಲ್ಲೇ ಲೀಲಾ ಬಚಾವ್

  ಆದರೂ ಎಜೆ ಕೇಳುವುದಿಲ್ಲ. ನನ್ನ ಅಂತರಾಳನ್ನು ಸಾಯಿಸಿದ್ದಾಳೆ. ನಾನು ಇವಳನ್ನು ಬಿಡೋದಿಲ್ಲ ಎಂದು ಸಾಯಿಸಲು ಮುಂದಾಗುತ್ತಾನೆ. ಆಗ ವಿಕ್ರಮ್ ನಿನ್ನ ಅಂತರಾ ಸತ್ತಿಲ್ಲ ಬದುಕೇ ಇದ್ದಾಳೆ. ಇದು ಬೇರೆ ಅಂಬಾರಿ. ನಿಜವಾದ ಅಂಬಾರಿ ನಿನ್ನ ರೂಮಿನಲ್ಲಿದೆ ಎಂದು ಹೇಳುತ್ತಾನೆ. ಎಜೆ ಹೌದಾ ಎಂದು ಕೇಳಿ, ಲೀಲಾಳನ್ನು ಬಿಟ್ಟು ಸೀದಾ ರೂಮಿಗೆ ಓಡಿ ಹೋಗುತ್ತಾನೆ. ಎಜೆ ರೂಮಿನ ಕಬೋರ್ಡ್ ನಲ್ಲಿ ಅಂಬಾರಿ ಇರುತ್ತದೆ. ಅದನ್ನು ಎಜೆ ಎತ್ತಿಕೊಂಡು ಅಂತರಾ ಎಂದು ತಬ್ಬಿಕೊಳ್ಳುತ್ತಾನೆ.

  ಎಜೆ ಲವ್ ಸ್ಟೋರಿ ಕೇಳಿದ ಲೀಲಾ

  ಎಜೆ ಲವ್ ಸ್ಟೋರಿ ಕೇಳಿದ ಲೀಲಾ

  ತಕ್ಷಣವೇ ಲೀಲಾ ಅಜ್ಜಿಗೆ ಕರೆ ಮಾಡಿದ್ದಾಳೆ. ಅಜ್ಜಿ ಅಂತರಾ ಎಂದರೆ ಎಜೆಗೆ ಯಾಕಷ್ಟು ಇಷ್ಟ. ಅಂತರಾ ಹಾಗೂ ಎಜೆ ಅಷ್ಟೊಂದು ಪ್ರೀತಿಸುತ್ತಿದ್ದರಾ..? ಆ ಅಂಬಾರಿಯಲ್ಲಿ ಏನಿದೆ ಎಂದು ಕೇಳುತ್ತಾಳೆ. ಆಗ ಅಜ್ಜಿ ಅಂತರಾ ಮತ್ತು ಎಜೆಯ ಲವ್ ಸ್ಟೋರಿಯನ್ನು ಹೇಳುವುದಕ್ಕೆ ಮುಂದಾಗುತ್ತಾರೆ. ಅಂತರಾ ಕಾಲೇಜಿನಲ್ಲಿ ಓದುವಾಗ ನಡೆಯುವ ಘಟನೆಯ ಬಗ್ಗೆ ಈಗ ಧಾರಾವಾಹಿಯ ಕಥೆ ಶುರುವಾಗಿದೆ. ಕಾಲೇಜಿನಲ್ಲಿ ಎಲ್ಲರಿಂದ ಒಳ್ಳೆಯ ಹೆಸರು ಪಡೆದಿರುವ ಅಂತರಾಗೆ ಹುಡುಗನೊಬ್ಬ ಹಿಂಸೆ ಕೊಡುತ್ತಿರುತ್ತಾನೆ. ಈಗ ಎಜೆ ಯಂಗ್ ಲುಕ್ ನಲ್ಲಿ ಕಾಲೇಜಿಗೆ ಎಂಟ್ರಿಕೊಟ್ಟಿದ್ದಾನೆ.

  ಎಜೆ ಯಂಗ್ ಲುಕ್‌ಗೆ ಪ್ರೇಕ್ಷಕರು ಫಿದಾ

  ಎಜೆ ಯಂಗ್ ಲುಕ್‌ಗೆ ಪ್ರೇಕ್ಷಕರು ಫಿದಾ

  ಈಗ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಹಾಗೂ ಅಂತರಾ ಪ್ರೇಮ ಕಥೆಯನ್ನು ಅಜ್ಜಿ ಹೇಳುತ್ತಿದ್ದು, ಎಜೆಯ ಯಂಗ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಧಾರಾವಾಹಿಯ ಪ್ರೋಮೋದಲ್ಲಿ ಎಜೆ ಸಕತ್ ಆಗಿ ಕಾಣುತ್ತಿದ್ದಾರೆ. ಅಭಿರಾಮ್ ಕಾಲೇಜು ದಿನದ ಕಥೆಯನ್ನು ಕಲರ್ ಫುಲ್ ಆಗಿ ಚಿತ್ರೀಕರಿಸಲಾಗಿದೆ. ಅಭಿ ಹಾಗೂ ಅಂತರಾ ಅವರ ಪ್ರೇಮ ಕಥೆಯನ್ನು ನೋಡಲು ಪ್ರೇಕ್ಷಕರು ಕೂಡ ಕಾತುರರಾಗಿದ್ದಾರೆ.

  English summary
  Hitler Kalyana serial 10th October Episode Written Update. Leela threw Ambari. AJ tries to kill leela. And ajji starts telling love story of AJ and anthara
  Monday, October 10, 2022, 19:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X