twitter
    For Quick Alerts
    ALLOW NOTIFICATIONS  
    For Daily Alerts

    ಮಗಳಿಂದ ತಂದೆಯ ಅಂತ್ಯಸಂಸ್ಕಾರ: 'ಕನ್ನಡತಿ' ಧಾರವಾಹಿ ಪ್ರೇರಣೆ

    |

    ಕನ್ನಡದ ಜನಪ್ರಿಯ ಧಾರವಾಹಿ 'ಕನ್ನಡತಿ' ಇಂದ ಪ್ರೇರಣೆ ಪಡೆದು ಕುಟುಂಬವೊಂದು ಸಂಪ್ರದಾಯವನ್ನು ಮುರಿದು ಹೊಸ ಸಂಪ್ರದಾಯವನ್ನು ಕಟ್ಟಿದ ಘಟನೆ ನಡೆದಿದೆ.

    ಗಂಡು ಮಕ್ಕಳಷ್ಟೆ ಅಂತಿಮ ಸಂಸ್ಕಾರ ಮಾಡುವ ಪದ್ಧತಿ ಬಹು ಹಳೆಯ ಕಾಲದಿಂದಲೂ ಚಾಲ್ತಿಯಲ್ಲಿದೆ. ಹೆಣ್ಣು ಮಕ್ಕಳು ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಆದರೆ ಕನ್ನಡತಿ ಧಾರವಾಹಿಯಲ್ಲಿ ನಾಯಕಿ ತನ್ನ ತಂದೆಯ ಅಂತ್ಯ ಸಂಸ್ಕಾರ ಮಾಡುವ ದೃಶ್ಯವಿದೆ. ಬಹು ಚರ್ಚೆ-ವಿಚಾರ ವಿಮರ್ಶೆಗಳ ಬಳಿಕ ಧಾರವಾಹಿ ನಾಯಕಿ ತಂದೆಯ ಅಂತ್ಯ ಸಂಸ್ಕಾರ ಮಾಡುತ್ತಾರೆ.

    ಇದೇ ದೃಶ್ಯವನ್ನು ಪ್ರೇರಣೆಯಾಗಿ ಪಡೆದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀತದ ಊರೊಂದರಲ್ಲಿ ಮಹಿಳೆಯಿಂದ ಆಕೆಯ ತಂದೆಗೆ ಅಂತ್ಯ ಸಂಸ್ಕಾರ ಮಾಡಿಸಲಾಗಿದೆ. ಅಲ್ಲಿನ ಜನರೂ ಸಹ ಈ ಪ್ರಗತಿಪರ ನಡೆಗೆ ಒಪ್ಪಿಗೆ ಸೂಚಿಸಿದ್ದಾರೆ.

    Inspired From Kannadathi Serial, Girl Did Final Rituals Of Her Father

    ಕಾರವಾರ ಬಳಿಕ ಕುರ್ನಿಪೇಟೆಯಲ್ಲಿ ಚಂದ್ರಕಾಂತ್ ಬುದೊ ಎಂಬುವರು ಶುಕ್ರವಾರ ನಿಧನರಾದರು. ಅವರಿಗೆ ಒಂಬತ್ತು ಮಂದಿ ಹೆಣ್ಣು ಮಕ್ಕಳು. ಮೂವರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಆದರೆ ಅವರ ಅಳಿಯಂದಿರು ಅಂತಿಮ ಶಾಸ್ತ್ರ ಮಾಡಲಿಲ್ಲ.

    ಆಗ ಊರಿನವರೇ ಸೇರಿ ಹೆಣ್ಣು ಮಗಳ ಕೈಯಲ್ಲಿಯೇ ಚಂದ್ರಕಾಂತ್ ಬುದೊ ಅವರಿಗೆ ಅಂತಿಮ ಸಂಸ್ಕಾರ ಮಾಡಿಸಿದರು. ಗಂಡು ಮಕ್ಕಳೇ ಅಂತಿಮ ಸಂಸ್ಕಾರ ಮಾಡಬೇಕೆಂಬ ಅಕಾರ ಸಂಪ್ರದಾಯವನ್ನು ಮುರಿದು ಹೊಸದಕ್ಕೆ ನಾಂದಿ ಹಾಡಲಾಯಿತು. ಈ ಘಟನೆಗೆ ಪ್ರೇರಣೆ ಒದಗಿಸಿದ್ದು ಕನ್ನಡತಿ ಧಾರವಾಹಿ.

    English summary
    Inspired from kannadathi serial a girl did final rituals to her dead father. In the Kannadathi serial lead lady did final rituals to her father by braking old tradition.
    Sunday, January 24, 2021, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X