»   » ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಜೀವನ ಚೈತ್ರ'

ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಜೀವನ ಚೈತ್ರ'

Posted By:
Subscribe to Filmibeat Kannada

ಎಂಟು ವರ್ಷಗಳಿಂದ ಸದಭಿರುಚಿಯ ಧಾರಾವಾಹಿಗಳನ್ನು ಕನ್ನಡ ವೀಕ್ಷಕರಿಗೆ ನೀಡುತ್ತಾ ಬಂದಿರುವ ನಿಮ್ಮ ಸುವರ್ಣ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ 'ಜೀವನ ಚೈತ್ರ' ಪ್ರಾರಂಭವಾಗಲಿದೆ.

ತಂದೆ - ತಾಯಿ ಇಲ್ಲದ ಜೀವನ್ ಒಬ್ಬ ಸಾಮಾನ್ಯ ಟೆಕ್ನೀಷಿಯನ್. ತನ್ನ ಮೂವರು ತಂಗಿಯಂದಿರನ್ನು ತಂದೆ-ತಾಯಿ ಸ್ಥಾನದಲ್ಲಿ ನಿಂತು ಬೆಳೆಸಿರುತ್ತಾನೆ. ಅವನಿಗೆ ತನ್ನ ಸಂತೋಷಕ್ಕಿಂತ ತನ್ನ ಮೂವರು ತಂಗಿಯರಾದ ಚಂದನಾ, ವಂದನಾ ಮತ್ತು ಕೀರ್ತನಾ ಅವರ ಖುಷಿಯೇ ಮುಖ್ಯ.

'Jeevana Chaitra' - New serial in Suvarna Channel

ಆದರೆ ತಂಗಿಯರಿಗೆ, ಅಣ್ಣನಿಗೆ ತಕ್ಕ ಹೆಂಡತಿಯನ್ನು, ಮನೆ ಬೆಳಗೋ ಅತಿಗೆಯನ್ನು ತರಬೇಕು ಎನ್ನೋ ಆಸೆ. ಚೈತ್ರ ಎನ್ನುವ ಹುಡುಗಿ ಅಣ್ಣನಿಗೆ ಸರಿಯಾದ ಜೋಡಿ ಎಂದು ತಂಗಿಯಂದಿರು ನಿರ್ಧರಿಸುತ್ತಾರೆ. ಈ ನಡುವೆ ಜೀವನ್ ಹಿಂದೆ ಕಾವ್ಯಾ ಎನ್ನುವ ಶ್ರೀಮಂತ ಹುಡುಗಿ ಬೀಳುತ್ತಾಳೆ. ಆದರೆ ಜೀವನ್, ಕಾವ್ಯಾಳ ಪ್ರೀತಿ ನಿರಾಕರಿಸುತ್ತಾನೆ. ಆದರೆ ಹಠ ಬಿಡದ ಕಾವ್ಯಾ ಜೀವನ್ ನ ತನ್ನವನನ್ನಾಗಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಾಳೆ. [ಸಂಭ್ರಮದ ಚಿತ್ರಪುಟ ; ಸುವರ್ಣ ಲೇಡೀಸ್ ಕ್ಲಬ್ ಗೆ 5 ವರ್ಷ.!]

ಜೀವನ್-ಚೈತ್ರ ಒಂದಾಗುತ್ತಾರಾ ಅಥವಾ ಊಹಿಸಲು ಅಸಾಧ್ಯವಾದ ಉಪಾಯಗಳಿಂದ ಕಾವ್ಯಾ ಜೀವನ್ ನ ಒಲಿಸಿಕೊಂಡು ಬಿಡುತ್ತಾಳಾ? ಜೀವನ್ ಮತ್ತವನ ಕುಟುಂಬದ ಕಥೆ ಏನು? ಹೀಗೆ ಪ್ರತಿ ಕ್ಷಣ ಕುತೂಹಲದಿಂದ ಕೂಡಿದ ಕುಟುಂಬದ ಎಲ್ಲರಿಗೂ ಇಷ್ಟವಾಗುವ ಭಾವನಾತ್ಮಕ ಧಾರಾವಾಹಿ 'ಜೀವನ ಚೈತ್ರ'

ಆರ್.ಎ.ಎಸ್.ನಾರಾಯಣನ್, ಎ.ಅಬ್ದುಲ್ಲಾ ನಿರ್ಮಿಸುತ್ತಿರುವ 'ಜೀವನ ಚೈತ್ರ'ಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಕೈಲಾಶ್ ಮಳವಳ್ಳಿ. 'ಜೀವನ ಚೈತ್ರ' ಧಾರಾವಾಹಿಯಲ್ಲಿ ಜೀವನ್ ಆಗಿ ರಾಘವೇಂದ್ರ ನಟಿಸುತ್ತಿದ್ದಾರೆ. ಚೈತ್ರ ಆಗಿ ಪ್ರೀತಿ ಶ್ರೀನಿವಾಸ್, ಕಾವ್ಯಾ ಆಗಿ ಸಂಜನಾ ಚಿದಾನಂದ್ ಕಾಣಿಸಿಕೊಳ್ಳಲಿದ್ದಾರೆ. ಜೀವನ್ ತಂಗಿಯರಾಗಿ ರಶ್ಮಿ, ದಿವ್ಯಾ, ಮೇಘಾ ನಟಿಸುತ್ತಿದ್ದಾರೆ. [ಕನ್ನಡ ಕಿರುತೆರೆಗೆ ಕಾಲಿಟ್ಟ ಹ್ಯಾಂಡ್ಸಮ್ ಹೀರೋ ರಘು ಮುಖರ್ಜಿ]

'ಜೀವನ ಚೈತ್ರ' ಇದೇ ಏಪ್ರಿಲ್ 25 ರಿಂದ ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

-
ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಜೀವನ ಚೈತ್ರ'

ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಜೀವನ ಚೈತ್ರ'

-
-
-
-
-
-
-
-
English summary
Kannada Entertainment Channel Suvarna has come up with a new serial called 'Jeevana Chaitra' which will go on air from April 25th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada