For Quick Alerts
  ALLOW NOTIFICATIONS  
  For Daily Alerts

  ಸಂಜು ಮತ್ತು ಅನು ಇಬ್ಬರೂ ದೇವಸ್ಥಾನದಲ್ಲಿ ಭೇಟಿ ಮಾಡುತ್ತಾರಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಪ್ರಿಯದರ್ಶಿನಿ ಕನಸಲ್ಲಿ ಜೋಗ್ತವ್ವ ಬಂದು ಸಂಜು ವಿಚಾರದಲ್ಲಿ ಮುಚ್ಚಿಟ್ಟಿರುವ ಸತ್ಯವನ್ನು ಹೇಳಿಬಿಡು. ಮುಚ್ಚಿಟ್ಟ ಸತ್ಯ ಈಗ ವಿಷವಾಗುತ್ತಿದೆ ಎಂದು ಎಚ್ಚರಿಸಿದ್ದಾಳೆ. ಹಾಗಾಗಿ ಪ್ರಿಯದರ್ಶಿನಿ ಸತ್ಯವನ್ನು ಶಾರದಾ ದೇವಿ ಅವರಿಗೆ ಹೇಳಲು ಮುಂದಾಗಿದ್ದಾಳೆ.

  ಅನುಗೆ ಈಗ ದೇವಸ್ಥಾನಕ್ಕೆ ಹೋಗುವುದಕ್ಕೆ ಇಷ್ಟವಿಲ್ಲ. ಹಾಗಿದ್ದರೂ ಆರ್ಯನ ಹೆಸರಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿರುವುದಕ್ಕೆ ಬಲವಂತವಾಗಿ ಬಂದಿದ್ದಾಳೆ. ಆದರೆ, ದೇವಸ್ಥಾನದಿಂದ ಹಾಗೆಯೇ ವಾಪಸ್ ಹೋಗಲು ಮುಂದಾಗಿದ್ದಾಳೆ.

  ಒಟಿಟಿ, ಟಿವಿ ಎರಡರಲ್ಲೂ ಮಿಂಚಿದ ಸಾನ್ಯಾ ಐಯ್ಯರ್, ಬಿಗ್‌ಬಾಸ್ ಮನೆಯಲ್ಲಿದ್ದಿದ್ದು ಎಷ್ಟು ದಿನ?ಒಟಿಟಿ, ಟಿವಿ ಎರಡರಲ್ಲೂ ಮಿಂಚಿದ ಸಾನ್ಯಾ ಐಯ್ಯರ್, ಬಿಗ್‌ಬಾಸ್ ಮನೆಯಲ್ಲಿದ್ದಿದ್ದು ಎಷ್ಟು ದಿನ?

  ಸಂಜು ದೇವಸ್ಥಾನಕ್ಕೆ ಬಂದಿರುವುದಕ್ಕೆ ಭಯಗೊಂಡಿದ್ದಾನೆ. ಅನು ತನ್ನನ್ನು ನೋಡಿ ತಪ್ಪು ತಿಳಿದುಕೊಳ್ಳುತ್ತಾಳೆ. ಅನು ಈ ಮೆಸೇಜ್ ಅನ್ನು ಬೇಕಂತಲೇ ಕಳಿಸಿದ್ದಾನೆ ಎಂದು ಅಂದುಕೊಳ್ಳಬಹುದು ಎಂದು, ಸಂಜು ಕೂಡ ದೇವಸ್ಥಾನದಿಂದ ಹೋಗಲು ಯತ್ನಿಸುತ್ತಾನೆ.

  ಕ್ಷಮೆ ಕೇಳಿದ ಸಂಜು

  ಕ್ಷಮೆ ಕೇಳಿದ ಸಂಜು

  ಸಂಜು ಮತ್ತು ಅನು ಇಬ್ಬರೂ ಹೇಗಾದರೂ ಮಾಡಿ ಭೇಟಿಯಾಗಬಾರದು ಎಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಇಬ್ಬರೂ ಕೂಡ ದೇವರ ಎದುರಿಗೆ ಎದುರಾಗುತ್ತಾರೆ. ಇದರಿಂದ ಇಬ್ಬರೂ ಶಾಕ್ ಆಗುತ್ತಾರೆ. ಸಂಜುಗೆ ಮುಜುಗರವಾಗುತ್ತದೆ. ಸಂಜು ನನ್ನನ್ನು ಕ್ಷಮಿಸಿ. ನಾನು ಮೆಸೇಜ್ ಮಾಡಿದ ಮೇಲೆ ಇಲ್ಲಿಗೆ ಬರುವುದು ಗೊತ್ತಾಯ್ತು. ನಾನು ಇಂಟೆಂಷನ್ ಇಂದ ಯಾವುದನ್ನೂ ಹೇಳಿಲ್ಲ. ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ ಎಂದು ಹೇಳುತ್ತಾನೆ. ಆದರೆ, ಇದಕ್ಕೆಲ್ಲಾ ಅನು ಏನನ್ನೂ ಹೇಳುವುದಿಲ್ಲ.

  ಸಂಕಷ್ಟದಲ್ಲಿ ಬಾಲ: ಜಗನ್ನಾಥನ ಕೆಲಸದಿಂದ ಬಾಲನ ಬಣ್ಣ ಬಯಲಾಗುತ್ತಾ..?ಸಂಕಷ್ಟದಲ್ಲಿ ಬಾಲ: ಜಗನ್ನಾಥನ ಕೆಲಸದಿಂದ ಬಾಲನ ಬಣ್ಣ ಬಯಲಾಗುತ್ತಾ..?

  ನನ್ನ ಕೈ ಬಿಡಬೇಡಿ ಎಂದ ಸಂಜು

  ನನ್ನ ಕೈ ಬಿಡಬೇಡಿ ಎಂದ ಸಂಜು

  ಇನ್ನು ಮಾನ್ಸಿ, ಸಂಜು ಮತ್ತು ಅನು ಇಬ್ಬರನ್ನೂ ಹುಡುಕಿಕೊಂಡು ಬರುತ್ತಾಳೆ. ಆಗ ಇಬ್ಬರನ್ನೂ ನೋಡಿ. ನೀವಿಬ್ಬರೂ ಇಲ್ಲೇ ಇದ್ದೀರಾ. ಊರೆಲ್ಲಾ ಹುಡುಕುತ್ತಿದ್ದೇವೆ. ಬನ್ನಿ ಎಂದು ಕರೆದು ಹೋಗುತ್ತಾಳೆ. ಆದರೆ, ಇಬ್ಬರೂ ಮಾತನಾಡುತ್ತಾ ನಿಂತಿರುತ್ತಾರೆ. ಸಂಜು ತನಗೆ ಹಳೆಯ ನೆನಪು ಯಾವುದೂ ಬರುತ್ತಿಲ್ಲ. ನನಗೆ ಅದು ಬೇಕಾಗೂ ಇಲ್ಲ. ನನಗೆ ಈಗಿರುವ ಪ್ರಪಂಚವೇ ಚೆನ್ನಾಗಿದೆ. ಹೀಗೇ ಇದ್ದು ಬಿಡುತ್ತೇನೆ. ನನ್ನ ಕೈ ಬಿಡಬೇಡಿ ಎಂದು ಹೇಳುತ್ತಾನೆ. ಅದಕ್ಕೆ ಅನು ನಿಮಗೆ ನ್ಯಾಯ ಕೊಡಿಸುತ್ತೇನೆ. ನಿಮ್ಮ ಹಿಂದೆ ಬಿದ್ದಿರುವವರ ಬಗ್ಗೆ ನಾನು ತಿಳಿದುಕೊಳ್ಳುತ್ತೇನೆ. ಅದಕ್ಕೆಲ್ಲಾ ನೀವು ಯೋಚಿಸಬೇಡಿ ಎಂದು ಹೇಳುತ್ತಾಳೆ.

  ಅನುಗೆ ಗಿಫ್ಟ್ ಕೊಟ್ಟ ರಮ್ಯಾ-ಸಂಪತ್

  ಅನುಗೆ ಗಿಫ್ಟ್ ಕೊಟ್ಟ ರಮ್ಯಾ-ಸಂಪತ್

  ಇನ್ನು ಶಾರದಾ, ಅನುಳನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾಳೆ. ಅದಕ್ಕೆ ಪುಷ್ಪಾ ನಾಳೆ ಅನು ಬರ್ತಡೇ ಇದೆ. ಈಗ ಬೇಡ ನಾಳೆ ನಾನೇ ಕಳಿಸುತ್ತೇನೆ ಎಂದು ಹೇಳುತ್ತಾಳೆ. ಇತ್ತ ಮಧ್ಯರಾತ್ರಿ ರಮ್ಯಾ ಹಾಗೂ ಸಂಪತ್ ಅನುಳನ್ನು ಎಬ್ಬಿಸಿ ಟೆರೆಸ್ ಮೇಲೆ ಕರೆಯುತ್ತಾರೆ. ಅನು ಇಷ್ಟೊತ್ತಿನಲ್ಲಿ ಯಾಕೆ ಕರೆದಿದ್ದು, ಏನಾಯ್ತು ಎಂದು ಕೇಳುತ್ತಾಳೆ. ಅದಕ್ಕೆ ರಮ್ಯಾ ಬರ್ತಡೇಗೆ ವಿಷ್ ಮಾಡುತ್ತಾಳೆ. ಅನು ಖುಷಿ ಪಡುತ್ತಾಳೆ. ರಮ್ಯಾ ಗಿಫ್ಟ್ ಒಂದನ್ನು ಕೊಡುತ್ತಾಳೆ. ಅನು ಅದನ್ನು ತೆಗೆದು ನೋಡಿದಾಗ ಅದರಲ್ಲಿ ಮಗುವಿನ ಬಟ್ಟೆ ಇರುತ್ತದೆ. ಸಂಪತ್ ತಾಯಿ ಮಗುವಿನ ಶೋ ಪೀಸ್ ಅನ್ನು ಕೊಡುತ್ತಾನೆ. ಇವನ್ನೆಲ್ಲಾ ನೋಡಿ ಅನು ಕೊಂಚ ಖುಷಿ ಪಡುತ್ತಾಳೆ.

  ದೊರೆಯ ಹುಡುಕುವ ಪ್ರಯತ್ನ ಮತ್ತೆ ಆರಂಭಿಸಿದ ಸ್ನೇಹಾದೊರೆಯ ಹುಡುಕುವ ಪ್ರಯತ್ನ ಮತ್ತೆ ಆರಂಭಿಸಿದ ಸ್ನೇಹಾ

  ಸತ್ಯ ಹೇಳುತ್ತೇನೆ ಎಂದು ಪ್ರಿಯದರ್ಶಿನಿ ಹಠ

  ಸತ್ಯ ಹೇಳುತ್ತೇನೆ ಎಂದು ಪ್ರಿಯದರ್ಶಿನಿ ಹಠ

  ಪ್ರಿಯದರ್ಶಿನಿ ತಾನು ಸತ್ಯವನ್ನು ಮುಚ್ಚಿಟ್ಟು ಬಹಳ ದೊಡ್ಡ ತಪ್ಪು ಮಾಡಿದ್ದೇನೆ. ಶಾರದಾ ದೇವಿ ಅವರಿಗೆ ಸತ್ಯ ಹೇಳಲೇಬೇಕು ಎಂದು ಹೊರಟಿದ್ದಾಳೆ. ಪ್ರಭು ದೇಸಾಯಿ ಇನ್ನೂ ಒಂದು ಸಲ ಯೋಚನೆ ಮಾಡು. ಇಷ್ಟು ಆತುರ ಬೇಡ ಎಂದು ಹೇಳುತ್ತಾನೆ. ಆಗ ಪ್ರಿಯದರ್ಶಿನಿ ಇಲ್ಲ ಸತ್ಯ ಹೇಳಲೇಬೇಕು. ಆಮೇಲೆ ಅವರು ನನ್ನ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡರೂ ಸರಿಯೇ ಎಂದು ಹೇಳುತ್ತಾಳೆ. ಈಗ ಪ್ರಿಯದರ್ಶಿನಿ ಹೇಳುವ ಸತ್ಯದಿಂದ ಅನು ಮನೆಯಲ್ಲಿ ಏನೇನಾಗುತ್ತೋ..?

  English summary
  jothe jotheyali Serial 07th november Episode Written Update. priyadarshini is ready to tell the truth for sharada devi about arya death and sanju.
  Monday, November 7, 2022, 19:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X