Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೊತೆಜೊತೆಯಲಿ: ಅನುಗೆ ಪ್ರಜ್ಞೆ ಬಂದಾಯ್ತು: ಝೇಂಡೇ ಪ್ಲ್ಯಾನ್ ಮತ್ತೆ ಠುಸ್ ಆಯ್ತು..
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಅನುಗೂ ಆಕ್ಸಿಡೆಂಟ್ ಆಗಿದೆ. ಆರ್ಯನೂ ಪ್ರಜ್ಞೆ ಇಲ್ಲದಂತೆ ಮಲಗಿದ್ದಾನೆ. ಇದೆಲ್ಲವೂ ಮನೆಯವರನ್ನು ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ. ಯಾಕೆ ಹೀಗೆಲ್ಲಾ ಆಗುತ್ತಿದೆ ಎಂಬುದೇ ಯಾರಿಗೂ ಗೊತ್ತಾಗುತ್ತಿಲ್ಲ.
ಇನ್ನು ಝೇಂಡೇ ತನ್ನ ಪ್ಲ್ಯಾನ್ ಪ್ರಕಾರವೇ ಎಲ್ಲಾ ಕೆಲಸವನ್ನು ಮಾಡಿದ್ದಾನೆ. ಆರ್ಯನಿಗೆ ಪ್ರಜ್ಞೆ ತಪ್ಪಿಸಿ, ತನಗೆ ಬೇಕಾದಂತೆ ನಡೆದುಕೊಂಡಿದ್ದಾನೆ. ಅನುಗೆ ಆಕ್ಸಿಡೆಂಟ್ ಮಾಡಿಸಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಪದೇ ಪದೇ ಅನುಳನ್ನು ಸಾಯಿಸಲು ಪ್ಲ್ಯಾನ್ ಮಾಡುತ್ತಲೇ ಇದ್ದಾನೆ.
ಶ್ರೀದೇವಿ
ಡ್ರಾಮ
ಕಂಪನಿಯಲ್ಲಿ
ನರೇಶ್-ಪವಿತ್ರಾ
ಮದುವೆ:
ವಿಡಿಯೋ
ವೈರಲ್!
ಆದರೆ, ಅನು ಪರ ದೇವರಿದ್ದು, ಆಕೆಯನ್ನು ಪ್ರತೀ ಸಲವೂ ದೇವರೇ ಕಾಪಾಡುತ್ತಿದ್ದಾರೆ. ಕಾರ್ ಬ್ರೇಕ್ ಕಟ್ ಮಾಡಿಸಿ ಅನುಗೆ ಆಕ್ಸಿಡೆಂಟ್ ಮಾಡಿಸಿದರೂ ಅನು ಜೀವಂತಾಗಿದ್ದಾಳೆ. ಆದರೆ ಈ ವಿಚಾರ ಇನ್ನೂ ಝೇಂಡೇಗೆ ಗೊತ್ತಾಗಿಲ್ಲ.

ಮಾನ್ಸಿ ಮನೆಗೆ ವಾಪಸ್
ಪುಷ್ಪಾಗೆ ಮಗಳನ್ನು ನೋಡಲು ಆಗಲಿಲ್ಲವಲ್ಲ ಎಂಬುದೇ ಚಿಂತೆಯಾಗಿದೆ. ವಠಾರದ ಜಗಳದಿಂದಾಗಿ, ಅನು ಮನೆಗೆ ಹೊರಟಿದ್ದ ಪುಷ್ಪ ಹಾಗೂ ಸುಬ್ಬು ಇಬ್ಬರೂ ವಠಾರದಲ್ಲೇ ಉಳಿದುಕೊಳ್ಳಬೇಕಾಗುತ್ತದೆ. ಇದರಿಂದ ಪುಷ್ಪಾಳ ಚಿಂತೆ ಹೆಚ್ಚಾಗುತ್ತದೆ. ಮಗಳು ಹೇಗಿದ್ದಾಳೋ..? ಅವಳ ಪರೀಸ್ಥಿತಿ ಏನಾಗಿದೆಯೋ ಎಂದು ಯೋಚಿಸುತ್ತಿರುತ್ತಾಳೆ. ಇತ್ತ ಮಾನ್ಸಿ ಮನೆಗೆ ವಾಪಸ್ ಬರುತ್ತಾಳೆ. ಅನುಗೆ ಏನಾಗಿದೆ ಎಂದು ತಿಳಿದುಕೊಳ್ಳಲು ರೂಮಿಗೆ ಹೋಗುತ್ತಾಳೆ. ವೈದ್ಯರು ಬಂದು ಅನುಳನ್ನು ಟೆಸ್ಟ್ ಮಾಡುತ್ತಾರೆ.
ಬೆಟ್ಟದ
ಹೂ
&
ಜೇನುಗೂಡು:
ನಡುಕೋಟೆ
ಮನೆಯ
ಶಾಸ್ತ್ರದಲ್ಲಿ
ಹೂವಿ-ಮಾಲಿನಿ
ಮುಖಾಮುಖಿ

ಆರ್ಯನಿಗೆ ಪ್ರಜ್ಞೆ ಬಂದೇ ಬಿಡ್ತು
ಆರ್ಯನನ್ನು ಮೊದಲಿದ್ದ ಜಾಗಕ್ಕೆ ಕರೆದುಕೊಂಡು ಹೋಗುವಂತೆ ಝೇಂಡೇ ಹೇಳುತ್ತಾನೆ. ಕಾರ್ ಡ್ರೈವರ್ ಅನ್ನು ಹೆದರಿಸಿ, ಆರ್ಯನನ್ನು ಇರುವ ಜಾಗಕ್ಕೆ ಕಳಿಸಲಾಗುತ್ತದೆ. ಆರ್ಯನಿಗೆ ಎಚ್ಚರವಾಗುವಾಗಲೂ ಝೇಂಡೇ, ಅನು ಎಂದೇ ಕನವರಿಸುತ್ತಾನೆ. ನಾನು ಝೇಂಡೇ ಅನ್ನ ಕಳೆದುಕೊಂಡು ಬಿಟ್ಟೆ ಅನು. ನನ್ನ ಕ್ಷಮಿಸು ಬಿಡು ಎಂದು ಕೊರಗುತ್ತಾನೆ. ಆದರೆ ಕಣ್ಣು ಬಿಟ್ಟು ನೋಡಿದಾಗ ಅಲ್ಲಿ ಕಾರು ಡ್ರೈವರ್ ಇರುತ್ತಾರೆ. ಆಗ ಡ್ರೈವರ್ ಕಾರು ಆಕ್ಸಿಡೆಂಟ್ ಆಗಿತ್ತು ಸರ್, ನನಗೆ ಎಚ್ಚರವಾದಾಗ ನಾವಿಲ್ಲಿದ್ವಿ ಎಂದು ಹೇಳುತ್ತಾನೆ. ಸರಿ ತುಂಬಾ ಸಮಯವಾಗಿದೆ ಎನಿಸುತ್ತದೆ. ಮನೆಗೆ ಹೋಗೋಣ ಎಂದು ಇಬ್ಬರೂ ಹೊರಡುತ್ತಾರೆ.

ಆರ್ಯನಿಗೆ ಕಾದಿತ್ತು ಶಾಕ್
ಆರ್ಯ ಮನೆಗೆ ಬರುತ್ತಿದ್ದಂತೆಯೇ ಆಂಬುಲೆನ್ಸ್ ಅನ್ನು ಕಂಡು ಶಾಕ್ ಆಗುತ್ತಾನೆ. ಶಾರದಾ ಬಳಿ ಹೋಗಿ, ನಿಮಗೇನು ಆಗಿಲ್ಲ ಅಲ್ವಾ..? ಆಂಬುಲೆನ್ಸ್ ಯಾಕೆ ನಿಂತಿದೆ.? ಮನೆಯಲ್ಲಿ ಯಾರಿಗೆ ಏನಾಗಿದೆ ಎಂದು ಕೇಳುತ್ತಾನೆ? ಶಾರದಾ ನೀನೆಲ್ಲಿಗೆ ಹೋಗಿದ್ದೆ ಎಂದು ಕೇಳಿದ್ದಕ್ಕೆ, ಝೇಂಡೇ ಎಲ್ಲಿ ಎಂದು ಕೇಳುತ್ತಾನೆ. ಆಗ ಹರ್ಷ ಯಾವಾಗಲೂ ಝೇಂಡೇ ಬಗ್ಗೆ ಕೇಳೋದೇ ಆಯ್ತು. ಝೇಂಡೇ ಬಿಟ್ಟು ಈ ಮನೆಯಲ್ಲಿ ಬೇರೆ ಯಾರೂ ಇಲ್ವಾ.? ಮೇಲೆ ಹೋಗಿ ನೋಡಿ ಯಾರಿಗೆ ಏನಾಗಿದೆ ಎಂದು ಗೊತ್ತಾಗುತ್ತೆ ಎಂದು ಕೂಗಾಡುತ್ತಾನೆ.
ಆರ್ಯ ಬಂದ ಕೂಡಲೇ ಅನುಗೆ ಎಚ್ಚರ!
ಆರ್ಯ ಮೇಲೆ ಹೋಗಿ ನೋಡುತ್ತಾನೆ. ಆರ್ಯ, ಅನು ಎಂದು ಕೂಗಿದಾಗ ಅನುಗೆ ಎಚ್ಚರವಾಗುತ್ತೆ. ಆರ್ಯ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾನೆ. ಅನುಗೆ ಏನಾಯ್ತು.? ಇಲ್ಯಾಕೆ ಟ್ರೀಟ್ ಮೆಂಟ್ ಕೊಡುತ್ತಿದ್ದೀರಾ ಎಂದು ಕೇಳುತ್ತಾನೆ. ಆಗ ಹರ್ಷ ಅತ್ತಿಗೆಗೆ ಆಕ್ಸಿಡೆಂಟ್ ಆಗಿತ್ತು ಎಂದು ಹೇಳುತ್ತಾನೆ. ನಂತರ ಅನು ಹಾಗೂ ಆರ್ಯ ಇಬ್ಬರೂ ಮಾತನಾಡುತ್ತಿರುತ್ತಾರೆ. ಆಗ ಅನು ನಿಮ್ಮನ್ನು ಹುಡುಕಿಕೊಂಡು ಹೋಗಿದ್ದಕ್ಕೆ ನನಗೆ ಹೀಗಾಯ್ತು ಎನ್ನುತ್ತಾಳೆ. ಆಗ ಆರ್ಯ ಇಷ್ಟೆಲ್ಲಾ ಆದರೂ ಝೇಂಡೇ ಪತ್ತೇನೆ ಇಲ್ಲ. ನನ್ನ ಬದುಕಲ್ಲಿ ಇಷ್ಟೆಲ್ಲಾ ಆಗುತ್ತಿದೆ ಎಂದರೆ, ಝೇಂಡೇ ನಾ ಯಾರೋ ಏನೋ ಮಾಡಿದ್ದಾರೆ. ನಮ್ಮನ್ನು ನಿರ್ನಾಮ ಮಾಡಲು ಯಾರೋ ಝೇಂಡೇಗೆ ಏನಾ ಮಾಡಿದ್ದಾರೆ ಎಂದೇ ಅರ್ಥ ಎಂದು ಹೇಳುತ್ತಾನೆ.