Just In
Don't Miss!
- Automobiles
ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಡುಕಾಟಿ ಮಾನ್ಸ್ಟರ್ ಬೈಕ್ ಉತ್ಪಾದನೆ ಆರಂಭ
- News
ನಂದಿಬೆಟ್ಟಕ್ಕೆ ರೋಪ್ ವೇ; ದಶಕಗಳ ಕನಸಿನ ಯೋಜನೆ ಹೇಗಿರಲಿದೆ?
- Sports
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ, ಸಂಪೂರ್ಣ ಮಾಹಿತಿ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
1 ವಾರದಲ್ಲಿ 27 ಬಿಲಿಯನ್ ಡಾಲರ್ ಕಳೆದುಕೊಂಡ ಎಲೋನ್ ಮಸ್ಕ್
- Lifestyle
ಈ ವಿಚಾರ ಕೇಳಿದ್ರೆ ಮುಂದೆಂದೂ ನೀವು ಪಪ್ಪಾಯ ಬೀಜವನ್ನು ಬಿಸಾಡಲಾರರಿ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕಮಲಿ' ಸೀರಿಯಲ್ ಕಿರಿಕ್: ನಿರ್ದೇಶಕರ ವಿರುದ್ಧ ದೂರು ನೀಡಿದ ನಿರ್ಮಾಪಕ.!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ, ಹೆಚ್ಚು ಟಿ.ಆರ್.ಪಿ ಹೊಂದಿರುವ ಧಾರಾವಾಹಿಗಳ ಪೈಕಿ 'ಕಮಲಿ' ಕೂಡ ಒಂದು.! ಹಳ್ಳಿ ಹುಡುಗಿ 'ಕಮಲಿ' ಸುತ್ತ ಸುತ್ತುವ ಈ ಸೀರಿಯಲ್ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
'ಕಮಲಿ' ಧಾರಾವಾಹಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದ ನಿರ್ಮಾಪಕ ರೋಹಿತ್.ಎಸ್ ಇದೀಗ ಬೆಂಗಳೂರು ಪೊಲೀಸ್ ಕಮಿಷನರ್ ಮೊರೆ ಹೋಗಿದ್ದಾರೆ.
''ಕಮಲಿ' ನಿರ್ದೇಶಕ ಅರವಿಂದ್ ಕೌಶಿಕ್ ರಿಂದ ನನಗೆ ಮೋಸ ಆಗಿದೆ. ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಉಡಾಫೆ ಉತ್ತರ ಕೊಡುತ್ತಾರೆ'' ಎಂದು ಆರೋಪಿಸಿ ನಿರ್ಮಾಪಕ ರೋಹಿತ್.ಎಸ್ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಗೆ ದೂರು ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

'ಕಮಲಿ' ಧಾರಾವಾಹಿಗೆ ಬಂಡವಾಳ ಹಾಕಿದ್ದ ರೋಹಿತ್
28 ಮೇ 2018 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಸೀರಿಯಲ್ 'ಕಮಲಿ'. ಈ ಧಾರಾವಾಹಿಯನ್ನು ರೋಹಿತ್.ಎಸ್ ನಿರ್ಮಾಣ ಮಾಡಿದ್ದಾರೆ. ಮೊದಮೊದಲು 'ಕಮಲಿ' ಸಂಚಿಕೆಗಳ ಟೈಟಲ್ ಕಾರ್ಡ್ ನಲ್ಲಿ 'ನಿರ್ಮಾಪಕ: ರೋಹಿತ್.ಎಸ್' ಎಂದೇ ತೋರಿಸಲಾಗಿದೆ. ಬಳಿಕ ರೋಹಿತ್ ಹೆಸರನ್ನ ತೆಗೆದು ಹಾಕಲಾಗಿದೆ.

73 ಲಕ್ಷ ರೂಪಾಯಿ ನೀಡಿರುವ ರೋಹಿತ್
'ಕಮಲಿ' ಧಾರಾವಾಹಿಗಾಗಿ ನಿರ್ದೇಶಕ ಅರವಿಂದ್ ಕೌಶಿಕ್ ರವರ ಸತ್ವ ಮೀಡಿಯಾಗೆ ರೋಹಿತ್ ಒಟ್ಟು 73 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಮನೆಯವರ ಒಡವೆಗಳನ್ನು ಅಡವಿಟ್ಟು, ಸಂಬಂಧಿಕರು ಮತ್ತು ಲೇವಾದೇವಿಯವರಿಂದ ಸಾಲ ಪಡೆದು 73 ಲಕ್ಷ ರೂಪಾಯಿಗಳನ್ನು ರೋಹಿತ್ ಹೊಂದಿಸಿದ್ದರು.

ಹೆಸರು ಇಲ್ಲ.! ಲಾಭ ಇಲ್ಲ.!
'ಕಮಲಿ' ಧಾರಾವಾಹಿಗಾಗಿ ಲಕ್ಷಾಂತರ ರೂಪಾಯಿ ನೀಡಿದ್ದರೂ, 287ನೇ ಸಂಚಿಕೆಯಿಂದ 'ಕಮಲಿ' ಧಾರಾವಾಹಿಯ ಟೈಟಲ್ ಕಾರ್ಡ್ ನಲ್ಲಿ ನಿರ್ಮಾಪಕ ರೋಹಿತ್ ಹೆಸರನ್ನು ಪ್ರಸ್ತಾಪಿಸಿಲ್ಲ. ಸಾಲದಕ್ಕೆ, ಧಾರಾವಾಹಿಯಿಂದ ಬಂದ ಲಾಭವನ್ನೂ ನೀಡಿಲ್ಲ ಎಂದು ಆರೋಪಿಸಿ ರೋಹಿತ್ ಇದೀಗ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ನ್ಯಾಯ ದೊರಕಿಸಿ..
''ಕಮಲಿ' ಧಾರಾವಾಹಿಯನ್ನು ಬೇರೆ ನಿರ್ಮಾಪಕರಿಗೆ ವರ್ಗಾಯಿಸಲು ಒಳ ಸಂಚು ರೂಪಿಸಲಾಗಿದೆ. ನಿರ್ದೇಶಕ ಅರವಿಂದ್ ಕೌಶಿಕ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಬಳಿ ಮಾತನಾಡಿದರೆ ಉಡಾಫೆ ಉತ್ತರ ಬರುತ್ತದೆ. ನನಗೆ ಸಾಲ ಕೊಟ್ಟಿರುವವರಿಂದ ಮಾನಸಿಕ ಕಿರುಕುಳ ಆಗುತ್ತಿದೆ. ನನಗೆ ಬರಬೇಕಾದ ಬಂಡವಾಳ, ಲಾಭಾಂಶವನ್ನು ಕೊಡಿಸಿ. ನ್ಯಾಯ ದೊರಕಿಸಿ'' ಎಂದು ಪೊಲೀಸ್ ಆಯುಕ್ತರಲ್ಲಿ ನಿರ್ಮಾಪಕ ರೋಹಿತ್ ಮನವಿ ಮಾಡಿದ್ದಾರೆ.

ಯಾರ್ಯಾರ ವಿರುದ್ಧ ದೂರು.?
73 ಲಕ್ಷ ಹೂಡಿಕೆ ಹಣ ಮತ್ತು ಲಾಭದ ವಿಚಾರವಾಗಿ 'ಕಮಲಿ' ನಿರ್ದೇಶಕ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ, ನವೀನ್ ಸಾಗರ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ನಿರ್ಮಾಪಕ ರೋಹಿತ್ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ.