For Quick Alerts
  ALLOW NOTIFICATIONS  
  For Daily Alerts

  'ಕಣ್ಮಣಿ' ಕಲ್ಯಾಣ: ಅಂಜಲಿ-ಕಿಶನ್ ಮದುವೆಗೆ ಡಿಕೆ ಅಡ್ಡಿ.?

  By Harshitha
  |

  ಉದಯ ಟಿವಿಯಲ್ಲಿ ರಾತ್ರಿ 10 ಗಂಟೆಗೆ ಪ್ರಸಾರ ಆಗುತ್ತಿರುವ 'ಕಣ್ಮಣಿ' ಧಾರಾವಾಹಿ ಹೊಸ ತಿರುವಿನೊಂದಿಗೆ ನಿಮ್ಮ ಮನೆಗೆ ಬರಲಿದೆ. ಎಲ್ಲ ಅಡೆತಡೆಗಳನ್ನ ಮೀರಿ ಕಿಶನ್-ಅಂಜಲಿ ಮದುವೆ ಸಂಭ್ರಮದಿಂದ ನಡೆಯುತ್ತಿದೆ.

  ಡಿಕೆಯ ಬಂಧನದಿಂದ ತಪ್ಪಿಸಿಕೊಂಡು ಬಂದ ಕಾವ್ಯ, ಅಂಜಲಿಯಾಗಿ ಕಿಶನ್ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾಳೆ. ಕಿಶನ್ ಪ್ರೀತಿಯನ್ನ ತಿರಸ್ಕಾರ ಮಾಡಲಾಗದ ಅಂಜಲಿ ಡಿಕೆಯ ಭಯದಲ್ಲೂ ಮದುವೆಗೆ ತಯಾರಾಗಿದ್ದಾಳೆ.

  ಅಂಜಲಿಯ ಗಂಡ ಡಿಕೆ ಎಂಬ ವಿಷಯ ತಿಳಿಯದೇ ಕಿಶನ್ ಅವನನ್ನು ಮದುವೆಗೆ ಆಹ್ವಾನಿಸಿದ್ದಾನೆ. ಡಿಕೆ ಮದುವೆಗೆ ಬಾರದಂತೆ ತಡೆಯಲು ಅಂಜಲಿ ಜೊತೆ ಡಿಕೆ ಭಾವ ಭಾಸ್ಕರ್ ಕೈ ಜೋಡಿಸಿದ್ರೆ, ಅಂಜಲಿ ತಂದೆಯೂ ಮನೆಕೆಲಸದವನಾಗಿ ಮಗಳ ಮದುವೆಗೆ ಅಡ್ಡಿಯಾಗದಂತೆ ಕಾಯುತ್ತಿದ್ದಾನೆ.

  ಡಿಕೆ ಮುಂದೆ ಜಗದೀಶ್ ಬಣ್ಣ ಬಯಲಾಗುತ್ತಾ.? 'ಕಣ್ಮಣಿ'ಯಲ್ಲಿ ಇಂದು ಏನಾಗ್ಬಹುದು.? ಡಿಕೆ ಮುಂದೆ ಜಗದೀಶ್ ಬಣ್ಣ ಬಯಲಾಗುತ್ತಾ.? 'ಕಣ್ಮಣಿ'ಯಲ್ಲಿ ಇಂದು ಏನಾಗ್ಬಹುದು.?

  ಡಿಕೆಯಿಂದ, ಕಿಶನ್-ಅಂಜಲಿ ಮದುವೆ ನಿಂತು ಹೋಗುತ್ತಾ? ಮತ್ತೆ ಅಂಜಲಿ ಡಿಕೆ ಕೈವಶವಾಗ್ತಾಳಾ? ಮುಂದೆ ಕಿಶನ್ ಏನಾಗ್ತಾನೆ? ಹೀಗೆ ಹಲವು ತಿರುವುಗಳೊಂದಿಗೆ 'ಕಣ್ಮಣಿ' ರಾತ್ರಿ 10 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  ಮದುವೆಗೆ ಉದಯ ಕುಟುಂಬದ ಇತರೆ ಧಾರಾವಾಹಿಯ ನಟ-ನಟಿಯರು ಆಗಮಿಸಲಿದ್ದು ಮದುವೆಗೆ ಮತ್ತಷ್ಟು ರಂಗು ತರಿಸಲಿದ್ದಾರೆ. 'ಮಾನಸ ಸರೋವರ' ಧಾರಾವಾಹಿಯ ನಾಯಕಿ ಸುನಿಧಿ, 'ಬ್ರಹ್ಮಾಸ್ತ್ರ'ದಿಂದ ಶಿವರಂಜಿನಿ, ಸಂತು, ಖುಷಿ ಮತ್ತು ಆನಂದ್ ಕಥೆಗೆ ಪೂರಕವಾಗಿ ಮದುವೆಗೆ ಬರಲಿದ್ದಾರೆ.

  'ಕಣ್ಮಣಿ' ಧಾರಾವಾಹಿಯಲ್ಲಿ ಇಂದು ಅಂಜಲಿಗೆ ಕಾದಿದೆ ಅಚ್ಚರಿ.!'ಕಣ್ಮಣಿ' ಧಾರಾವಾಹಿಯಲ್ಲಿ ಇಂದು ಅಂಜಲಿಗೆ ಕಾದಿದೆ ಅಚ್ಚರಿ.!

  ತ್ರಿಕೋನ ಕಥೆಯ 'ಕಣ್ಮಣಿ' ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.00ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  Udaya TV's popular serial 'Kanmani' written update: Will Anjali marry Kishan.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X