Don't Miss!
- Sports
ಇದು ವಾಶಿಂಗ್ಟನ್ vs ನ್ಯೂಜಿಲೆಂಡ್ ಪಂದ್ಯ ಎಂಬಂತಿತ್ತು: ಸುಂದರ್ ಆಟಕ್ಕೆ ಹಾರ್ದಿಕ್ ಮೆಚ್ಚುಗೆ
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಭಿಮಾನಿಗಳಿಗೆ ಚಾಲೆಂಜ್ ನೀಡಿದ ಅನಿರುದ್ಧ್: ಸವಾಲ್ ಸ್ವೀಕರಿಸಲು ನೀವು ರೆಡಿನಾ?
Recommended Video
ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸದ್ಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಜೊತೆಜೊತೆಯಲಿ, ಕಡಿಮೆ ಅವಧಿಯಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದೆ.
ಧಾರಾವಾಹಿಯಲ್ಲಿ ಅನಿರುದ್ಧ್ ಅವರ ಆರ್ಯವರ್ಧನ್ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿರುವ ಅನಿರುದ್ಧ್ ಈಗ ಅಭಿಮಾನಿಗಳಿಗೆ ಒಂದು ಚಾಲೆಂಜ್ ಹಾಕಿದ್ದಾರೆ. ಇತ್ತೀಚಿಗೆ ಫಿಟ್ ನೆಸ್ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗೆ ಅನಿರುದ್ಧ್ ಕೂಡ ಒಂದು ಸವಾಲ್ ಎಸೆದಿದ್ದಾರೆ. ಅನಿರುದ್ಧ ನೀಡಿರುವ ಚಾಲೆಂಜ್ ಪರಿಸರ ಕಾಳಜಿ ಬಗ್ಗೆ.
ಕಿರುತೆರೆಯಲ್ಲಿ
ದಾಖಲೆ
ನಿರ್ಮಿಸಿದ
ವಿಷ್ಣುವರ್ಧನ್
ಅಳಿಯ:
ಎರಡನೇ
ವಾರವೂ
ನಂ.1

ಗಿಡನೆಡುವಂತೆ ಚಾಲೆಂಜ್ ಹಾಕಿದ ಅನಿರುದ್ಧ್
"ನಿಮ್ಮ ಕೈಲಾದಷ್ಟು ಗಿಡಗಳನ್ನು ನೆಡಬೇಕು. ಒಂದು ವೇಳೆ ಗಿಡ ನೆಡಲು ಸ್ಥಳಾವಕಾಶ ಇಲ್ಲ ಅಂದ್ರೆ ಮನೆಯ ಬಳಿಯೆ ಪಾಟ್ ನಲ್ಲಿಯೆ ಒಂದು ಗಿಡವನ್ನು ನೆಡಬಹುದು. ಗಿಡ ನೆಡುವ ಫೋಟೋವನ್ನು ಶೇರ್ ಮಾಡಿ" ಎಂದು ಹೇಳಿದ್ದಾರೆ ಅಲ್ಲದೆ ಗಿಡ ನೆಡುವ ಫೋಟೋವನ್ನು ಅನಿರುಧ್ಧ್ ಅವರಿಗೆ ಕಳುಹಿಸುವುದಲ್ಲಿದೆ 10 ಜನ ಸ್ನೇಹಿತರಿಗೆ ಟ್ಯಾಗ್ ಮಾಡಬೇಕು. ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ
ಕಿರುತೆರೆ
ಲೋಕದಲ್ಲಿ
ದಾಖಲೆ
ಬರೆದ
ವಿಷ್ಣುವರ್ಧನ್
ಅಳಿಯ
ಅನಿರುದ್ಧ್

ಅದೃಷ್ಟಶಾಲಿಗೆ ವಿಶೇಷ ಉಡುಗೊರೆ
ಅನಿರುದ್ಧ ಅವರಿಗೆ ಕಳುಹಿಸಿದ ಫೋಟೋವನ್ನು ಸಾಧ್ಯವಾದಷ್ಟು ಅವರ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡುತ್ತಾರಂತೆ. ಯಾರ ಪೋಸ್ಟ್ ಗೆ ಅತೀ ಹೆಚ್ಚು ಲೈಕ್ ಬರುತ್ತೋ ಅವರಿಗೆ ಅನಿರುದ್ಧ್ ಕಡೆಯಿಂದ ಬಹುಮಾನ ಕೂಡ ಸಿಗಲಿದೆ. ಆದ್ರೆ ಗಿಡಗಳನ್ನು ನೆಟ್ಟು ಸುಮ್ಮನಾಗುವುದಲ್ಲ. ಅದನ್ನು ಚೆನ್ನಾಗಿ ಪೋಷಿಸಬೇಕು. ಒಂದು ತಿಂಗಳ ನಂತರ ಒಬ್ಬ ಅದೃಷ್ಟಶಾಲಿಯ ಮನೆಗೆ ವಿಶೇಷ ಉಡುಗೊರೆ ತಲುಪಲಿದೆ.

ಚಾಲೆಂಜ್ ಸ್ವೀಕರಿಸಿದ ಅಭಿಮಾನಿಗಳು
ಸಾಕಷ್ಟು ಜನ ಅನಿರುದ್ಧ್ ಹಾಕಿದ ಚಾಲೆಂಜ್ ಅನ್ನು ಸ್ವೀಕರಿಸುತ್ತಿದ್ದಾರೆ. ಈಗಾಗಲೆ ಅಭಿಮಾನಿಗಳು ಗಿಡಿಗಳನ್ನು ನೆಟ್ಟು ಫೋಟೋವನ್ನು ಕ್ಲಿಕ್ಕಿಸಿಕೊಂಡು ಅನಿರುದ್ಧ್ ಅವರಿಗೆ ಶೇರ್ ಮಾಡುತ್ತಿದ್ದಾರೆ. ಆಯ್ದ ಕೆಲವು ಫೋಟೋಗಳನ್ನು ಅನಿರುದ್ಧ್ ತನ್ನ ಪೇಜ್ ನಲ್ಲಿ ಶೇರ್ ಮಾಡುತ್ತಿದ್ದಾರೆ.
ಧಾರಾವಾಹಿ
ಪ್ರಪಂಚಕ್ಕೆ
ರೀ
ಎಂಟ್ರಿ
ಕೊಟ್ಟ
ವಿಷ್ಣು
ದಾದನ
ಅಳಿಯ
ಅನಿರುದ್ಧ್

ಮೂರು ವಾರಗಳನ್ನು ಪೂರೈಸಿದ ದಾರಾವಾಹಿ
"ಜೊತೆಜೊತೆಯಲಿ ಮೂರು ವಾರಗಳ ಪಯಣವನ್ನು ಯಶಸ್ವಿಗೊಳಿಸಿದ್ದು ನೀವುಗಳು. ನಿಮ್ಮಿಂದಲೇ ಈ ದಾಖಲೆಗಳು. ನಿಮ್ಮ ಅಭಿಮಾನದಿಂದಲೇ ಎಲ್ಲವೂ. ನಿಮ್ಮ ಪ್ರೀತಿಗೆ ನಾವು ಸದಾ ಚಿರಋಣಿ. ನಿಮ್ಮ ಪ್ರೀತಿ ಸದಾ ನಮ್ಮ ತಂಡದ ಮೇಲಿರಲಿ" ಎಂದು ಅನಿರುದ್ಧ ಹೇಳಿಕೊಂಡಿದ್ದಾರೆ. ಧಾರಾವಾಹಿ ಪ್ರಾರಂಭವಾದಾಗಿನಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪ್ರೇಕ್ಷಕರು ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ.