ತೆಲುಗಿನ ಸೀರಿಯಲ್ ನಲ್ಲೂ ನಟ ಚಂದನ್ ಮಿಂಚಿಂಗ್.!
ಕನ್ನಡ ಕಿರುತೆರೆಯಲ್ಲಿ ನಟ ಚಂದನ್ ಚಿರಪರಿಚಿತ. 'ರಾಧಾ ಕಲ್ಯಾಣ' ಮತ್ತು 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗಳ ಮೂಲಕ ಕರುನಾಡ ಮನೆ ಮನಗಳನ್ನು ತಲುಪಿದವರು ನಟ ಚಂದನ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಚಂದನ್ ಗೆ ಖ್ಯಾತಿ ತಂದುಕೊಡ್ತು.
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ, ಚಂದನ್ ಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಹುಡುಕೊಂಡು ಬಂದ್ವು. ಸಿನಿಮಾಗಾಗಿ 'ಲಕ್ಷ್ಮಿ ಬಾರಮ್ಮ' ಸೀರಿಯಲ್ ನಿಂದ ಚಂದನ್ ಹೊರಗುಳಿದರು. 'ಪರಿಣಯ', 'ಎರಡೊಂದ್ಲ ಮೂರು', 'ಲವ್ ಯೂ ಆಲಿಯಾ', 'ಪ್ರೇಮ ಬರಹ' ಮುಂತಾದ ಸಿನಿಮಾಗಳಲ್ಲಿ ಚಂದನ್ ನಟಿಸಿದರು.

ಸಿನಿಮಾಗಳಲ್ಲಿ ದೊಡ್ಡ ಬ್ರೇಕ್ ಸಿಗದ ಕಾರಣ ಚಂದನ್ ಯೂಟರ್ನ್ ಹೊಡೆದು ಸೀರಿಯಲ್ ಲೋಕಕ್ಕೆ ಮರಳಿದ್ದಾರೆ. ಸದ್ಯ ಚಂದನ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇದೇ ಗ್ಯಾಪ್ ನಲ್ಲಿ ತೆಲುಗಿನ ಕಿರುತೆರೆಗೂ ಜಿಗಿದಿರುವ ಚಂದನ್, ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಮಿಂಚುತ್ತಿದ್ದಾರೆ. ಕಾಕತಾಳೀಯ ಅಂದ್ರೆ, 'ಸಾವಿತ್ರಮ್ಮಗಾರಿ ಅಬ್ಬಾಯಿ' ಸೀರಿಯಲ್ ನಲ್ಲೂ ''ಎರಡನೇ ಮದುವೆ'' ಕಾನ್ಸೆಪ್ಟ್ ಇದೆ. ಈ ಬಗ್ಗೆ ಚಂದನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಒಟ್ನಲ್ಲಿ, ಕನ್ನಡ ಮತ್ತು ತೆಲುಗಿನ ಸೀರಿಯಲ್ ಗಳಲ್ಲಿ ಬಿಜಿಯಾಗಿರುವ ಚಂದನ್ ಸದ್ಯ ಯಾವುದೇ ಸಿನಿಮಾ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ.
English summary
Kannada Actor Chandan is acting in Telugu serial Savitrammagari Abbayi.


Click it and Unblock the Notifications