»   » ರಮ್ಯಾ ಕಡೆಯಿಂದ ನಂಬಿಕೆ ದ್ರೋಹ: ಐಂದ್ರಿತಾ ರೇ ಬಾಯ್ಬಿಟ್ಟ ಕಠೋರ ಸತ್ಯ.!

ರಮ್ಯಾ ಕಡೆಯಿಂದ ನಂಬಿಕೆ ದ್ರೋಹ: ಐಂದ್ರಿತಾ ರೇ ಬಾಯ್ಬಿಟ್ಟ ಕಠೋರ ಸತ್ಯ.!

Posted By:
Subscribe to Filmibeat Kannada

ಒಂದು ಕಾಲದಲ್ಲಿ ನಟಿ ಐಂದ್ರಿತಾ ರೇ ಹಾಗೂ ರಮ್ಯಾ ಹೀಗಿರಲಿಲ್ಲ. ಅವರಿಬ್ಬರ ಮಧ್ಯೆ ಒಣ ಹುಲ್ಲು ಹಾಕಿದರೂ, ಚಿಗುರೊಡೆಯುವಷ್ಟು ಗಾಢವಾದ ನಂಬಿಕೆ, ಸ್ನೇಹವಿತ್ತು. ಆದರೆ ನಂತರದ ದಿನಗಳಲ್ಲಿ ಪರಿಸ್ಥಿತಿ ಹಾಗೇ ಉಳಿಯಲಿಲ್ಲ. ಇಬ್ಬರ ನಡುವೆ ಹಸಿ ಹುಲ್ಲು ಹಾಕಿದರೂ ಧಗ್ಗನೆ ಉರಿಯುವಷ್ಟು ದ್ವೇಷ ಮೂಡಲಾರಂಭಿಸಿತು. ಇಬ್ಬರು ನಟಿಯರ ಮಧ್ಯೆ ಶೀತಲ ಸಮರ ಪ್ರಾರಂಭ ಆಯ್ತು.

ಎರಡು ಜಡೆಗಳ ಜಗಳ ಅಲ್ಲಲ್ಲಿ ಜಗಜ್ಜಾಹೀರಾದಂತೆ ಕಂಡುಬಂದರೂ, ಅದಕ್ಕೆ ಕಾರಣ ಮಾತ್ರ ಬಹಿರಂಗ ಆಗಲಿಲ್ಲ.

ಐಂದ್ರಿತಾ ರೇ ಹಾಗೂ ರಮ್ಯಾ ನಡುವಿನ ಕೋಪಕ್ಕೆ ಕಾರಣವೇನು ಎಂಬುದರ ಬಗ್ಗೆ ನಟಿ ಐಂದ್ರಿತಾ ರೇ ರವರನ್ನ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಮಾತನಾಡಿಸಿದ್ದಾರೆ. ಮುಂದೆ ಓದಿರಿ....

ರಮ್ಯಾ-ಐಂದ್ರಿತಾ ಫ್ರೆಂಡ್ ಶಿಪ್

''ರಮ್ಯಾ ಜೊತೆ ನೀವು ಫ್ರೆಂಡಾ.?'' ಅಂತ ಅಕುಲ್ ಕೇಳಿದ್ದಕ್ಕೆ, ''ಹೌದು, ನಾನು ಎಲ್ಲರ ಜೊತೆಗೂ ಫ್ರೆಂಡ್ ಆಗಿದ್ದೇನೆ'' ಎಂದು ಐಂದ್ರಿತಾ ರೇ ಹೇಳಿದರು.

ಮತ್ತೆ ಗಲಾಟೆ ಆಗಿದ್ದು.?

''ನೀವು ಮತ್ತು ರಮ್ಯಾ ಒಳ್ಳೆಯ ಫ್ರೆಂಡ್ಸ್ ಆಗಿದ್ರಿ ಮುಂಚೆ. ಇತ್ತೀಚೆಗೆ ಏನೋ ಗಲಾಟೆ ಆಗಿದೆ ಅಂತ ಕೇಳ್ಪಟ್ವಿ'' ಎಂದು ಅಕುಲ್ ಕೇಳಿದ್ದಕ್ಕೆ, ''ಇತ್ತೀಚೆಗೆ ಅಲ್ಲ.... ಸಣ್ಣ ಸಣ್ಣ ವಿಚಾರಕ್ಕೆ ಸಂಬಂಧಗಳನ್ನ ಹಾಳು ಮಾಡುವವರು ನಮ್ಮ ಇಂಡಸ್ಟ್ರಿಯಲ್ಲಿ ಸುಮಾರು ಜನ ಇದ್ದಾರೆ'' ಎಂದು ಮಾರ್ಮಿಕವಾಗಿ ಐಂದ್ರಿತಾ ರೇ ಉತ್ತರ ಕೊಟ್ಟರು.

ಗೌರವ ಕೊಡುತ್ತೇನೆ

''ರಮ್ಯಾ ಹಾಗೂ ನಿಮ್ಮ ಮಧ್ಯೆ ಕಾಂಪಿಟೇಷನ್ ಇತ್ತಾ.?'' ಎಂದು ಅಕುಲ್ ಕೇಳಿದಕ್ಕೆ, ''ನನ್ನ ಹಾಗೂ ರಮ್ಯಾ ನಡುವೆ ಯಾವುದೇ ಕಾಂಪಿಟೇಷನ್ ಇರಲಿಲ್ಲ. ಅವರು ನನಗಿಂತ ತುಂಬಾ ಸೀನಿಯರ್. ನಾನು ಅವರಿಗೆ ತುಂಬಾ ಗೌರವ ಕೊಡುತ್ತೇನೆ'' ಎಂದರು ಐಂದ್ರಿತಾ.

ಭಿನ್ನಾಭಿಪ್ರಾಯಕ್ಕೆ ಕಾರಣ.?

''ಹಾಗಾದರೆ, ನಿಮ್ಮ ಹಾಗೂ ರಮ್ಯಾ ನಡುವೆ ಭಿನ್ನಾಭಿಪ್ರಾಯ ಎಲ್ಲಿಂದ ಬಂತು.?'' ಎಂದು ಅಕುಲ್ ಪ್ರಶ್ನೆ ಮಾಡಿದ್ದಕ್ಕೆ, ''ನಾನು ಅವರ ಮೇಲೆ ತುಂಬಾ ನಂಬಿಕೆ ಇಟ್ಟಿದೆ. ಆದರೆ, ಎಲ್ಲೋ ಒಂದು my trust was broken (ನನ್ನ ನಂಬಿಕೆ ಸುಳ್ಳಾಯ್ತು)'' ಎಂದರು ಐಂದ್ರಿತಾ ರೇ.

ವಿವಾದ ಬೇಡ

ಅಕುಲ್ ಬಾಲಾಜಿ - ''ಅವರು ನಿಮ್ಮ ನಂಬಿಕೆಯನ್ನ ನಿಭಾಯಿಸಲು ಆಗಲಿಲ್ಲ''

ಐಂದ್ರಿತಾ ರೇ - ''ಹೌದು''

ಅಕುಲ್ ಬಾಲಾಜಿ - ''ಯಾವ ವಿಚಾರದಲ್ಲಿ...''

ಐಂದ್ರಿತಾ ರೇ - ''ಓ ಕಮಾನ್... ಇದು ಈಗ ಮತ್ತೆ ವಿವಾದ ಆಗುತ್ತೆ''

ಇಷ್ಟ ಪಡಲ್ಲ

ಅಕುಲ್ ಬಾಲಾಜಿ - ''ನನಗೆ ಈ ವಿಚಾರ ಗೊತ್ತಿಲ್ಲ. ನೀವು ರಮ್ಯಾ ರವರನ್ನ ಅಷ್ಟು ನಂಬಿದ್ರಿ. ಆ ನಂಬಿಕೆಯನ್ನ ಅವರು ನಿಭಾಯಿಸಿಲ್ಲ ಅಂದ್ರೆ...''

ಐಂದ್ರಿತಾ ರೇ - ''ಈ ವಿಚಾರವನ್ನ ಮತ್ತೆ ನಾನು ಎಳೆದು ತರಲು ಇಷ್ಟ ಪಡಲ್ಲ. ರಮ್ಯಾ ಈಗ ರಾಜಕೀಯದಲ್ಲಿ ಇದ್ದಾರೆ. ಸುಮ್ ಸುಮ್ಮನೆ ಅವರನ್ನ ಎಳೆದು ತರಲು ನಾನು ಇಷ್ಟ ಪಡಲ್ಲ''

ನನಗೆ ಪ್ರಾಬ್ಲಂ ಇಲ್ಲ

''ಈಗ ನಿಮ್ಮ ಮಧ್ಯೆ ಮಾತುಕತೆ ಇಲ್ವಾ.?'' ಎಂದು ಅಕುಲ್ ಕುತೂಹಲದಿಂದ ಕೇಳಿದಾಗ, ''ನಾನು ಅವರನ್ನ ಸುಮಾರು ವರ್ಷಗಳಿಂದ ಭೇಟಿ ಮಾಡಿಲ್ಲ. ನನಗೆ ಯಾವುದೇ ಪ್ರಾಬ್ಲಂ ಇಲ್ಲ. ಅವರು ನನ್ನ ಮುಂದೆ ಬಂದರೆ, ಖಂಡಿತ ಅವರ ಜೊತೆ ಮಾತನಾಡುತ್ತೇನೆ'' ಎಂದು ರಮ್ಯಾ ಕುರಿತಾದ ಟಾಪಿಕ್ ಗೆ ನಟಿ ಐಂದ್ರಿತಾ ರೇ ಫುಲ್ ಸ್ಟಾಪ್ ಇಟ್ಟರು.

English summary
Kannada Actress Aindrita Ray speaks about Ramya in Colors Super Channel's popular show 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada