For Quick Alerts
  ALLOW NOTIFICATIONS  
  For Daily Alerts

  'ಕನ್ನಡ ಕೋಗಿಲೆ' ಸೀಸನ್ ಮೊದಲ ಸ್ಪರ್ಧಿಗಳು ಏನ್ಮಾಡ್ತಿದ್ದಾರೆ?

  |

  'ಕನ್ನಡ ಕೋಗಿಲೆ' ಕನ್ನಡ ಕಿರುತರೆಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಸಂಗೀತ ಕಾರ್ಯಕ್ರಮಗಳಲ್ಲಿ ಒಂದು. ಸದ್ಯ ಸೀಸನ್ ಮೊದಲ ಶೋ ಅನ್ನು ಯಶಸ್ವಿಯಾಗಿ ಮುಗಿಸಿ ಎರಡನೆ ಶೋ ಕೂಡ ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

  ಮೊದಲ ಬಾರಿಗೆ ಅಂದ್ರೆ ಕನ್ನಡ ಕೋಗಿಲೆ ಸೀಸನ್-1ರ ವಿನ್ನರ್ ಪಟ್ಟ ದೊಡ್ಡಪ್ಪ ಅವರ ಮುಡಿಗೇರಿತ್ತು. ರನ್ನರ್ ಅಪ್ ಆಗಿ ಅಕಿಲಾ ಹೊರಹೊಮ್ಮಿದ್ರು. ಸೀಸನ್ ಮೊದಲು ಸಖತ್ ಖ್ಯಾತಿಗಳಿಸಿದ್ದ ಸಂಗೀತ ಕಾರ್ಯಕ್ರಮ 'ಕನ್ನಡ ಕೋಗಿಲೆ' ಆಗಿತ್ತು. ಇನ್ನು ತೀರ್ಪುಗಾರರಾಗಿ ಕಾಮಿಡಿ ಕಿಂಗ್ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲಾ, ರ್ಯಾಪರ್ ಚಂದನ್ ಶೆಟ್ಟಿ ಮತ್ತು ಖ್ಯಾತ ಗಾಯಕಿ ಅರ್ಚನಾ ಉಡುಪ ಕಾಣಿಸಿಕೊಳ್ಳುತ್ತಿದ್ದಾರೆ.

  ಮತ್ತೆ ಕನ್ನಡ ಕೋಗಿಲೆಗೆ ಬಂದ ನಿರೂಪಕಿ ಅನುಪಮಾ ಗೌಡ

  ಅಂದ್ಹಾಗೆ ಮೊದಲ ಶೋ ಮುಗಿಸಿದ ಸ್ಪರ್ಧಿಗಳು ಈಗ ಎಲ್ಲಿದ್ದಾರೆ? ಕನ್ನಡ ಕೋಗಿಲೆ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದ ಸ್ಪರ್ಧಿಗಳು ಶೋ ಮುಗಿದ ಬಳಿಕ ಏನು ಮಾಡ್ತಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಆದ್ರೆ ಇವರೆಲ್ಲ ಸೀಸನ್-2 ರಲ್ಲಿ ಕಾಣಿಸಿಕೊಳ್ಳುವ ಮೂಲಕ ಏನ್ಮಾಡ್ತಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

  ಉತ್ತರ ಕರ್ನಾಟಕ ಸುತ್ತಿದ ಶ್ವೇತಾ

  ಉತ್ತರ ಕರ್ನಾಟಕ ಸುತ್ತಿದ ಶ್ವೇತಾ

  ಸೀಸನ್ ಒಂದರಲ್ಲಿ ಕಾಣಿಸಿಕೊಂಡಿದ್ದ ಸ್ಪರ್ಧಿ ಶ್ವೇತಾ ಫುಲ್ ಬ್ಯುಸಿಯಾಗಿದ್ದಾರಂತೆ. ಎಲ್ಲಾ ಕಡೆ ಸಂಗೀತ ಶೋಗಳನ್ನು ಕೊಡುತ್ತಿದ್ದಾರಂತೆ. ಅದರಲ್ಲೂ ಉತ್ತರ ಕರ್ನಾಟಕವನ್ನು ಫುಲ್ ಸುತ್ತಿದ್ದಾರಂತೆ. ಉತ್ತರ ಕರ್ನಾಟಕದ ಬಹುತೇಕ ಕಡೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಒಂದು ಕವರ್ ಸಾಂಗ್ ಕೂಡ ಮಾಡಿದ್ದಾರೆ. ಇನ್ನು ಆಲ್ಬಂ ಸಾಂಗ್ ಮಾಡಲು ಪ್ಲಾನ್ ಮಾಡಿದ್ದಾರಂತೆ.

  ನಟಿಯಾದ ಗಾಯಕಿ ಉಮಾ

  ನಟಿಯಾದ ಗಾಯಕಿ ಉಮಾ

  ಗಾಯಕಿ ಉಮಾ ಸಖತ್ ಬ್ಯುಸಿಯಾಗಿದ್ದಾರಂತೆ. ಗಾಯಕಿಯಾಗಿ ಖ್ಯಾತಿ ಗಳಿಸಿದ್ದರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಂತೆ. ತೆಲುಗು ಸಿನಿಮಾ ಒಂದರಲ್ಲಿ ಉಮಾ ಬಣ್ಣ ಹಚ್ಚಿದ್ದಾರಂತೆ. ಜೊತೆಗೆ ಒಂದು ಸಿನಿಮಾಗೆ ಟ್ರ್ಯಾಕ್ ಅನ್ನು ಹಾಡಿದ್ದಾರೆ. ಇನ್ನು ಆಲ್ಬಂ ಸಾಂಗ್ ಮಾಡಲು ಪ್ಲಾನ್ ಮಾಡಿದ್ದಾರಂತೆ. ಜೊತೆಗೆ ಸಂಗೀತ ಕ್ಲಾಸ್ ಗೂ ಸೇರಿಕೊಂಡಿದ್ದಾರಂತೆ.

  ಕತಾರ್ ನಲ್ಲಿ ಅಖಿಲಾ

  ಕತಾರ್ ನಲ್ಲಿ ಅಖಿಲಾ

  ಅಖಿಲಾ ಸೀಸನ್ ಒಂದರ ರನ್ನರ್ ಅಪ್ ಆಗಿದ್ದರು. ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದ ಅಖಿಲಾ ಶೋ ಮುಗಿಸಿ ಹೊರ ಬಂದ ಅಖಿಲಾ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಮುಗಿಸುವ ಕನಸು ಕಂಡಿದ್ದಾರೆ. ಇನ್ನು ಇಡೀ ಕರ್ನಾಟಕದಾದ್ಯಂತ ಸಂಗೀತ ಶೋಗಳನ್ನು ನೀಡುತ್ತಿದ್ದಾರೆ. ಜೊತೆಗೆ ದೂರದ ಕತಾರ್ ನಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರಂತೆ.

  ರವಿಚಂದ್ರನ್ ಸಿನಿಮಾಗೆ ಹಾಡಿದ ದೊಡ್ಡಪ್ಪ

  ರವಿಚಂದ್ರನ್ ಸಿನಿಮಾಗೆ ಹಾಡಿದ ದೊಡ್ಡಪ್ಪ

  ಸೀಸನ್ ಮೊದಲ ಶೋನ ವಿನ್ನರ್ ಆಗಿದ್ದ ದೊಡ್ಡಪ್ಪ ಕೂಡ ಸಖತ್ ಬ್ಯುಸಿಯಾಗಿದ್ದಾರೆ. 400ರಕ್ಕು ಹೆಚ್ಚು ಸನ್ಮಾಗಳನ್ನು ಮಾಡಿದ್ದಾರಂತೆ. ಸಂಗೀತ ನಿರ್ದೇಶಕ ಗುರುಕಿರಣ್ ಅವರ ಸಂಯೋಜನೆಯಲ್ಲಿ ದೊಡ್ಡಪ್ಪ ಹಾಡಿದ್ದಾರೆ. ರವಿ ಚಂದ್ರನ್ ಅಭಿನಯದ ದಶರತ ಸಿನಿಮಾಗೆ ದೊಡ್ಡಪ್ಪ ದ್ವನಿಯಾದಿದ್ದಾರೆ. ಸಂಗೀತ ಕಲಿಯುತ್ತಿದ್ದಾರಂತೆ. ಜೊತೆಗೆ ಅಮ್ಮನಿಗೆ ಒಳ್ಳೆಯ ಮನೆ ಮಾಡಿಕೊಟ್ಟಿದ್ದಾರಂತೆ.

  ಮರಾಠಿ ಆಲ್ಬಂ ಹಾಡು ಹಾಡಿದ ಸಾಗರ್

  ಮರಾಠಿ ಆಲ್ಬಂ ಹಾಡು ಹಾಡಿದ ಸಾಗರ್

  ಸಾಗರ್ ಕನ್ನಡ ಕೋಗಿಲೆ ಶೋ ನಲ್ಲಿ ಕನ್ನಡ ಬರದ ಸ್ಪರ್ಧಿಯಾಗಿದ್ದರು. ಆದ್ರು ಕನ್ನಡ ಮಾತನಾಡುತ್ತ ಕನ್ನಡಿಗರ ಮನಗೆದ್ದಿದ್ದರು. ಆದ್ರೀಗ ಮತ್ತಷ್ಟು ಉತ್ತಮ ಕನ್ನಡ ಮಾತನಾಡುತ್ತ ಎರಡನೆ ಸೀಸನ್ ನಲ್ಲಿ ಕಾಣಿಸಿಕೊಂಡದ್ದಾರೆ. ಅನೇಕ ಸಂಗೀತ ಶೋಗಳನ್ನು ನೀಡುತ್ತಿದ್ದಾರಂತೆ. ಇನ್ನು ಮರಾಠಿ ಆಲ್ಬಂ ಸಾಂಗ್ ಕೂಡ ಹಾಡಿದ್ದಾರಂತೆ.

  ವಿದೇಶ ಸುತ್ತಿದ್ದಾರೆ ಗಣೇಶ್

  ವಿದೇಶ ಸುತ್ತಿದ್ದಾರೆ ಗಣೇಶ್

  ಗಾಯನದ ಜೊತೆಗೆ ಮಾತಿನ ಮೂಲಕ ಎಲ್ಲರ ಮನ ಗೆದ್ದಿದ್ದ ಗಣೇಶ್ ಅವರು ಮತ್ತದೆ ಮಾತಿನ ಶೈಲಿಯ ಮೂಲಕ ಸೀಸನ್-2 ರಲ್ಲಿ ಹಾಜರಾಗಿದ್ರು. "ದೇಹದ ತೂಕ ಮಾತ್ರ ಜಾಸ್ತಿ ಆಗದೆ ರೆಸ್ಯೂಮ್ ನ ತೂಕ ಕೂಡ ಜಾಸ್ತಿ ಆಗಿದೆ. ಊರು ಊರು ಸುತ್ತದ ನಾನು ಈಗ ವಿದೇಶ ಸುತ್ತಿದ್ದೇನೆ, ಸೆಲೆಬ್ರಿಟಿ ಆಗದಿದ್ರು ಸೆಲೆಬ್ರಿಟಿ ಫೀಲ್ ನ ಸೆಲೆಬ್ರೀಟ್ ಮಾಡ್ತಿದ್ದೀನಿ" ಎಂದು ಹೇಳುತ್ತ ಸಂಗೀತ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಬಗ್ಗೆ ಹೋಳಿಕೊಂಡಿದ್ದಾರೆ.

  English summary
  Kannada famous reality show Kannada Kogile season first contestant in season second.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X