»   » ಅಡಿಗರ ಮೊಮ್ಮಗ, ಅಮೆರಿಕದ ಧಾರಾವಾಹಿ ನಿರ್ದೇಶಕ!

ಅಡಿಗರ ಮೊಮ್ಮಗ, ಅಮೆರಿಕದ ಧಾರಾವಾಹಿ ನಿರ್ದೇಶಕ!

Posted By:
Subscribe to Filmibeat Kannada

ಕನ್ನಡ ನಾಡು-ನುಡಿ, ಕನ್ನಡದ 'ಮಣ್ಣಿನ ವಾಸನೆ'ಯನ್ನು ನವ್ಯ ಸಾಹಿತ್ಯ ರೂಪದಲ್ಲಿ ಜನಪ್ರಿಯಗೊಳಿಸಿದ ಕವಿ 'ಗೋಪಾಲಕೃಷ್ಣ ಅಡಿಗ'. ಇಂತ ಅಪ್ಪಟ ಕನ್ನಡಿಗನ ಮೊಮ್ಮಗ ಇದೀಗ ಅಮೆರಿಕದ ಖ್ಯಾತ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯ ನಿರ್ದೇಶಕ ಅಂದ್ರೆ ನೀವು ನಂಬಲೇ ಬೇಕಾದ ವಿಚಾರ.

ಹೌದು, ಕರ್ನಾಟಕದಲ್ಲಿ ಹುಟ್ಟಿ ಅಮೆರಿಕದಲ್ಲಿ ನೆಲೆಯೂರಿರುವ ಅಡಿಗರ ಮಗಳು ಶ್ರೀಮತಿ ವಿದ್ಯಾ ಮತ್ತು ಅಳಿಯ ಡಾ.ತೋನ್ಸೆ ಕೃಷ್ಣ ರಾಜು ಅವರ ಮಗ ಶರತ್ ರಾಜು ಅಮೆರಿಕದ ಪ್ರತಿಷ್ಠಿತ NBC ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

1999 ರಿಂದ NBC ವಾಹಿನಿಯಲ್ಲಿ ಬಹು ಜನಪ್ರಿಯವಾಗಿರುವ LAW & ORDER: SPECIAL VICTIMS UNIT ಅನ್ನುವ ಪತ್ತೇದಾರಿ/ಕ್ರೈಂ ಧಾರಾವಾಹಿಯ 16ನೇ ಸೀಸನ್ ನ SPOUSAL PRIVILEGE ಅನ್ನುವ ಸಂಚಿಕೆಗೆ ಕನ್ನಡಿಗ ಶರತ್ ರಾಜು ನಿರ್ದೇಶಕರಾಗಿದ್ದಾರೆ.

Kannada Poet Gopala Krishna Adiga's grandson director for American T.V Serial

ಮೂಲತಃ ಕನ್ನಡಿಗನೇ ಆಗಿದ್ದರೂ, ಅಮೆರಿಕದಲ್ಲೇ ಹುಟ್ಟಿ ಬೆಳೆದಿರುವ ಶರತ್ ರಾಜು ವೃತ್ತಿಪರ ಪತ್ರಕರ್ತ. ಮಿಷಿಗನ್ ದಿನಪತ್ರಿಕೆಯಲ್ಲಿನ ಅತ್ತ್ಯುತ್ತಮ ಸಾಧನೆಗಾಗಿ ಮಿಷಿಗನ್ ವಿಶ್ವವಿದ್ಯಾನಿಲಯದಿಂದ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನ ಶರತ್ ಮುಡಿಗೇರಿಸಿಕೊಂಡಿದ್ದಾರೆ.

ಫಿಲ್ಮ್ ಮೇಕಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಶರತ್, ಸ್ವತಂತ್ರವಾಗಿ ಅನೇಕ ಫಿಲ್ಮ್ ಗಳನ್ನು ನಿರ್ಮಿಸಿ, ನಿರ್ದೇಶಿಸಿ, ಸಂಕಲನವನ್ನೂ ಮಾಡಿದ್ದಾರೆ.

ಇದೀಗ NBC ಯಂಥ ರಾಷ್ಟ್ರೀಯ ವಾಹಿನಿಯಲ್ಲಿ ವರ್ಷಗಳಿಂದಲೂ ಪ್ರಖ್ಯಾತವಾಗಿರುವ ಪ್ರೈಮ್ ಟೈಮ್ ಧಾರಾವಾಹಿಯ ಸಂಚಿಕೆಯೊಂದಕ್ಕೆ ನಿರ್ದೇಶನ ಮತ್ತು ಸಂಕಲನ ಮಾಡುವ ಅವಕಾಶ ಶರತ್ ಗೆ ಲಭಿಸಿದೆ. ಇದು ಕನ್ನಡಿಗರ ಹೆಮ್ಮೆ ಅಲ್ಲವೇ?

English summary
Kannada Poet Gopala Krishna Adiga's grandson Sharath Raju is roped in to direct a episode for NBC's famous prime time serial Law & Order:Special Victims Unit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada