Don't Miss!
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- News
Assembly elections: ಚುನಾವಣೆಯಲ್ಲಿ ಜೆಡಿಎಸ್ 20 ರಿಂದ 22 ಸ್ಥಾನ ಗೆಲ್ಲಬಹುದು; ಸಿದ್ದರಾಮಯ್ಯ ಭವಿಷ್ಯ
- Sports
Ind vs NZ 1st ODI: ಟೀಮ್ ಇಂಡಿಯಾಗೆ ಗೆಲ್ಲಲು ಸವಾಲಿನ ಗುರಿ ನೀಡಿದ ನ್ಯೂಜಿಲೆಂಡ್
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹತಿಗೆ ಎದುರೇಟು ನೀಡಿದ ಸತ್ಯ, ಕಾರ್ತಿಕ್ ಸಹವಾಸಕ್ಕೆ ಬಂದಾಕೆಯ ಸೊಕ್ಕು ಮುರಿಯುತ್ತಾಳ?
ಸತ್ಯನ ಬಗ್ಗೆ ಸೀತಾ ಮನದಲ್ಲಿ ತಿರಸ್ಕಾರ ಮನೋಭಾವ ಉಂಟಾಗಬೇಕು ಎಂದು ಹೇಳಿ ಮಹತಿ ಅನೇಕ ಪ್ರಯತ್ನ ಮಾಡುತ್ತಿದ್ದಾಳೆ. ಕೀರ್ತನಾ ಹೇಳಿದ ಹಾಗೆ ಮಹಾತಿ ನಡೆದುಕೊಳ್ಳುತ್ತಾ ಬರುತ್ತಿದ್ದಾಳೆ. ಇಲ್ಲ ಸಲ್ಲದನ್ನು ಹೇಳಿ ಸೀತಾ ಮನಸ್ಸನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಾ ಇದ್ದಾಳೆ. ಬಳಿಕ ಮಹತಿ ತನ್ನ ಸೊಸೆ ಬಗ್ಗೆಯೂ ಎಲ್ಲರ ಮುಂದೆ ಹೇಳಿಕೊಳ್ಳುತ್ತಾ ಇರುತ್ತಾಳೆ. ಇದೀಗ ಸೊಸೆ ತನ್ನ ಜೊತೆ ಇಲ್ಲ ಆಕೆ ತನ್ನ ಮಗ ನಿಂದಾ ಡೈವರ್ಸ್ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಾಳೆ. ಇನ್ನು ಇದನ್ನೆಲ್ಲ ಕೇಳಿದ ಸತ್ಯ ಮಹತಿ ವಿರುದ್ದ ಸಿಡಿದೇಳುತ್ತಾಳೆ.
ನಿಮ್ಮ ಸೊಸೆಯ ಬಗ್ಗೆಯೇ ಈ ರೀತಿ ಎಲ್ಲರ ಎದುರು ಹೇಳುತ್ತಾ ಇದ್ದೀರಿ ಅಲ್ವಾ ನಿಮಗೆ ಏನು ಅನ್ನಿಸುವುದಿಲ್ವಾ? ಯಾಕೆ ಹೀಗೆ ಮಾಡ್ತಾ ಇದ್ದೀರಿ ನೀವು ಈ ರೀತಿ ನಿಮ್ಮ ಸೊಸೆ ಬಗ್ಗೆ ಹೇಳುತ್ತಿರುವುದು ಇದು ಸರಿ ಅಲ್ಲ. ಇದು ತಪ್ಪು. ಆದೆ ನಮ್ಮ ಅತ್ತೆ ನಿಮ್ಮ ರೀತಿ ಸೊಸೆಯನ್ನು ಎಲ್ಲೆಂದರಲ್ಲಿ ಕೆಟ್ಟದಾಗಿ ನಡೆಸಿಕೊಡುವುದು ಇಲ್ಲ. ಬೈಯುವುದು ಇಲ್ಲ. ಎಂದಾಗ ಸೀತಾ ಜೋರಾಗಿ ನಿಮ್ಮಿಬ್ಬರ ವಾಗ್ವಾದ ಇಲ್ಲಿಗೆ ನಿಲ್ಲಿಸುತ್ತಿರಾ ಎಂದು ಹೇಳುತ್ತಾಳೆ ಇದನ್ನು ಕೇಳಿದ ಇಬ್ಬರು ಮಾತು ನಿಲ್ಲಿಸುತ್ತಾರೆ. ಇನ್ನು ಗಿರಿಜಮ್ಮ ದಿವ್ಯಾಳ ಪರಿಸ್ಥಿತಿ ಹೇಗಿದೆ ಎಂಬುವುದನ್ನು ನೋಡಲು ದಿವ್ಯಾ ಇರುವ ಹಳ್ಳಿಗೆ ಹೋಗುತ್ತಾರೆ.
ದಿವ್ಯಾ ಪರಿಸ್ಥಿತಿ ಕಂಡು ಗಿರಿಜಮ್ಮಗೆ ಮರುಕ ಹುಟ್ಟುತ್ತದೆ. ಮುಂಚೆ ಮನೆಯಲ್ಲಿ ಇದ್ದ ದಿವ್ಯಾಳ ಇದು ಎಂದು ಎನ್ನಿಸಿವಿಡುತ್ತದೆ. ಮುಸುರೆ ತಿಕ್ಕಿಕೊಂಡು, ದನದ ಸೆಗಣಿ ಬಾಚುತ್ತಾ ಇರುವುದು ಇದನ್ನೆಲ್ಲ ನೋಡಿದಾಗ ಸಂಕಟ ಆಗುತ್ತದೆ. ಇನ್ನೂ ಆ ಊರಿನಲ್ಲಿ ಮನೆ ಇಲ್ಲದ ಕಾರಣ ಏನು ಮಾಡಬೇಕು ತಿಳಿಯದೇ ಕುಳಿತು ಇರುತ್ತಾಳೆ.

ಕಾವೇರಿಯನ್ನು ಕರೆದು ಮಾತನಾಡಿಸಿದ ಗಿರಿಜಮ್ಮ
ಆ ವೇಳೆ ಕಾವೇರಿ ಆ ದಾರಿಯಿಂದ ಹೋಗುತ್ತಾ ಇರುತ್ತಾಳೆ ಕಾವೇರಿಯನ್ನು ನೋಡಿದ ಗಿರಿಜಮ್ಮ, ಏ ಹುಡುಗಿ ಎಂದು ಕರೆಯುತ್ತಾ ಆಕೆಯ ಮನೆ ಬಳಿಗೆ ಹೋಗುತ್ತಾಳೆ. ಆ ವೇಳೆ ಮನೆಯಿಂದ ಹೊರ ಬಂದ ಕಾವೇರಿ ಹೇಳುತ್ತಾಳೆ ಏನು ಹುಡುಗಿ ಎಂದೆಲ್ಲ ಕರೆಯುತ್ತಾ ನನಗೂ ಒಂದು ಹೆಸರಿದೆ ಕಾವೇರಿ ಎಂದು ಹಂಗೆ ಕರಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಗಿರಿಜಮ್ಮ ಆಯಿತು ಎಂದು, 'ಈ ಊರಿನಲ್ಲಿ ಒಬ್ಬಳು ಕೆಲಸ ಮಾಡುವುದನ್ನು ನೋಡಿದೆ ನನಗೆ ಬಹಳ ಖುಷಿ ಆಯಿತು ಎಂದೆಲ್ಲ ಹೇಳುತ್ತಾರೆ ಇದನ್ನು ಕೇಳಿದ ಕಾವೇರಿ ಹೇಳುತ್ತಾಳೆ ಆಕೆ ಪಟ್ಟಣ ದಿಂದ ಬಂದಾಕ್ಕೆ ನಮ್ಮ ಬಾಬಯ್ಯನ ಹೆಂಡತಿ. ಆಸ್ತಿ ಆಸೆಗೆ ಮದುವೆ ಆಗಿದ್ದಾಳೆ ಆದರೆ ಆಕೆಗೆ ಇನ್ನೂ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ. ಅತಿಯಾಗಿ ಆಸೆ ಪಟ್ಟು ಈ ರೀತಿ ಅನುಭವಿಸುತ್ತಾ ಇದ್ದಾಳೆ ಎಂದು ಹೇಳುತ್ತಾರೆ ಇದನ್ನು ಕೇಳಿದ ಗಿರಿಜಮ್ಮನಿಗೆ ಬಹಳ ನೋವು ಆಗುತ್ತದೆ.

ಕಾರ್ತಿಕ್ ಬಳಿ ಸೀತಮ್ಮನ ಬ್ಯುಸಿನೆಸ್ ಮಾತುಕತೆ
ತನ್ನ ಮೊಮ್ಮಗಳು ಮೋಸ ಹೋದಳಲ್ಲ ಎಂದು ಬೇಸರಿಸುತ್ತಾರೆ. ಆದರೆ ನಿಜ ವಿಚಾರ ಹೇಳಿದ ಕಾವೇರಿ ಮಾತ್ರ ಈ ನಿಜ ವಿಚಾರವನ್ನು ಯಾರ ಬಳಿಯೂ ಹೇಳಬೇಡಿ ಎಂದು ಹೇಳುತ್ತಾಳೆ. ಇನ್ನು ಕಾರ್ತಿಕ್, ಸೀತಾ ಕೀರ್ತನ ಎಲ್ಲಾ ಕುಳಿತಿರುತ್ತಾರೆ. ಈ ವೇಳೆ ಕಾರ್ತಿಕ್‌ನ ಬಳಿ ಸೀತಮ್ಮ ಬ್ಯುಸಿನೆಸ್ ವಿಚಾರವಾಗಿ ಉತ್ತಮ ಜನ ಸಿಗುತ್ತಾರೆ ಮಾತನಾಡು. ಮಾತನಾಡಿದಾಗ ಪರಿಚಯ ಆಗುತ್ತದೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಕಾರ್ತಿಕ್ ಗೆ ಏನು ಮಾಡುವುದು ತಿಳಿಯದಾಗುತ್ತದೆ. ಹಾಗೆಯೇ ಸೀತಾ ಕೀರ್ತನ ಅಲ್ಲಿಂದ ಮೆತ್ತಗೆ ಎದ್ದು ಹೋಗುತ್ತಾರೆ ಈ ವೇಳೆ ಕಾರ್ತಿಕ್ ಸತ್ಯಾಳನ್ನು ನೆನಪಿಸಿಕೊಳ್ಳುತ್ತಾ ಇರುತ್ತಾನೆ.

ಕಾರ್ತಿಕ್ ಅನ್ನು ಫಾಲೋ ಮಾಡಿದ ಸತ್ಯ
ಯಾಕೆ ಇನ್ನೂ ಕೂಡ ಸತ್ಯ ಎಲ್ಲೂ ಕಾಣುತ್ತಿಲ್ಲ ಎಂದೆಲ್ಲ ಹುಡುಕುತ್ತಾ ಇರುವಾಗ ಅಲ್ಲಿಗೆ ಬಂದ ಒಬ್ಬಾಕೆ ಕಾರ್ತಿಕ್ ಬಳಿ ಮಾತನಾಡುತ್ತಾಳೆ. ಇದನ್ನು ನೋಡಿದ ಕಾರ್ತಿಕ್ ಮುಜುಗರದೊಂದಿಗೆ ಮಾತನಾಡುತ್ತಾ ಇದ್ದಾನೆ. ಆಕೆಗೆ ಕೊಂಚ ಕುಡಿಯುವ ಚಟ ಕೂಡ ಇದ್ದಿದ್ದರಿಂದ ತೇಲಾಡುವ ಹಾಗೆ ಕುಡಿದು ಕಾರ್ತಿಕ್ ಬಳಿ ಮಾತನಾಡುತ್ತಾ ಇರುತ್ತಾಳೆ ಇದನ್ನೆಲ್ಲ ನೋಡಿದ ಸತ್ಯ, ಕಾರ್ತಿಕ್ ನನ್ನು ಫಾಲೋ ಮಾಡಿಕೊಂಡು ಬರುತ್ತಾಳೆ. ಇತ್ತ ಸೀತಾ ಕುಳಿತುಕೊಂಡು ಇರುವ ವೇಳೆ ಅಲ್ಲಿಗೆ ಬಂದ ಮಹತಿ ಸತ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾಳೆ. ಈ ವೇಳೆ ಕೋಪಗೊಂಡ ಸೀತಾ ಹೇಳುತ್ತಾಳೆ ನೀನು ಇವತ್ತು ಪಾರ್ಟಿಗೆ ಬಂದಿದ್ದೀಯಾ ಅಥವಾ ಸತ್ಯ ಬಗ್ಗೆ ಕಂಪ್ಲೇಂಟ್ ಮಾಡಲು ಬಂದಿದ್ದೀಯಾ ಎಂದು ಕೇಳುತ್ತಾಳೆ ಅಲ್ಲಿಗೆ ಇಬ್ಬರು ಸುಮ್ಮನಾಗುತ್ತಾರೆ. ಇನ್ನೂ ಮುಂದೆ ಕಾದು ನೋಡಬೇಕಿದೆ.