Don't Miss!
- Finance
Adani Stocks: ಅದಾನಿ ಸಂಸ್ಥೆ ಮೌಲ್ಯ ಅರ್ಧದಷ್ಟು ಇಳಿಕೆ, 108 ಬಿಲಿಯನ್ ಡಾಲರ್ ನಷ್ಟ
- Technology
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- News
ರಾಯಚೂರಿನ ತುಂಗಾ ತೀರಾದಲ್ಲಿ ವಿದೇಶಿ ಹಕ್ಕಿಗಳ ಕಲರವ
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಓದುಗರಿಗೆ ಹೊಸ ಆಫರ್ ಕೊಟ್ಟ ನಟಿ ರಂಜಿನಿ ರಾಘವನ್
ಬಹುಮುಖ ಪ್ರತಿಭೆ ನಟಿ, ಬರಹಗಾರ್ತಿ ರಂಜನಿ ರಾಘವನ್ ಪ್ರತೀ ಬಾರೀ ಹೊಸತೇನನ್ನಾದರೂ ಹೊತ್ತು ಪ್ರೇಕ್ಷಕರ ಮುಂದೆ ಬರುತ್ತಾರೆ.ಕಿರುತೆರೆ, ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿರುವುದು ಕೆಲವೇ ಕೆಲವು ಮಂದಿ. ಇದೇ ಸಾಲಿಗೆ ಈಗ ನಟಿ ರಂಜಿನಿ ರಾಘವನ್ ಅವರು ಕೂಡ ಒಬ್ಬರು. ನಟಿಯಾಗಿದ್ದುಕೊಂಡೇ ಬರವಣಿಗೆಲ್ಲೂ ಛಾಪು ಮೂಡಿಸಿದ್ದಾರೆ.
ತಮ್ಮ ನಟನೆ ಮೂಲಕ ಪ್ರೇಕ್ಷಕರನ್ನು ಸೆಳೆದ ರಂಜಿನಿ ರಾಘವನ್ ಅವರು ತಮ್ಮ ವಿಭಿನ್ನ ರೀತಿಯ ಬರವಣಿಗೆಯ ಮೂಲಕವೂ ಓದುಗರನ್ನು ಸೆಳೆದಿದ್ದಾರೆ. ರಂಜಜಿನಿ ರಾಘವನ್ ಅವರು ತಮ್ಮದೇ ಬರವಣಿಗೆಯ ಶೈಲಿ ಪೂಲಕ ಓದುಗರನ್ನು ಕನ್ನಡ ಪುಸ್ತಕ ಪ್ರಪಂಚದ ಕಡೆಗೆ ಸೆಳೆಯುತ್ತಿದ್ದಾರೆ.
ಮದುವೆಯಾಗುವುದು
ನನ್ನ
ದೊಡ್ಡ
ಕನಸು,
ಅದನ್ನು
ನನಸು
ಮಾಡಿಕೊಳ್ಳುತ್ತೇನೆ;
ಕಾಂಟ್ರವರ್ಸಿಗೆ
ಬ್ರೇಕ್
ಹಾಕಿದ
ವೈಷ್ಣವಿ!
ಬಹುಮುಖ ಪ್ರತಿಭೆ ನಟಿ, ಬರಹಗಾರ್ತಿ ರಂಜನಿ ರಾಘವನ್ ಪ್ರತೀ ಬಾರೀ ಹೊಸತೇನನ್ನಾದರೂ ಹೊತ್ತು ಪ್ರೇಕ್ಷಕರ ಮುಂದೆ ಬರುತ್ತಾರೆ. ಪುಸ್ತಕ ಬರೆಯುವುದು, ಒಗಟು ಹೇಳುವುದು ಹೀಗೆ ಏನಅದರೂ ಒಂದನ್ನು ಮಾಡುತ್ತಿರುತ್ತಾರೆ.

ನಟನೆಗೂ ಸೈ, ನಿರ್ದೇಶನಕ್ಕೂ ಜೈ
ರಂಜಿನಿ ರಾಘವನ್ ಅವರು ಸಾಹಿತ್ಯ, ಕಲೆಯ ವಾತಾವರಣದಲ್ಲಿ ಹುಟ್ಟಿ ಬೆಳೆದವರು. ಕಲೆ ರಂಜನಿ ಅವರ ರಕ್ತದಲ್ಲೇ ಇದ್ದಿದ್ದರಿಂದ ನಟನೆಯಷ್ಟೇ ಅಲ್ಲದೇ, ಡ್ಯಾನ್ಸ್, ಸಾಹಿತ್ಯದಲ್ಲೂ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಿಂದ ಬಿಕಾಮ್ ಮುಗಿಸಿದ್ದಾರೆ. ನಾಗವೇಣಿ ಎಂಬ ಚಿಕ್ಕ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು ರಂಜನಿ ರಾಘವನ್. ಆದಾದ ಬಳಿಕ 'ಆಕಾಶ ದೀಪ', 'ಪುಟ್ಟ ಗೌರಿ' ಧಾರಾವಾಹಿಗಳಲ್ಲಿ ನಟಿಸಿದರು. 'ಪುಟ್ಟ ಗೌರಿ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತರಾದರು. 'ಪುಟ್ಟಗೌರಿ' ಧಾರಾವಾಹಿಯ ಬಳಿಕ ರಂಜನಿ ರಾಘವನ್ ಅವರು ಸುಮ್ಮನೆ ಕೂರದೇ, ಕ್ರಿಯೇಟಿವ್ ಆಗಿ ಕಥೆ ಬರೆದರು. 'ಇಷ್ಟ ದೇವತೆ' ಧಾರಾವಾಹಿಗೆ ಕಥೆ ಬರೆದು ನಿರ್ದೇಶನ ಸಹ ಮಾಡಿದರು.

ಅಚ್ಚ ಕನ್ನಡದ ಹುಡುಗಿ
ಬಳಿಕ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. 'ರಾಜಹಂಸ' ಚಿತ್ರದಲ್ಲಿ ನಾಯಕಿಯಾಗಿ ಹಾಗೂ 'ಸೂಫಿ' ಸಿನಿಮಾದಲ್ಲೂ ನಟಿಸಿದ್ದಾರೆ. ದಿಗಂತ್ ಜೊತೆ ನಟಿಸಿರುವ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಹಾಗೂ 'ಟಕ್ಕರ್' ಸಿನಿಮಾಗಳು ಅಮೇಜಾನ್ ಪ್ರೈಮ್‌ನಲ್ಲಿವೆ. ಒಳ್ಳೆಯ ಪಾತ್ರಗಳನ್ನು ಎದುರು ನೋಡುವ ರಂಜಿನಿ ರಾಘವನ್ ಅವರು, ಈಗ 'ಕನ್ನಡತಿ' ಎಂಬ ಧಾರಾವಾಹಿಯಲ್ಲಿ ಅಚ್ಚ ಕನ್ನಡದ ಹುಡುಗಿಯಾಗಿ ಮಿಂಚುತ್ತಿದ್ದಾರೆ. ಆಗಾಗ ಕತೆ, ಸಣ್ಣ-ಪುಟ್ಟ ಕವನಗಳನ್ನು ಬರೆಯುತ್ತಿರುತ್ತಾರೆ. ಕನ್ನಡ ಭಾಷೆಗೆ ತಮ್ಮ ಕೈಲಾಗುವ ಕೊಡುಗೆ ನೀಡಲು ರಂಜನಿ ರಾಘವನ್ ಅವರು ಪ್ರಯತ್ನಿಸುತ್ತಲೇ ಬಂದಿದ್ದಾರೆ.

ಬರಹಗಾರ್ತಿ ರಂಜಿನಿ ರಾಘವನ್
ಸಿನಿಮಾ, ಧಾರಾವಾಹಿ ಅಂತ ಬ್ಯುಸಿ ಇರುವ ಇವರು, ಬಿಡುವು ಸಿಕ್ಕಾಗಲೆಲ್ಲಾ ಸಾಹಿತಿ ಆಗಿ ಬಿಡುತ್ತಾರೆ. 'ಕಥೆ ಡಬ್ಬಿ' ಎಂಬ ಪುಟ್ಟ ಪುಟ್ಟ ಕಥೆಗಳಿರುವ ಪುಸ್ತಕ ಬರೆದು ಫೇಮಸ್ ಆಗಿದ್ದಾರೆ. ನಟನೆಯ ಜೊತೆಗೆ ಬರಹಗಾರ್ತಿಯೂ ಆಗಿದ್ದು, ಸಿಕ್ಕಾಪಟ್ಟೆ ಬ್ಯುಸಿ ಹುಡುಗಿ ರಂಜನಿ ರಾಘವನ್. ಹಾಗಿದ್ದರೂ ಬಿಡುವು ಮಾಡಿಕೊಂಡು ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ. ಕಳೆದ ವರ್ಷ 'ಕತೆ ಡಬ್ಬಿ' ಎಂಬ ಪುಸ್ತಕವನ್ನು ಬರೆದು ಬಿಡುಗಡೆ ಮಾಡಿದ್ದರು. ಇದರಲ್ಲಿ ಮಾನವೀಯತೆಯ ಬಂಧಗಳ ಬಗ್ಗೆ ತಮ್ಮ ಸರಳ ಬರವಣಿಗೆ ಮೂಲಕ ಸೊಗಸಾಗಿ ತಿಳಿಸಿಕೊಟ್ಟಿದ್ದರು.

ಓದುಗರಿಗೆ ಹೊಸ ಆಫರ್
ಇದೀಗ ಓದುಗರಿಗೆ ಹೊಸ ಗಿಫ್ಟ್ ಕೊಟ್ಟಿದ್ದಾರೆ. ಅದೇ 'ಸ್ವೈಪ್ ರೈಟ್' ಪುಸ್ತಕ. ಹೊಸ ಹೆಸರಿನೊಂದಿಗೆ ಕಾದಂಬರಿಯನ್ನು ಓದುಗರಿಗೆ ಪರಿಚಯಿಸಿದ್ದಾರೆ. ಮೊನ್ನೆಯಷ್ಟೇ ಈ ಪುಸ್ತಕವನ್ನು ಬಿಡುಗಡೆ ಮಾಡಲಾಯ್ತು. ಅದಾಗಲೇ 3000 ಪ್ರತಿಗಳು ಮಾರಾಟ ಆಗಿವೆ. ಎರಡನೇ ಮುದ್ರಣಕ್ಕೂ ಸಜ್ಜಾಗಿದೆ. ಹೀಗಾಗಿ ಈಗ ರಂಜನಿ ರಾಘವನ್ ಅವರು ಓದುಗರಿಗೆ ಹೊಸ ಆಫರ್ ಅನ್ನು ಕೊಟ್ಟಿದ್ದಾರೆ. ಅದೇನೆಂದರೆ, ಡಿಸೆಂಬರ್ 20 ರೊಳಗೆ ಪುಸ್ತಕವನ್ನು ಖರೀದಿಸುವವರಿಗೆ 10% ಡಿಸ್ಕೌಂಟ್ ಅನ್ನು ಕೊಟ್ಟಿದ್ದಾರೆ.