ಏಳು ವರ್ಷದ ಹಿಂದೆಯೇ ನೂರು ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದ ಧಾರಾವಾಹಿ

ಕೋಟಿ-ಕೋಟಿ ವೆಚ್ಚ ಮಾಡಿ ಸಿನಿಮಾ ನಿರ್ಮಿಸುವುದು ಗೊತ್ತೇ ಇದೆ. ನೂರಾರು ಕೋಟಿ ಸಿನಿಮಾ ವೊಂದಕ್ಕೆ ವೆಚ್ಚ ಮಾಡಿದ್ದಾರೆಂದರೆ ಅದು ಭಾರಿ ಬಜೆಟ್‌ನ ಚಿತ್ರವೆಂದೇ ಅರ್ಥ.

Recommended Video

Puneeth Rajkumar sweats out at home with these heavy workout | Power stars Powerful workout

ಆದರೆ ನಿರ್ಮಾಣವಾಗುವ ಎಲ್ಲಾ ಸಿನಿಮಾಕ್ಕೂ 100 ಕೋಟಿ ಬಜೆಟ್ ಇರುವುದಿಲ್ಲ. ಬಹಳ ಕಡಿಮೆ ಸಿನಿಮಾಗಳಷ್ಟೆ ನೂರು ಕೋಟಿ ಬಜೆಟ್ ದಾಟುತ್ತವೆ. ಕನ್ನಡ, ಮಲೆಯಾಳಂ, ತಮಿಳು, ತೆಲುಗು ಹಾಗೂ ಹಲವು ಬಾಲಿವುಡ್‌ ನಲ್ಲಿ ಬೆರಳೆಣಿಕೆಯ ಸಿನಿಮಾಗಳಷ್ಟೆ ನೂರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತವೆ.

ಆದರೆ ಧಾರಾವಾಹಿ ಒಂದು ನೂರು ಕೋಟಿ ಬಜೆಟ್‌ ನಲ್ಲಿ ನಿರ್ಮಾಣವಾಗಿತ್ತು ಎಂದರೆ ನಂಬುತ್ತೀರಾ? ಅದೂ ಈಗಲ್ಲ, ಏಳು ವರ್ಷದ ಹಿಂದೆಯೇ ಧಾರಾವಾಹಿ ಮೇಲೆ ನೂರು ಕೋಟಿ ಬಂಡವಾಳ ಹೂಡಲಾಗಿತ್ತು.

ಕನ್ನಡದಲ್ಲಿ ಈಗ ಪ್ರಸಾರವಾಗುತ್ತಿದೆ

ಕನ್ನಡದಲ್ಲಿ ಈಗ ಪ್ರಸಾರವಾಗುತ್ತಿದೆ

ಹೌದು, ಪ್ರಸ್ತುತ ಕನ್ನಡ ಚಾನೆಲ್‌ ಒಂದರಲ್ಲಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿರುವ 'ಮಹಾಭಾರತ' ಧಾರಾವಾಹಿ ಬರೋಬ್ಬರಿ ನೂರು ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾದ ಧಾರಾವಾಹಿ. ಅದೂ ಏಳು ವರ್ಷಗಳ ಹಿಂದೆ.

ಮಹಾಭಾರತ-ರಾಮಾಯಣಗಳ ಮೇಲೆ ಆಸಕ್ತಿ ಕುಂದಿಲ್ಲ

ಮಹಾಭಾರತ-ರಾಮಾಯಣಗಳ ಮೇಲೆ ಆಸಕ್ತಿ ಕುಂದಿಲ್ಲ

ಮಹಾಭಾರತ, ರಾಮಾಯಣಗಳು ಈ ಹಿಂದೆ ಹಲವು ಭಾಷೆಗಳಲ್ಲಿ ಧಾರಾವಾಹಿ, ಸಿನಿಮಾಗಳಾಗಿ ಬಂದಿದ್ದರೂ ಸಹ ಪೌರಾಣಿಕ ಕತೆಗಳ ಮೇಲೆ ಪ್ರೀತಿ, ಗೌರವ, ಆಸಕ್ತಿ ಜನರಿಗೆ ಕಡಿಮೆ ಆಗಿಲ್ಲ ಹಾಗಾಗಿ ಹಲವು ನಿರ್ದೇಶಕರು, ನಿರ್ಮಾಪಕರು ಪ್ರತಿಬಾರಿ ಹೊಸದೇ ರೀತಿಯಲ್ಲಿ ಮಹಾಭಾರತ ಕತೆಯನ್ನು ತೆರೆಗೆ ತರುತ್ತಲೇ ಇದ್ದಾರೆ.

2013 ರಲ್ಲಿ ತಿವಾರಿ ಕುಟುಂಬದ ನಿರ್ಮಾಣ

2013 ರಲ್ಲಿ ತಿವಾರಿ ಕುಟುಂಬದ ನಿರ್ಮಾಣ

ಅಂತೆಯೇ 2013 ರಲ್ಲಿ ತಿವಾರಿ ಕುಟುಂಬ ನಿರ್ಮಿಸಿದ ಈ ಧಾರಾವಾಹಿಯಲ್ಲಿ ಅದ್ಧೂರಿ ಸೆಟ್, ಸಿನಿಮಾ ಶೈಲಿಯ ನಿರೂಪಣೆ, ಅದ್ಭುತವಾದ ವಿಎಫ್‌ಎಕ್ಸ್‌ಗಳು, ಗ್ರಾಫಿಕ್ಸ್‌ಗಳು, ಹಿನ್ನೆಲೆ ಸಂಗೀತ, ಹಲವು ಹೊಸ ಅದ್ಧೂರಿ ಲೊಕೇಶನ್‌ಗಳು, ಅತ್ಯಂತ ದೊಡ್ಡ ಪಾತ್ರವರ್ಗ ಹೀಗೆ ಹಲವು ಅದ್ಧೂರಿತನ 2013 ರ ಮಹಾಭಾರತ ಧಾರಾವಾಹಿಯಲ್ಲಿತ್ತು.

120 ಕೋಟಿಗೂ ಹೆಚ್ಚು ಹಣ ವೆಚ್ಚ

120 ಕೋಟಿಗೂ ಹೆಚ್ಚು ಹಣ ವೆಚ್ಚ

ಬಹುವಾಗಿ ಹಿಟ್ ಆದ ಈ ಧಾರಾವಾಹಿ ನೂರು ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅಂದಾಜಿನ ಪ್ರಕಾರ ಪ್ರಚಾರವನ್ನೂ ಸೇರಿಸಿಕೊಂಡು ಸುಮಾರು 120 ಕೋಟಿಗೂ ಹೆಚ್ಚು ಹಣವನ್ನು ಈ ಧಾರಾವಾಹಿ ಮೇಲೆ ಖರ್ಚು ಮಾಡಲಾಯಿತು. ಆದರೆ ಅದಕ್ಕೆ ತಕ್ಕಂತೆ ಈಗಲೂ ಈ ಧಾರಾವಾಹಿ ಸ್ಟಾರ್ ಪ್ಲಸ್‌ನ ಹೆಚ್ಚು ಜನಪ್ರಿಯ ಧಾರಾವಾಹಿಗಳಲ್ಲಿ ಒಂದು.

ಹಲವು ರಾಜ್ಯಗಳಲ್ಲಿ ಚಿತ್ರೀಕರಣ

ಹಲವು ರಾಜ್ಯಗಳಲ್ಲಿ ಚಿತ್ರೀಕರಣ

ಈ ಧಾರಾವಾಹಿಯ ಚಿತ್ರೀಕರಣವನ್ನು ಭಾರತದ ಹಲವು ಭಾಗಗಳಲ್ಲಿ ಮಾಡಲಾಯಿತು. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಕೇರಳ ಗಳಲ್ಲಿ ಧಾರಾವಾಹಿಯ ಚಿತ್ರೀಕರಣ ಮಾಡಲಾಯಿತು. ಈ ವರೆಗೆ ಧಾರಾವಾಹಿಗಳಿಗಾಗಿ ಹಾಕಲಾದ ಬೃಹತ್ ಸೆಟ್‌ ಇದೇ ಧಾರಾವಾಹಿಗಾಗಿ ಹಾಕಲಾಗಿದೆ.

More from Filmibeat

English summary
Mahabharata serial made of more than 100 crore budget in 2013. It is the most watched serials of Star plus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X