»   » ಉದಯ ಟಿವಿಯಲ್ಲಿ ಹೊಸ ಸ್ವಮೇಕ್ ಧಾರಾವಾಹಿ 'ಮೀನಾಕ್ಷಿ ಮದುವೆ'

ಉದಯ ಟಿವಿಯಲ್ಲಿ ಹೊಸ ಸ್ವಮೇಕ್ ಧಾರಾವಾಹಿ 'ಮೀನಾಕ್ಷಿ ಮದುವೆ'

Posted By:
Subscribe to Filmibeat Kannada

ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಇರುವ ಉದಯ ಟಿವಿಯಲ್ಲಿ ಹೊಚ್ಚ ಹೊಸ ಸ್ವಮೇಕ್ ಧಾರಾವಾಹಿ 'ಮೀನಾಕ್ಷಿ ಮದುವೆ' ಆರಂಭವಾಗಿದೆ.

ಪ್ರೀತಮ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯಲ್ಲಿ ಅಪೂರ್ವ ಹಾಗೂ ಹರ್ಷ ಎಂಬ ಎರಡು ಹೊಸ ಮುಖಗಳನ್ನು ಪರಿಚಯ ಮಾಡಲಾಗಿದೆ. [ನಿಮ್ಮ 'ಉದಯ ಟಿವಿ'ಯಲ್ಲಿ ಎರಡು ಹೊಚ್ಚ ಹೊಸ ಧಾರಾವಾಹಿಗಳು!]

'Meenakshi Maduve' ; New serial in Udaya TV

ಇನ್ನೂ ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ರಾಕ್ ಲೈನ್ ಸುಧಾಕರ್ ಈ ಧಾರಾವಾಹಿಯ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಅಡಿಯಿಟ್ಟಿದ್ದಾರೆ. ರೈಫಲ್ ರುದ್ರೇಗೌಡ ಆಗಿ ನಾಯಕಿಯ ತಂದೆ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.

ಸಂಗೀತ ಹಿನ್ನೆಲೆಯ ದಂಪತಿಗಳಾದ ಶಶಿಧರ ಕೋಟೆ ಹಾಗೂ ಸೀತಾ ಕೋಟೆ ದಂಪತಿಗಳು ನಾಯಕನ ತಂದೆ-ತಾಯಿಯಾಗಿ ಅಭಿನಯಿಸಿದ್ದಾರೆ.

'Meenakshi Maduve' ; New serial in Udaya TV

ಅಂಜು ಹೆಗಡೆ ಕಥೆ-ಚಿತ್ರಕಥೆ ರಚಿಸಿದ್ರೆ, ಕಾರ್ತಿಕ್ ಸಂಭಾಷಣೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಹಿಮಾಲಯದ ತಪ್ಪಲಿನಲ್ಲಿ 'ಮೀನಾಕ್ಷಿ ಮದುವೆ' ಧಾರಾವಾಹಿಯ ಚಿತ್ರೀಕರಣ ನಡೆದಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ 'ಮೀನಾಕ್ಷಿ ಮದುವೆ' ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ.

English summary
Family Entertainment Channel Udaya TV has come up with a New serial called 'Meenakshi Madhuve', which will telecast from Monday to Friday 6.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada