For Quick Alerts
  ALLOW NOTIFICATIONS  
  For Daily Alerts

  ನರೇಂದ್ರ ಮೋದಿ ದೇಶದ ಅರ್ಹ ಬ್ರಹ್ಮಚಾರಿ!

  |

  62 ವರ್ಷದ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶದ ಅರ್ಹ ಬ್ರಹ್ಮಚಾರಿ ಎಂದು ಬಾಲಿವುಡ್‌ ನಟಿ ಮಲ್ಲಿಕಾ ಶೆರಾವತ್‌ ಅಭಿಪ್ರಾಯಪಟ್ಟಿದ್ದಾರೆ. ಟಿವಿ ರಿಯಾಲಿಟಿ ಶೋ ಕಾರ್ಯಕ್ರಮದ ಟ್ರೇಲರ್ ನಲ್ಲಿ ಈ ರೀತಿಯ ಅನಿಸಿಕೆ ಹೊರಹಾಕಿದ್ದಾರೆ.

  ನಮ್ಮ ದೇಶದ ಯೋಗ್ಯ ಅವಿವಾಹಿತ ಯಾರೆಂದು? ಕೇಳಿದ ಪ್ರಶ್ನೆಗೆ ಮಲ್ಲಿಕಾ ನೀಡಿದ ಉತ್ತರ ನರೇಂದ್ರ ಮೋದಿ. ಮೋದಿ ಕುರಿತಾಗಿ ತಾವು ನೀಡಿರುವ ಹೇಳಿಕೆಯನ್ನು ಶೆರಾವತ್ ಸಮರ್ಥಿಸಿಕೊಂಡಿದ್ದಾರೆ.

  ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಚತುರ, ಪ್ರಗತಿಪರ ವ್ಯಕ್ತಿ ಎಂದೂ ಮಲ್ಲಿಕಾ ಬಣ್ಣಿಸಿದ್ದಾರೆ. ನಾನೂ ಅವಿವಾಹಿತೆ. ಮೋದಿ ಕೂಡ ಅವಿವಾಹಿತರು. ನನ್ನಂತೆಯೇ ಮೋದಿ ಬಗ್ಗೆಯೂ ಸಾಕಷ್ಟು ಅಪಪ್ರಚಾರ ನಡೆಯುತ್ತಿವೆ ಎಂದು ಮಲ್ಲಿಕಾ ತಿಳಿಸಿದ್ದಾರೆ.

  The Bachelorette India - Mere Khayalon Ki Mallika ಟಿವಿ ರಿಯಾಲಿಟಿ ಶೋ ಮೂಲಕ ತಮ್ಮ ಸಂಗಾತಿಯನ್ನು ಹುಡುಕುತ್ತಿರುವ ಮಲ್ಲಿಕಾ, ಈ ಶೋ ಟ್ರೇಲರ್ ನಲ್ಲಿ ಮೋದಿ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

  ಈ ರಿಯಾಲಿಟಿ ಶೋ ಅಂತರಾಷ್ಟ್ರೀಯ ಮಟ್ಟದ ಶೋನಂತೆ ನಡೆಯಲಿದೆ. 30 ಸ್ಪರ್ಧಿಸಳು ಇದರಲ್ಲಿ ಭಾಗವಹಿಸುತ್ತಿದ್ದು, ಅವರಲ್ಲಿ ಮಲ್ಲಿಕಾ ತನ್ನ ಸಂಗಾತಿಯನ್ನು ಹುಡುಕಿಕೊಳ್ಳಲಿದ್ದಾರೆ. ನಟ ರೋಹಿತ್ ರಾಯ್ ಈ ಶೋ ನಡೆಸಿಕೊಡಲಿದ್ದು, ಅಕ್ಟೋಬರ್ 7ರಿಂದ ಲೈಫ್ ಓಕೆ ವಾಹಿನಿಯಲ್ಲಿ ಶೋ ಪ್ರಸಾರವಾಗಲಿದೆ.

  English summary
  Gujarat Chief Minister Narendra Modi, 62, is the most eligible bachelor in the country, according to Bollywood actress Mallika Sherawat, who will soon be on the lookout for a "soul-mate" via TV show The Bachelorette India - Mere Khayalon Ki Mallika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X