ಮುದ್ದುಲಕ್ಷ್ಮಿಗೆ ಸಿಕ್ತು ಮೊದಲ ಗೆಲುವು

ಸೌಂದರ್ಯಕ್ಕೆ ಬೆಲೆ ಕೊಡುವ ಕಿರುತೆರೆ ಪಾತ್ರಗಳಿಗಿಂತ ಭಿನ್ನವಾಗಿ ನಿಲ್ಲುವ ಪಾತ್ರ ಸ್ಟಾರ್ ಸುವರ್ಣ ವಾಹಿನಿಯ ಮುದ್ದುಲಕ್ಷ್ಮಿ. ಕಪ್ಪಾಗಿದ್ದಾಳೆ ಎನ್ನುವ ಕಾರಣಕ್ಕಾಗಿ ಸಮಾಜದಿಂದ, ಮನೆಯವರಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗುವ ಮುದ್ದುಲಕ್ಷ್ಮಿಗೆ ಈಗ ಮೊದಲ ಗೆಲುವಾಗಿದೆ.

ಮುದ್ದುಲಕ್ಷ್ಮಿ ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕ, ಅತ್ತೆ ಸೌಂದರ್ಯ ವರ್ತನೆಯಲ್ಲಿ ಬದಲಾವಣೆಗಳಾಗಿದೆ. ಇಷ್ಟು ದಿನ ಲಕ್ಷ್ಮಿಯನ್ನು ಹೆಸರಿಟ್ಟು ಕರೆಯದ ಸೌಂದರ್ಯ ಈಗ ಸೊಸೆಯನ್ನು ಕೈ ಹಿಡಿದು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಷ್ಟು ಬದಲಾಗಿದ್ದಾರೆ.

ಎಲ್ಲರೆದರು ಎಲ್ಲ ವಿಷಯಕ್ಕೂ ಲಕ್ಷ್ಮಿಯನ್ನು ಅಲ್ಲಗಳೆಯುತ್ತಿದ್ದ ಸೌಂದರ್ಯ ಈಗ ಲಕ್ಷ್ಮಿಯ ಸಮರ್ಥನೆಗೆ ನಿಲ್ಲುವಷ್ಟು ಪಾತ್ರದಲ್ಲಿ ಬದಲಾವಣೆಯಾಗಿದೆ. ಅತ್ತೆಯ ಮನಸ್ಸು ಗೆದ್ದಿರುವ ಮುದ್ದುಲಕ್ಷ್ಮಿಗೆ ಮನೆಯವರ ಪ್ರೀತಿ ಸಂಪಾದಿಸುವ ಹಾದಿಯಲ್ಲಿ ಇದು ಮೊದಲ ಗೆಲುವು.

 Muddulakshmi gets first win

ಅಂದ್ಹಾಗೆ, 'ಮುದ್ದುಲಕ್ಷ್ಮಿ', ತಳಿರು ಪ್ರೊಡಕ್ಷನ್ಸ್‍ನ ಮೊದಲ ಕಾಣಿಕೆ. ಈ ಮುಂಚೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಪ್ರಖ್ಯಾತರಾದ ಹರೀಶ್ ಬಾಬು ಇದರ ನಿರ್ಮಾಪಕರು. ಹಲವಾರು ಯಶಸ್ವಿ ಧಾರಾವಾಹಿಗಳನ್ನು ನೀಡಿದ ಧರಣಿ ಜಿ ರಮೇಶ್ ನಿರ್ದೇಶಕರಾಗಿದ್ದು, ಸಿ. ನಾಗರಾಜ್ ಅವರು ಛಾಯಾಗ್ರಹಕರಾಗಿ, ಅನಿ ಸಂಕಲನಕಾರರಾಗಿದ್ದಾರೆ. "ಮುಸ್ಸಂಜೆ ಮಾತು", "ಕೃಷ್ಣನ್ ಲವ್ ಸ್ಟೋರಿ", "ಕೃಷ್ಣ-ಲೀಲಾ" ಸಿನೆಮಾಗಳ ಬ್ಲಾಕ್‍ ಬಸ್ಟರ್ ಹಾಡುಗಳನ್ನು ನೀಡಿದ ಶ್ರೀಧರ್ ಸಂಭ್ರಮ್ ಸಂಗೀತ ನೀಡುತ್ತಿದ್ದರೆ.

More from Filmibeat

English summary
Star suvarna's popular serial 'Muddulakshmi' is running successfully.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X