Just In
Don't Miss!
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
TRPಯಲ್ಲಿ ದಾಖಲೆ ಬರೆದ ನಟಸಾರ್ವಭೌಮ: ಕಿರುತೆರೆಗೆ ಅಪ್ಪುನೇ ಬಾಸ್.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರಗಳಿಗೆ ಕಿರುತೆರೆಯಲ್ಲಿ ಹೆಚ್ಚು ಬೇಡಿಕೆ ಇದೆ. ಅಪ್ಪು ಅಭಿನಯದ ಯಾವುದೇ ಸಿನಿಮಾ ಟಿವಿಯಲ್ಲಿ ಪ್ರಸಾರವಾಗ್ತಿದೆ ಅಂದ್ರೆ ಮನೆ ಮಂದಿಯಲ್ಲಿ ಕೂತು ನೋಡುವ ಟ್ರೆಂಡ್ ಈಗಲೂ ಇದೆ. ಅದಕ್ಕೆ ಅನ್ಸುತ್ತೆ ಪುನೀತ್ ಸಿನಿಮಾಗಳು ಯಾವಾಗಲೇ ಮೂಡಿಬಂದ್ರು ಟಿ.ಆರ್.ಪಿ ಮಾತ್ರ ಕಮ್ಮಿ ಆಗಲ್ಲ.
ಇದೀಗ, ನಟಸಾರ್ವಭೌಮ ಸಿನಿಮಾ ವಿಚಾರದಲ್ಲೂ ಅದು ಸಾಬೀತಾಗಿದೆ. ಹೌದು, ಮೇ ತಿಂಗಳ ಅಂತ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ನಟಸಾರ್ವಭೌಮ ಸಿನಿಮಾ ಪ್ರಸಾರವಾಗಿತ್ತು. ಸಹಜವಾಗಿ ಸ್ಟಾರ್ ನಟರ ಸಿನಿಮಾಗಳು ಕಿರುತೆರೆಯಲ್ಲಿ ಬಂದಾಗ ಅದರ ಟಿ.ಆರ್.ಪಿ ಒಂದು ಕಣ್ಣು ಇರುತ್ತೆ.
ದರ್ಶನ್-ಪುನೀತ್ ಈಗ ಹೊಸ 'ದಿಗ್ಗಜರು': ಯಾವ ವಿಷ್ಯಕ್ಕೆ?
ನಟಸಾರ್ವಭೌಮ ಸಿನಿಮಾ ಪ್ರಸಾರವಾದ ವಾರದ ಟಿ.ಆರ್.ಪಿ ಬಿಡುಗಡೆಯಾಗಿದ್ದು, ಪುನೀತ್ ಸಿನಿಮಾ ಮತ್ತೊಂದು ದಾಖಲೆ ಮಾಡಿದೆ. ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ದಾಖಲೆ ಹಿಂದಿಕ್ಕಿದೆಯಂತೆ. ಹಾಗಿದ್ರೆ, ನಟಸಾರ್ವಭೌಮ ಗಳಿಸಿದ ಟಿ.ಆರ್.ಪಿ ಅಂಕವೆಷ್ಟು? ಮುಂದೆ ಓದಿ......

ಕಿರುತೆರೆಯಲ್ಲಿ ಕಿಂಗ್ ಪುನೀತ್.!
ನಟಸಾರ್ವಭೌಮ ಚಿತ್ರಕ್ಕೆ ಅತಿ ಹೆಚ್ಚು ಟಿ.ಆರ್.ಪಿ ಸಿಕ್ಕಿದ್ದು, ಆಲ್ ಟೈಂ ಸಿನಿಮಾಗಳ ಟಾಪ್ ಐದರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. 8018 ಟಿ.ಆರ್.ಪಿ ಅಂಕಗಳಿಸುವ ಮೂಲಕ ಪಾರು, ರಾಧರಮಣ, ಮಂಗಳಗೌರಿ ಧಾರಾವಾಹಿಗಳನ್ನ ಹಾಗೂ ಸರಿಗಮಪ 16 ಕಾರ್ಯಕ್ರಮವನ್ನ ಹಿಂದಿಕ್ಕಿದೆ.

ಕೆಜಿಎಫ್ ದಾಖಲೆ ಉಡೀಸ್
ಕಳೆದ ವರ್ಷದ ಅತಿ ದೊಡ್ಡ ಹಿಟ್ ಸಿನಿಮಾ ಕೆಜಿಎಫ್ ಚಿತ್ರದ ಕಿರುತೆರೆ ಟಿ.ಆರ್.ಪಿ ಅಂಕವನ್ನ ನಟಸಾರ್ವಭೌಮ ಹಿಂದಿಕ್ಕಿದೆಯಂತೆ. ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್ ವಾಹಿನಿಗಳಲ್ಲಿ ಸತತವಾಗಿ ಎರಡು ದಿನ ಕೆಜಿಎಫ್ ಸಿನಿಮಾ ಪ್ರಸಾರವಾಗಿತ್ತು. ಆದರೆ, ಕೆಜಿಎಫ್ ಚಿತ್ರಕ್ಕೆ ನಿರೀಕ್ಷಿತ ಟಿ.ಆರ್.ಪಿ ಸಿಕ್ಕಿರಲಿಲ್ಲ. ಚಿತ್ರಮಂದಿರದಲ್ಲಿ ಅಬ್ಬರಿಸಿದಷ್ಟು ಕಿರುತೆರೆಯಲ್ಲಿ ಸದ್ದು ಮಾಡಿಲ್ಲ. ಯಾಕಂದ್ರೆ, ಅಮೇಜಾನ್ ಪ್ರೈಮ್ ನಲ್ಲಿ ಹಾಗೂ ಮೊಬೈಲ್ ಗಳಲ್ಲಿ ಕೆಜಿಎಫ್ ಸಿನಿಮಾನ ಹಲವು ಬಾರಿ ನೋಡಿಬಿಟ್ಟಿದ್ದರು. ಹಾಗಾಗಿ, ಟಿವಿಯಲ್ಲಿ ಬಂದಾಗ ಸ್ವಲ್ಪ ಆಸಕ್ತಿ ಕಮ್ಮಿ ಆಗಿರಬಹುದು.
'ನಟ ಸಾರ್ವಭೌಮ' ಸಿನಿಮಾ ಪ್ರಸಾರದ ದಿನಾಂಕ ನಿಗದಿ

ಮೊದಲ ಮೂರು ಸ್ಥಾನದಲ್ಲಿ ಪುನೀತ್ ಸಿನಿಮಾ
ಇದುವರೆಗೂ ಕಿರುತೆರೆ ಇತಿಹಾಸದಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಪಡೆದ ಚಿತ್ರಗಳ ಪೈಕಿ ಪುನೀತ್ ರಾಜ್ ಕುಮಾರ್ ಅವರ ದೊಡ್ಮನೆ ಹುಡ್ಗ ಮೊದಲ ಸ್ಥಾನದಲ್ಲಿದೆ. ಜೀ ಕನ್ನಡದಲ್ಲೇ ಈ ಸಿನಿಮಾ ಪ್ರಸಾರವಾಗಿತ್ತು. ಎರಡನೇ ಸ್ಥಾನದಲ್ಲಿ ಪುನೀತ್ ಅವರ ಇನ್ನೊಂದು ಸಿನಿಮಾ ರಾಜಕುಮಾರ ಇದೆ. ನಾಲ್ಕನೇ ಸ್ಥಾನದಲ್ಲಿ ಸುದೀಪ್ ಹೆಬ್ಬುಲಿ ಹಾಗೂ ಐದನೇ ಸ್ಥಾನದಲ್ಲಿ ಮತ್ತೆ ಪುನೀತ್ ಸಿನಿಮಾ ಅಂಜನಿಪುತ್ರ ಸ್ಥಾನ ಪಡೆದುಕೊಂಡಿದೆ.

ಟಿ.ಆರ್.ಪಿ ಬರಲು ಕಾರಣವೇನು?
ಹಾಗ್ನೋಡಿದ್ರೆ, ಸದ್ಯ ಜೀ ಕನ್ನಡ ವಾಹಿನಿ ಮನರಂಜನೆ ವಾಹಿನಿಗಳ ಪೈಕಿ ನಂಬರ್ ವನ್ ಸ್ಥಾನದಲ್ಲಿದೆ. ಸಹಜವಾಗಿ ಈ ವಾಹಿನಿಗೆ ಟಿ.ಆರ್.ಪಿ ಜಾಸ್ತಿಯೇ ಇದೆ. ಆದ್ದರಿಂದ ಟಿ.ಆರ್.ಪಿ ಹೆಚ್ಚಾಗಲು ಕಾರಣ. ಇನ್ನೊಂದು ಕಡೆ ನೋಡುವುದಾರೇ ನಟಸಾರ್ವಭೌಮ ಸಿನಿಮಾ ಪ್ರಸಾರವಾದ ದಿನ ಮಳೆ, ಗಾಳಿ ಇದ್ದ ಪರಿಣಾಮ ಅನೇಕ ಕಡೆ ಕರೆಂಟ್ ಕಟ್ ಆಗಿತ್ತು, ಹಾಗಾಗಿ, ಟಿ.ಆರ್.ಪಿ ಸ್ವಲ್ಪ ಕಮ್ಮಿ ಆಗಿದೆ ಎಂಬ ಮಾತು ಅಭಿಮಾನಿ ವಲಯದಲ್ಲಿದೆ.