For Quick Alerts
  ALLOW NOTIFICATIONS  
  For Daily Alerts

  'ಗಿಚ್ಚಿ ಗಿಲಿಗಿಲಿ' ಸೀಸನ್ 2ರ ನಿರೂಪಕರಾಗಿ ನಿರಂಜನ್ ದೇಶಪಾಂಡೆ

  By ಅನಿತಾ ಬನಾರಿ
  |

  ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯೂ ಕೂಡಾ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಭಿನ್ನ ಹಾಸ್ಯ ಕಾರ್ಯಕ್ರಮ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೊದಲ ಸೀಸನ್ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಇದೀಗ ಎರಡನೇ ಸೀಸನ್ ಶೀಘ್ರದಲ್ಲಿ ಆರಂಭವಾಗಲಿದೆ.

  'ಗಿಚ್ಚಿ ಗಿಲಿಗಿಲಿ' ಕಾರ್ಯಕ್ರಮದ ಮೊದಲ ಸೀಸನ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ 'ಗಿಚ್ಚಿ ಗಿಲಿಗಿಲಿ'ಯ ಎರಡನೇ ಸೀಸನ್ ಕೂಡಾ ಸದ್ಯದಲ್ಲಿ ಆರಂಭವಾಗಲಿದ್ದು ಈ ಬಾರಿಯೂ ನಿರಂಜನ್ ದೇಶಪಾಂಡೆ ಅವರೇ ನಿರೂಪಕರಾಗಿ ಮೋಡಿ ಮಾಡಲಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2'ನ ನಿರೂಪಕರಾಗಿ ಕಾಣಿಸಿಕೊಂಡಿರುವ ನಿರಂಜನ್ ದೇಶಪಾಂಡೆ ಇನ್ನು ಮುಂದೆ 'ಗಿಚ್ಚಿ ಗಿಲಿಗಿಲಿ' ಶೋ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ.

  ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿರುವ ನಿರಂಜನ್ ದೇಶಪಾಂಡೆ ನಂತರ ಮುಖ ಮಾಡಿದ್ದು ಉದ್ಯಮದತ್ತ. ರೇಡಿಯೋ ಚಾನೆಲ್ ಒಂದಕ್ಕೆ ಆಡಿಶನ್ ನೀಡುವ ಅವಕಾಶ ನಿರಂಜನ್ ಅವರಿಗೆ ಸಿಕ್ಕಿತು. ಆಕಸ್ಮಿಕವಾಗಿ ದೊರೆತಿರುವ ಅವಕಾಶ ಬೇಡ ಎನ್ನದ ನಿರಂಜನ್ ಆಡಿಶನ್ ನೀಡಿದರು. ಆಶ್ಚರ್ಯ ಎಂಬಂತೆ ಆಯ್ಕೆಯೂ ಆದರು.

  'ಮಿಲನ'ದ ಅಂಜನ್ ಆಗಿ ಮಿಂಚು

  'ಮಿಲನ'ದ ಅಂಜನ್ ಆಗಿ ಮಿಂಚು


  ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಆರ್ ಜೆ ಆಗಿ ವೃತ್ತಿ ಜೀವನ ಮಾಡಿದ ನಿರಂಜನ್ ಅವರು ನಟನಾಗಿ ವೀಕ್ಷಕರನ್ನು ರಂಜಿಸಿದ ಪ್ರತಿಭೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಮಿಲನ" ಧಾರಾವಾಹಿಯಲ್ಲಿ ಅಂಜನ್ ಪಾತ್ರಕ್ಕೆ ಜೀವ ತುಂಬುವ ಮೂಲಕ ನಟನಾಗಿಯೂ ಅವರು ಭಡ್ತಿ ಪಡೆದಿದ್ದರು. ಒಂದಷ್ಟು ಸಿನಿಮಾಗಳಲ್ಲಿ ನಿರಂಜನ್ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.

  ಬಿಗ್‌ಬಾಸ್ ಶೋನಲ್ಲೂ ಭಾಗಿ

  ಬಿಗ್‌ಬಾಸ್ ಶೋನಲ್ಲೂ ಭಾಗಿ

  ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್' 4 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ನಿರಂಜನ್ ನಡವಳಿಕೆ, ಮಾತು ಜೊತೆಗೆ ಆಟದ ಮೂಲಕ ವೀಕ್ಷಕರಿಗೆ ಮಗದಷ್ಟು ಹತ್ತಿರವಾದರು. ಸುಮಾರು 50 ದಿನಕ್ಕಿಂತಲೂ ಹೆಚ್ಚು ಬಿಗ್ ಬಾಸ್ ಮನೆಯೊಳಗೆ ಇದ್ದ ನಿರಂಜನ್ ದೇಶಪಾಂಡೆ ಇದ್ದಷ್ಟು ದಿನ ವೀಕ್ಷಕರನ್ನು ರಂಜಿಸಿದ್ದರು.

  ನಿರೂಪಕರಾಗಿಯೂ ಫೇಮಸ್ಸು!

  ನಿರೂಪಕರಾಗಿಯೂ ಫೇಮಸ್ಸು!

  'ಮಜಾಭಾರತ' ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆಯಲ್ಲಿ ಮಿಂಚಿದ ನಿರಂಜನ್ ದೇಶಪಾಂಡೆ ನಂತರ 'ತುತ್ತಾಮುತ್ತಾ' ಸೀಸನ್ 1 ಮತ್ತು 2, 'ಸವಾಲಿಗೆ ಸೈ', 'ಗಿಚ್ಚಿಗಿಲಿ ಶೋ'ಗಳ ನಿರೂಪಕರಾಗಿ ಸದ್ದು ಮಾಡಿದ್ದರು. ಈಗ 'ನನ್ನಮ್ಮ ಸೂಪರ್ ಸ್ಟಾರ್' ಸೀಸನ್ 2 ರ ನಿರೂಪಕರಾಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಇವರು ಸದ್ಯದಲ್ಲಿ 'ಗಿಚ್ಚಿ ಗಿಲಿಗಿಲಿ'- 2 ಶೋ ಮೂಲಕ ಮತ್ತೊಮ್ಮೆ ಕಿರುಪರದೆ ಮೇಲೆ ಕಮಾಲ್ ಮಾಡಲಿದ್ದಾರೆ.

  ನಿರಂಜನೆ ನಟನೆಯ ಚಿತ್ರಗಳು

  ನಿರಂಜನೆ ನಟನೆಯ ಚಿತ್ರಗಳು

  ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿರುವ ನಿರಂಜನ್ ದೇಶಪಾಂಡೆ ಚಂದ್ರಮೋಹನ್ ನಿರ್ದೇಶನದ "ಬೊಂಬೆ ಮಿಠಾಯಿ" ಸಿನಿಮಾದಲ್ಲಿ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಮುಂದೆ 'ಪಾದರಸ', 'ನನ್ನ ಪ್ರಕಾರ', 'ಸಂಪ್ನೋಕಿ ರಾಣಿ', 'ಸವರ್ಣ ದೀರ್ಘ ಸಂಧಿ', 'ಪಾಪಿ ಚಿರಾಯು', 'ಆಮ್ಲೆಟ್' ಸಿನಿಮಾಗಳಲ್ಲಿ ನಿರಂಜನ್ ಬಣ್ಣ ಹಚ್ಚಿದ್ದಾರೆ.

  English summary
  Anchor niranjan deshapande hosts gicchi giligili season 2.
  Monday, January 9, 2023, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X