For Quick Alerts
  ALLOW NOTIFICATIONS  
  For Daily Alerts

  ಸಿದ್ಧಾರ್ಥ್ ಶುಕ್ಲಾ ಆತ್ಮದ ಜೊತೆ ಮಾತನಾಡಿದ ಸ್ಟೀವ್ ಹಫ್; ವಿಡಿಯೋ ವೈರಲ್

  By ಫಿಲ್ಮಿಬೀಟ್ ಡೆಸ್ಕ್
  |

  ಹಿಂದಿ ಕಿರುತೆರೆಯ ಪ್ರಸಿದ್ಧ ನಟ, ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಇತ್ತೀಚಿಗಷ್ಟೆ ಹೃದಯಾಘಾತದಿಂದ ನಿಧನ ಹೊಂದಿದರು. ಸಿದ್ಧಾರ್ಥ್ ಅಭಿಮಾನಿಗಳಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿದ್ಧಾರ್ಥ್ ಸಾವಿನಿಂದ ಪ್ರೇಯಸಿ ಶೆಹನಾಜ್ ಸ್ಥಿತಿ ತೀರಾ ಕೆಟ್ಟದಾಗಿದೆ ಎನ್ನಲಾಗುತ್ತಿದೆ. ಸರಿಯಾಗಿ ಊಟ, ನಿದ್ದೆ ಮಾಡದೇ ಶೆಹನಾಜ್ ಕಣ್ಣೀರಿಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಸಿದ್ಧಾರ್ಥ್ ಸಾವು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಫಿಟ್ ಅಂಡ್ ಫೈನ್ ಆಗಿದ್ದ ಸಿದ್ಧಾರ್ಥ್ ಹಠಾತ್ ಸಾವು ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ವೈದ್ಯರು ಹೃದಯಾಘಾತದಿಂದ ಸಿದ್ಧಾರ್ಥ್ ನಿಧನ ಹೊಂದಿರುವುದಾಗಿ ದೃಢಪಡಿಸಿದ್ದಾರೆ.

  ಸಿದ್ಧಾರ್ಥ್ ಅಗಲಿಕೆಯ ನೋವಿನಲ್ಲಿರುವ ಅಭಿಮಾನಿಗಳಿಗೆ ಮತ್ತೊಂದು ಅಚ್ಚರಿ ಸುದ್ದಿ ವೈರಲ್ ಆಗಿದೆ. ಸಿದ್ದಾರ್ಥ್​ ಶುಕ್ಲಾ ಅವರ ಆತ್ಮ ಮಾತನಾಡುತ್ತಿದೆ ಎಂಬ ಸುದ್ದಿ ಹುಟ್ಟಿಕೊಂಡಿವೆ. ಇದಕ್ಕೆ ಕಾರಣ ಪ್ಯಾರಾ ನಾರ್ಮಲ್​ ತಜ್ಞ ಸ್ಟೀವ್​ ಹಫ್​ ಹಂಚಿಕೊಂಡಿರುವ ಒಂದು ವಿಡಿಯೋ. ಸಿದ್ಧಾರ್ಥ್ ಶುಕ್ಲಾ ಆತ್ಮದ ಜೊತೆ ಮಾತನಾಡಿರುವುದಾಗಿ ಸ್ಟೀವ್ ಹಫ್ ಹೇಳಿದ್ದಾರೆ. ಅಲ್ಲದೆ ವಿಡಿಯೋವನ್ನು ಶೇರ್ ಮಾಡಿದ್ದಾರೆ.

  ಅಂದಹಾಗೆ ಸ್ಟೀವ್​ ಹಫ್​ ಹೆಸರು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದಾಗಲೂ ಸಹ ಸ್ಟೀವ್​ ಹಫ್​ ಹೀಗೆಯೇ ಹೇಳಿದ್ದರು. ತಾವು ಸುಶಾಂತ್​ ಆತ್ಮದ ಜೊತೆ ಮಾತನಾಡಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ಅದಕ್ಕೆ ಸಂಬಂಧಿಸಿದ ಒಂದು ವಿಡಿಯೋವನ್ನು ರಿಲೀಸ್​ ಮಾಡಿದ್ದರು. ಅದನ್ನೇ ಈ ಬಾರಿಯೂ ಅವರು ಹಾಗೆ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

  ಸೆಪ್ಟಂಬರ್ 2ರಂದು ಸಿದ್ದಾರ್ಥ್​ ಶುಕ್ಲಾ ನಿಧನರಾದರು. ಸೆಪ್ಟಂಬರ್ 4ರಂದು ಸ್ಟೀವ್​ ಹಫ್​ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿರುವ ಧ್ವನಿ ಸಿದ್ದಾರ್ಥ್​ ಶುಕ್ಲಾರ ಆತ್ಮದ್ದು ಎಂದು ಹೇಳಿದ್ದಾರೆ.

  "ದೇಹ ಬಿಡುವಾಗ ನೀವು ಏನನ್ನು ನೋಡಿದ್ರಿ" ಎಂದು ಕೇಳಿದ್ದಕ್ಕೆ "ಒಬ್ಬ ಗಂಧರ್ವನನ್ನು ನೋಡಿದೆ" ಎಂದು ಆ ಧ್ವನಿ ಉತ್ತರಿಸಿದೆ. "ಸಾಯುವಾಗ ನನಗೆ ತುಂಬ ನೋವಾಯಿತು. ನಾನು ನಗ್ನವಾಗಿದ್ದೆ. ನಾನೀಗ ಸ್ವರ್ಗದಲ್ಲಿ ಇದ್ದೇನೆ. ನಾನು ದೇವರ ಜೊತೆ ಇದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಿ" ಎಂದು ಹೇಳುವ ಧ್ವನಿ ಸಿದ್ಧಾರ್ಥ್ ಅವರದ್ದು ಎಂದು ಸ್ಟೀವ್ ಹಫ್ ಹೇಳಿದ್ದಾರೆ. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಇದನ್ನು ಕೆಲವರು ನಂಬಿದರೆ, ಇನ್ನು ಕೆಲವರು ಇದೆಲ್ಲ ಸುಳ್ಳು ಎಂದು ಸ್ಟೀವ್​ ಹಫ್​ಗೆ ನೆಗೆಟಿವ್​ ಕಮೆಂಟ್​ ಮಾಡಿದ್ದಾರೆ.

  ಫೋಟೋಗ್ರಾಫರ್​ ಕೂಡ ಆಗಿರುವ ಸ್ಟೀವ್​ ಹಫ್ ​ ಅವರು ಪ್ಯಾರಾ ನಾರ್ಮಲ್​ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಖತ್ ಫೇಮಸ್​ ಆಗಿದ್ದಾರೆ. ಅವರು ಹಫ್ ಪ್ಯಾರಾ ನಾರ್ಮಲ್ ಎನ್ನುವ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಈ ಚಾನೆಲ್‌ಗೆ 19 ಲಕ್ಷ ಚಂದದಾರರು ಇದ್ದಾರೆ. ಸತ್ತವರ ಆತ್ಮಗಳ ಜೊತೆ ಮಾತನಾಡಲು ತಾವು ಕೆಲವೊಂದು ಉಪಕರಣಗಳನ್ನು ಕಂಡು ಹಿಡಿದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

  English summary
  Paranormal expert Steve Huff speaks to Sidharth Shulka's spirit, video goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X