twitter
    For Quick Alerts
    ALLOW NOTIFICATIONS  
    For Daily Alerts

    ಧಾರಾವಾಹಿ ಶೂಟಿಂಗ್ ಮಾಡಲು ಈ ನಿಯಮಗಳನ್ನು ಪಾಲಿಸಲೇಬೇಕು

    |

    ಸುಮಾರು ಎರಡು ತಿಂಗಳ ಬಳಿಕ ಧಾರಾವಾಹಿ ಚಿತ್ರೀಕರಣ ನಡೆಸಲು ಸರ್ಕಾರ ಅನುಮತಿ ನೀಡಿದೆ. ಅದಕ್ಕಾಗಿ ಕೆಲವೊಂದು ಮಾರ್ಗಸೂಚಿ ನಿಯಮಗಳನ್ನು ಕೂಡ ನೀಡಿದೆ. ಹಾಗೆಯೇ ಕೆಲವು ಖಾಸಗಿ ವಾಹಿನಿಗಳೂ ಧಾರಾವಾಹಿ ನಿರ್ಮಾಣ ಸಂಸ್ಥೆಗಳಿಗೆ ಮಾರ್ಗಸೂಚಿಗಳನ್ನು ನೀಡಿವೆ.

    Recommended Video

    ಮುತ್ತಪ್ಪ ರೈ ನಿಧನಕ್ಕೆ ಡಾನ್ ಜಯರಾಜ್ ಪುತ್ರ ವ್ಯಂಗ್ಯ..!

    ಧಾರಾವಾಹಿ ನಿರ್ಮಾಣ ಸಂಸ್ಥೆಗಳು ಎಲ್ಲ ಕಲಾವಿದರ ಸಭೆ ಕರೆದು ನಿಯಮ ಮತ್ತು ಮಾರ್ಗಸೂಚಿಗಳನ್ನು ವಿವರಿಸಬೇಕು. ಚಿತ್ರೀಕರಣ ತಂಡದ ಪ್ರತಿಯೊಬ್ಬರಿಗೂ ಆದ್ಯತೆ ಮೇರೆಗೆ ಜೀವ ವಿಮೆ/ಆರೋಗ್ಯ ವಿಮೆ ಮಾಡಿಸಬೇಕು. ಚಿತ್ರೀಕರಣ ಸಂದರ್ಭದಲ್ಲಿ ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್, ಕೈಗವಸು ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಒದಗಿಸಲೇಬೇಕು. ಚಿತ್ರೀಕರಣ ಸಂದರ್ಭದಲ್ಲಿ ಒಬ್ಬ ನರ್ಸ್ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಲಾಗಿದೆ. ಮುಂದೆ ಓದಿ...

    ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರ

    ಕನಿಷ್ಠ ಸದಸ್ಯರು ಇರಬೇಕು

    ಕನಿಷ್ಠ ಸದಸ್ಯರು ಇರಬೇಕು

    ಚಿತ್ರೀಕರಣ ಸ್ಥಳದಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು. ಇದರ ಮಾಹಿತಿಯನ್ನು ಚಾನೆಲ್ ಜತೆ ಹಂಚಿಕೊಳ್ಳಬೇಕು. ಚಿತ್ರೀಕರಣದ ಸಾಮಗ್ರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಫ್ಯೂಮಿಗೇಷನ್ ಟನೆಲ್ ಅಳವಡಿಸಬೇಕು. ನಿಗದಿಪಡಿಸಿರುವ ಸಮಯಕ್ಕೆ ಕಲಾವಿದರನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಬೇಕು. ಕನಿಷ್ಠ ಸಂಖ್ಯೆಯ ಸದಸ್ಯರು ಚಿತ್ರೀಕರಣದಲ್ಲಿ ಇರಬೇಕು.

    ಡಬಲ್ ಯುನಿಟ್‌ನೊಂದಿಗೆ ಮಾಡಿ

    ಡಬಲ್ ಯುನಿಟ್‌ನೊಂದಿಗೆ ಮಾಡಿ

    ಪ್ರತಿ ಧಾರಾವಾಹಿಯೂ ಎರಡು ಬೇರೆ ಸ್ಥಳಗಳಲ್ಲಿ ಡಬಲ್ ಯುನಿಟ್ ಜತೆ ನಡೆಸಬೇಕು. ಇದರಿಂದ ಎಪಿಸೋಡುಗಳ ಬ್ಯಾಂಕಿಂಗ್ ಜತೆ ಕಡಿಮೆ ಸದಸ್ಯರು ಶೂಟಿಂಗ್‌ನಲ್ಲಿ ಭಾಗವಹಿಸಲು ಸಹಾಯವಾಗುತ್ತದೆ. ಸ್ಥಳದಲ್ಲಿಯೇ ಊಟ ಉಪಾಹಾರ ತಯಾರಿಸಬೇಕು. ಕಾಫಿ ಟೀ ಬದಲು ಕಷಾಯ ಕುಡಿಯುವುದು ಒಳ್ಳೆಯದು. ಎಲ್ಲ ಸಂದರ್ಭದಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

    ಆರೋಗ್ಯ ಸಮಸ್ಯೆಯುಳ್ಳವರು ಬೇಡ

    ಆರೋಗ್ಯ ಸಮಸ್ಯೆಯುಳ್ಳವರು ಬೇಡ

    ವಿವಿಧ ಆರೋಗ್ಯ ಸಮಸ್ಯೆಯುಳ್ಳ ಕಲಾವಿದರು ಮತ್ತು ತಂತ್ರಜ್ಞರನ್ನು ಮೊದಲ ಮೂರು ವಾರ ಚಿತ್ರೀಕರಣದಿಂದ ಕಡ್ಡಾಯವಾಗಿ ದೂರವಿಡಬೇಕು. ಅಪರಿಚಿತರು ಮತ್ತು ಹೊಸಬರ ಜತೆ ಕಲಾವಿದರು ಸಂಪರ್ಕಕ್ಕೆ ಬಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದೇ ದಿನ ಯಾವುದೇ ಕಲಾವಿದರು ಒಂದಕ್ಕಿಂತ ಹೆಚ್ಚು ಸ್ಥಳಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಬೇಕು.

    ಬೇರೆ ಧಾರಾವಾಹಿಯಲ್ಲಿ ಭಾಗವಹಿಸಬಾರದು

    ಬೇರೆ ಧಾರಾವಾಹಿಯಲ್ಲಿ ಭಾಗವಹಿಸಬಾರದು

    ತಂತ್ರಜ್ಞರು ಕೂಡ ಒಂದೇ ಧಾರಾವಾಹಿ ಸೆಟ್‌ನಲ್ಲಿ ಕೆಲಸ ಮಾಡಬೇಕು. ಕನಿಷ್ಠ ಮೂರು ತಿಂಗಳು ಅವರು ಒಂದರಿಂದ ಬೇರೆ ಧಾರಾವಾಹಿ ಯುನಿಟ್‌ಗೆ ಹೋಗಿ ಕೆಲಸ ಮಾಡುವಂತಿಲ್ಲ. 60 ವರ್ಷ ಮೇಲ್ಪಟ್ಟ ತಂತ್ರಜ್ಞರನ್ನು ಬಳಸಿಕೊಳ್ಳುವುದು ಬೇಡ. ಕಲಾವಿದರು ಚಿತ್ರೀಕರಣದ ಸ್ಥಳಕ್ಕೆ ಸ್ವಂತ ವಾಹನದಲ್ಲಿಯೇ ತೆರಳಬೇಕು. ಇದಕ್ಕೆ ಚಾನೆಲ್ ಕಡೆಯಿಂದ ಗುರುತಿನ ಪತ್ರ ನೀಡಲಾಗುತ್ತದೆ.

    ತಾವೇ ಮೇಕಪ್ ಮಾಡಿಕೊಳ್ಳಬೇಕು

    ತಾವೇ ಮೇಕಪ್ ಮಾಡಿಕೊಳ್ಳಬೇಕು

    ಕಲಾವಿದರು ತಮಗೆ ತಾವೇ ಮೇಕಪ್ ಮಾಡಿಕೊಳ್ಳಬೇಕು. ಅದಕ್ಕೆ ಸಂಬಂಧಿಸಿದ ಎಲ್ಲ ಸಲಕರಣೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅನಿವಾರ್ಯ ಸಂದರ್ಭ ಹೊರತುಪಡಿಸಿ ಸ್ವಂತ ಕ್ಯಾಸ್ಟ್ಯೂಮ್‌ ಅನ್ನೇ ಬಳಸಬೇಕು. ಹೊರಗಿನಿಂದ ತರುವಂತಾದರೆ ಅದರ ಸ್ವಚ್ಛತೆ, ಸ್ಯಾನಿಟೈಸೇಷನ್ ನೋಡಿಕೊಳ್ಳಬೇಕು. ನಿರ್ಮಾಪಕರಿಗೆ ಕೊಟ್ಟಿರುವ ಕಾಲ್ ಶೀಟ್ ಕಟ್ಟುನಿಟ್ಟಾಗಿ ಪಾಲಿಸಬೇಕು.

    ಎರಡು ಪುಟದ ಡೈಲಾಗ್‌ನ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ಮುಗಿಸಿದ್ದರು ಈ 'ಪುಟ್ಟ ಗೌರಿ'ಎರಡು ಪುಟದ ಡೈಲಾಗ್‌ನ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ಮುಗಿಸಿದ್ದರು ಈ 'ಪುಟ್ಟ ಗೌರಿ'

    ಬೇರೆ ಶೂಟಿಂಗ್ ಮಾಡಬಾರದು

    ಬೇರೆ ಶೂಟಿಂಗ್ ಮಾಡಬಾರದು

    ಮನೆಯಿಂದಲೇ ಊಟ, ಉಪಾಹಾರ ತರುವುದು ಒಳಿತು. ಸ್ಥಳದಲ್ಲಿಯೇ ಆಹಾರ ತಯಾರಿಸುವುದಾದರೆ ಬಫೆ ಪದ್ಧತಿ ಪಾಲಿಸಬೇಕು. ತಾವು ಬಳಸುವ ತಟ್ಟೆ ಲೋಟ ಮುಂತಾದವನ್ನು ಮನೆಯಿಂದಲೇ ತಂದರೆ ಒಳ್ಳೆಯದು. ಹೊರಗಿನವರನ್ನು ಭೇಟಿ ಮಾಡದೆ ಇರುವಂತೆ ನೋಡಿಕೊಳ್ಳಬೇಕು. ಬೇರೆ ಧಾರಾವಾಹಿ, ಸಿನಿಮಾ ಚಿತ್ರೀಕರಣ ಸ್ಥಳಗಳಿಗೆ ಭೇಟಿ ನೀಡುವುದನ್ನು ತಡೆಯುವ ದಾಖಲೆ ಪತ್ರಕ್ಕೆ ಸಹಿ ಹಾಕಬೇಕು.

    ಸ್ಥಳದಿಂದ ಹೋಗಬಾರದು

    ಸ್ಥಳದಿಂದ ಹೋಗಬಾರದು

    ತಂತ್ರಜ್ಞರು ಸುರಕ್ಷತಾ ಕಿಟ್‌ಗಳನ್ನು ಬಳಸಿ ಸ್ವಚ್ಛವಾಗಿಟ್ಟುಕೊಳ್ಳುವುದು ಕಡ್ಡಾಯ. ಚಿತ್ರೀಕರಣ ಸ್ಥಳದಲ್ಲಿ ಮದ್ಯಪಾನ, ಧೂಮಪಾನ ಮಾಡಬಾರದು. ಚಿತ್ರೀಕರಣ ಮುಗಿಯುವವರೆಗೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಸ್ಥಳದಲ್ಲಿಯೇ ಇರಬೇಕು. ಎರಡು ಗಂಟೆಗೊಮ್ಮೆ ದೈಹಿಕ ತಾಪಮಾನ ಪರೀಕ್ಷೆಗೆ ಒಳಗಾಗಬೇಕು. ತಮ್ಮ ಲೈವ್ ಲೊಕೇಷನ್‌ಗಳನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳಬೇಕು.

    ಆನ್‌ಲೈನ್‌ ಸಭೆ

    ಆನ್‌ಲೈನ್‌ ಸಭೆ

    ಚಾನೆಲ್ ಕೂಡ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆನ್‌ಲೈನ್‌ನಲ್ಲಿಯೇ ಎಲ್ಲ ಚರ್ಚೆ, ಸಭೆಗಳನ್ನು ನಡೆಸಬೇಕು. ಹೊರಾಂಗಣ ದೃಶ್ಯಗಳಿರದಂತೆ ನೋಡಿಕೊಳ್ಳಬೇಕು. ಕಲಾವಿದರ ನಿಕಟವಾದ ಅಭಿನಯ ಇರಬಾರದು. ಚಿತ್ರೀಕರಣ ಸ್ಥಳ, ಎಡಿಟಿಂಗ್ ಮತ್ತು ಚಾನೆಲ್ ಈ ಮೂರೂ ಕೇಂದ್ರಗಳು ಪ್ರತ್ಯೇಕವಾಗಿರಬೇಕು. ಚಿತ್ರೀಕರಣ ಸ್ಥಳದಲ್ಲಿ ಹೆಚ್ಚುವರಿ ಸಹಾಯಕರು, ಕಲಾವಿದರ ಅಗತ್ಯಬೀಳದಂತೆ ನೋಡಿಕೊಳ್ಳಬೇಕು.

    English summary
    Apart from government, some private channels also issues guidelines for serial shooting.
    Tuesday, May 26, 2020, 22:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X