»   » ಪ್ರಿಯಾಮಣಿ ಕೈ ಹಿಡಿಯಲಿರುವ ಮುಸ್ತಫಾ ರಾಜ್ ಯಾರು.? ಅವರ ಹಿನ್ನಲೆ ಏನು.?

ಪ್ರಿಯಾಮಣಿ ಕೈ ಹಿಡಿಯಲಿರುವ ಮುಸ್ತಫಾ ರಾಜ್ ಯಾರು.? ಅವರ ಹಿನ್ನಲೆ ಏನು.?

Posted By:
Subscribe to Filmibeat Kannada

ಕಳೆದ ವರ್ಷದ ಮೇ 27 ರಂದು ಆಪ್ತರ ಸಮ್ಮುಖದಲ್ಲಿ ಬೆಂಗಳೂರು ಬೆಡಗಿ.. ಪಂಚಭಾಷಾ ನಟಿ.. ಪ್ರಿಯಾಮಣಿ ತಮ್ಮ ದೀರ್ಘ ಕಾಲದ ಇನಿಯ ಮುಸ್ತಫಾ ರಾಜ್ ರವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.

ಮುಸ್ತಫಾ ರಾಜ್ ಉದ್ಯಮಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ, ಮುಸ್ತಫಾ ರಾಜ್ ಎಲ್ಲಿಯವರು.? ಮುಸ್ತಫಾ-ಪ್ರಿಯಾಮಣಿ ನಡುವೆ 'ಪ್ರೀತಿ ಗಾನಾ ಬಜಾನ' ಶುರು ಆಗಿದ್ದು ಹೇಗೆ ಎಂಬುದು ಮಾತ್ರ ಅನೇಕರಿಗೆ ಗೊತ್ತಿಲ್ಲ.[ಇಂತಹ ವಿಷಯಕ್ಕೆ ಕಣ್ರೀ ಪ್ರಿಯಾಮಣಿ ನಮಗೆ ಇಷ್ಟ ಆಗೋದು.!]

ತಮ್ಮ 'ರಿಯಲ್' ಲವ್ ಸ್ಟೋರಿಯನ್ನ ನಟಿ ಪ್ರಿಯಾಮಣಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ಮುಂದೆ ಓದಿರಿ....

ಮುಸ್ತಫಾ ರಾಜ್ ಕುರಿತು

ಮುಸ್ತಫಾ ರಾಜ್ ಮೂಲತಃ ಮುಂಬೈ ನವರು. ದೊಡ್ಡ ಉದ್ಯಮಿ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿ.ಸಿ.ಎಲ್) ಹಿಂದಿನ ಪ್ರಮುಖ ವ್ಯಕ್ತಿ ಮುಸ್ತಫಾ ರಾಜ್. 'ಸಿನಿಮಾ ತಾರೆಯರು ಕ್ರಿಕೆಟ್ ಆಡಿದರೆ ಹೇಗೆ?' ಎಂಬ ಕಾನ್ಸೆಪ್ಟ್ ರೂಪುಗೊಳಿಸಿದವರ ಪೈಕಿ ಮುಸ್ತಫಾ ರಾಜ್ ಕೂಡ ಒಬ್ಬರು.

ಲವ್ ಸ್ಟೋರಿ ಶುರು ಆಗಿದ್ದು ಹೇಗೆ.?

''ನನಗೆ ಮುಸ್ತಫಾ ರಾಜ್ ಪರಿಚಯ ಆಗಿದ್ದು ಸಿ.ಸಿ.ಎಲ್ ನಲ್ಲಿ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ನಾನು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದೆ. ಅಲ್ಲಿ ನಮ್ಮಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಈಗ ಲೈಫ್ ಪಾರ್ಟ್ನರ್ಸ್ ಆಗುತ್ತಿದ್ದೇವೆ'' ಎನ್ನುತ್ತಾರೆ ನಟಿ ಪ್ರಿಯಾಮಣಿ

ಮದುವೆ ಯಾವಾಗ.?

''ಎಲ್ಲರಿಗೂ ಗೊತ್ತಿರುವ ಹಾಗೆ, ಕಳೆದ ವರ್ಷ ನಾನು ನಿಶ್ಚಿತಾರ್ಥ ಮಾಡಿಕೊಂಡೆ'' ಎನ್ನುವ ಪ್ರಿಯಾಮಣಿ ತಮ್ಮ ಮದುವೆಯ ಊಟ ಯಾವಾಗ ಹಾಕಿಸಲಿದ್ದಾರೆ ಎಂಬುದನ್ನ ಬಾಯ್ಬಿಡಲಿಲ್ಲ.

ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿತ್ತು

ಮೇ 27, 2016 ರಂದು ಬನಶಂಕರಿಯಲ್ಲಿ ಇರುವ ತಮ್ಮ ನಿವಾಸದಲ್ಲಿ ನಟಿ ಪ್ರಿಯಾಮಣಿ ಸರಳವಾಗಿ ಮುಸ್ತಫಾ ರಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥ ಸಮಾರಂಭದಲ್ಲಿ ಉಭಯ ಕುಟುಂಬದವರಷ್ಟೇ ಭಾಗಿಯಾಗಿದ್ದರು.[ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪ್ರಿಯಾಮಣಿ]

English summary
Kannada Actress Priyamani spoke about her fiance Mustafa Raj in Zee Kannada Channel's popular show Weekend with Ramesh-3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada