For Quick Alerts
  ALLOW NOTIFICATIONS  
  For Daily Alerts

  ವೀಕ್ಷಕರ ಮನಗೆದ್ದಿದ್ದ ಕನ್ನಡ ರಿಯಾಲಿಟಿ ಶೋ ಮರುಪ್ರಸಾರ ಆರಂಭ!

  By ಪ್ರಿಯಾ ದೊರೆ
  |

  ಹಳ್ಳಿ ಹೈದ ಪ್ಯಾಟೆಗ್ ಬಂದ.. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು.. ಪ್ಯಾಟೆ ಮಂದಿ ಕಾಡಿಗೆ ಬಂದ್ರು.. ಹೀಗೆ ಸಾಲು ಸಾಲು ರಿಯಾಲಿಟಿ ಶೋಗಳನ್ನು ಕೊಟ್ಟು ಪ್ರೇಕ್ಷಕರನ್ನು ರಂಜಿಸಿದ್ದು ಸ್ಟಾರ್ ಸುವರ್ಣ ವಾಹಿನಿ . 10 ವರ್ಷಗಳ ಹಿಂದೆ ರಿಯಾಲಿಟಿ ಶೋಗಳಿಂದಲೇ ಹೆಸರು ವಾಸಿಯಾಗಿದ್ದ ಈ ವಾಹಿನಿ ಈಗ ಮತ್ತೆ ಅಂತಹ ರಿಯಾಲಿಟಿ ಶೋ ಒಂದರ ಮರು ಪ್ರಸಾರ ಶುರುವಾಗಿದೆ.

  ಕಾಮಿಡಿ ಗ್ಯಾಂಗ್ಸ್, ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋಗಳು ಮುಕ್ತಾಯಗೊಂಡಿವೆ. ಈಗ ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಹೊಸ ರಿಯಾಲಿಟಿ ಶೋ ಬರಲಿದೆ. ಅದು ಯಾವುದು ಎಂದು ಕೇಳಿದರೆ, ಪ್ರೇಕ್ಷಕರ ಕಣ್ಣು ಅರಳುವುದರಲ್ಲಿ ಡೌಟೇ ಇಲ್ಲ.

  ಕೆಲ ವರ್ಷಗಳ ಹಿಂದೆ ಅದೊಂದು ಶೋ ತುಂಬಾನೇ ಫೇಮಸ್ ಆಗಿತ್ತು. ಈಗ ಅಂತಹದ್ದೇ ಶೋ ಮತ್ತೆ ಪ್ರಸಾರವಾಗಲು ಸಜ್ಜಾಗಿದೆ. ಅಷ್ಟಕ್ಕೂ ಯಾವುದಪ್ಪಾ ಆ ಶೋ ಅಂತ ಯೋಚಿಸುತ್ತಿದ್ದೀರಾ..? ಮುಂದೆ ಓದಿ ನಿಮಗೆ ಗೊತ್ತಾಗುತ್ತದೆ.

  'ಪ್ಯಾಟೆ ಮಂದಿ ಕಾಡಿಗ್ ಬಂದ್ರು'- 2 ಮರುಪ್ರಸಾರ

  'ಪ್ಯಾಟೆ ಮಂದಿ ಕಾಡಿಗ್ ಬಂದ್ರು'- 2 ಮರುಪ್ರಸಾರ

  ಈಗಾಗಲೆ ತನ್ನ ವೈವಿಧ್ಯಮಯ ರಿಯಾಲಿಟಿ ಶೋಗಳಿಗೆ ಹೆಸರಾಗಿರುವ ಸುವರ್ಣ ವಾಹಿನಿಯಲ್ಲಿ ಮತ್ತೊಂದು ವಿನೂತನ ರಿಯಾಲಿಟಿ ಶೋ ಬರಲಿದೆ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು', 'ಹಳ್ಳಿ ಹೈದ ಪ್ಯಾಟೆಗೆ ಬಂದ' ಮತ್ತು 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋಗಳು ಸ್ಟಾರ್ ಸುವರ್ಣ ವಾಹಿನಿಯ ಟ್ರೇಡ್ ಮಾರ್ಕ್ ಶೋಗಳು ಎಂದರೂ ತಪ್ಪಾಗೋದಿಲ್ಲ. ಈ ವಾಹಿನಿಯಲ್ಲಿ ಕೆಲ ವರ್ಷಗಳ ಕಾಲ ಮೇಲೆ ಹೇಳಿರುವಂತಹ ಶೋಗಳು ಕಮಾಲ್ ಮಾಡಿ ಬಿಟ್ಟಿದ್ದವು. ಇದೀಗ ಅಂತಹದ್ದೇ ಶೋ ಅನ್ನು ಮತ್ತೆ ಪ್ರಸಾರ ಮಾಡಲು ವಾಹಿನಿ ಸಜ್ಜಾಗಿರುವುದು ಹೊಸ ಸುದ್ದಿ.

  ಅಕುಲ್ ಬಾಲಾಜಿ ನಿರೂಪಣೆ

  ಅಕುಲ್ ಬಾಲಾಜಿ ನಿರೂಪಣೆ

  'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು', 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಹಾಗೂ 'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಕಾರ್ಯಕ್ರಮವನ್ನು ನಟ ಅಕುಲ್ ಬಾಲಾಜಿ ನಿರೂಪಿಸಿದ್ದರು. ಈ ರಿಯಾಲಿಟಿ ಶೋ ಮೂಲಕ ಅದೆಷ್ಟೋ ಪ್ರತಿಭೆಗಳು ಬಣ್ಣದ ಲೋಕದಲ್ಲಿ ಈಗಲೂ ಪಯಣಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮವನ್ನು ಈಗ ಮತ್ತೆ ಪ್ರಸಾರ ಮಾಡಲು ವಾಹಿನಿ ಮುಂದಾಗಿದೆ. ಈ ಬಗ್ಗೆ ಸ್ವತಃ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಇದನ್ನು ನೋಡಿದ ಹಲವರು ಫುಲ್ ಖುಷಿಯಾಗಿದ್ದಾರೆ.

  ಅಂಡಮಾನ್‌ನಲ್ಲಿ ಚಿತ್ರಿಸಿದ್ದ ಕಾರ್ಯಕ್ರಮ

  ಅಂಡಮಾನ್‌ನಲ್ಲಿ ಚಿತ್ರಿಸಿದ್ದ ಕಾರ್ಯಕ್ರಮ

  ಸಿಟಿ ಹುಡುಗಿಯರು ಹಳ್ಳಿಗೆ ಬಂದು ಅಲ್ಲಿನ ಜೀವನ ಶೈಲಿಯನ್ನು ರೂಢಿಸಿಕೊಂಡು ಹೇಗೆ ಬದುಕುತ್ತಾರೆ ಎಂದು 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋನಲ್ಲಿ ತೋರಿಸಲಾಗಿತ್ತು. ಇನ್ನು 'ಹಳ್ಳಿ ಹೈದ ಪ್ಯಾಟೆಗೆ ಬಂದ' ಶೋ ನಲ್ಲಿ ಹಳ್ಳಿಯ ಯುವಕರು ಸಿಟಿ ಜೀವನ ನಡೆಸುವುದನ್ನು ಕಲಿತಿದ್ದರು. ಇವುಗಳ ಜೊತೆಗೆ ಒಂದಷ್ಟು ಟಾಸ್ಕ್ ಗಳನ್ನು ಕೂಡ ನೀಡಲಾಗುತ್ತಿತ್ತು. ಇಂತಹದ್ದೇ ಮತ್ತೊಂದು ಶೋ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು'. ಇದರಲ್ಲಿ ಯುವಕ-ಯುವತಿಯರು ಇಬ್ಬರೂ ಇದ್ದು, ಸಿಟಿಯಲ್ಲಿ ಬದುಕಿದ್ದ ಇವರು ಕಾಡಿನಲ್ಲಿ ವಾಸವಿರಬೇಕಾಯ್ತು. ನಗರದ ಐಶಾರಾಮಿ ಜೀವನದಲ್ಲಿ ಬೆಳೆದ ಯುವಕ ಯುವತಿಯರು ಕಾಡಿನ ಅನಿವಾರ್ಯ ಪರಿಸ್ಥಿತಿಗಳಿಗೆ ಹೇಗೆ ಸ್ಪಂದಿಸುತ್ತಾರೆ ಹಾಗೂ ಅಲ್ಲಿನ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಿ ಜೀವನ ಸಾಗಿಸುತ್ತಾರೆ. ಈ ಒಂದು ಕಾನ್ಸೆಪ್ಟ್ ಇಟ್ಟುಕೊಂಡು ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಅಂಡಮಾನ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು.

  10 ವರ್ಷಗಳ ಬಳಿಕ ಮತ್ತದೇ ಶೋ

  10 ವರ್ಷಗಳ ಬಳಿಕ ಮತ್ತದೇ ಶೋ

  ಇದೀಗ ಸ್ಟಾರ್ ಸುವರ್ಣ ವಾಹಿನಿ 10 ವರ್ಷಗಳ ಹಿಂದಿನ ರಿಯಾಲಿಟಿ ಶೋ ಪುನಃ ಪ್ರಸಾರ ಮಾಡಲು ವಾಹಿನಿ ಮುಂದಾಗಿದ್ದಾರೆ. ಪೇಟೆಯ ಯುವಕ ಯುವತಿಯರು ದಟ್ಟ ಕಾಡಿನ ಮಧ್ಯೆ ಜೀವನ ನಡೆಸುತ್ತಾ ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವುದೇ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು'. ಇದೇ ಶೋ ಅನ್ನು ಮತ್ತೆ ಪ್ರಸಾರ ಮಾಡಲು ವಾಹಿನಿ ಮುಂದಾಗಿದೆ. ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಶೋ ಮರುಪ್ರಸಾರ ಆಗಲಿದೆ. 2011ರ ಅಕ್ಟೋಬರ್ ತಿಂಗಳಿನಲ್ಲಿ ಈ ಶೋ ಪ್ರಸಾರಗೊಂಡಿತ್ತು. ಈಗ ಮತ್ತೆ ಮರು ಪ್ರಸಾರಕ್ಕೆ ಸಜ್ಜಾಗಿದೆ.

  English summary
  Pyate Mandhi Kaadig Bandru Season 2 Repeat Telecast Air Time And Other Details. know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X