»   » ರಾಧಾ ಮಾತನ್ನ ರಮಣ್ ಕೇಳಲಿಲ್ಲ: ಸಿತಾರ ಸಿಕ್ಕಿ ಬೀಳಲಿಲ್ಲ.!

ರಾಧಾ ಮಾತನ್ನ ರಮಣ್ ಕೇಳಲಿಲ್ಲ: ಸಿತಾರ ಸಿಕ್ಕಿ ಬೀಳಲಿಲ್ಲ.!

Posted By:
Subscribe to Filmibeat Kannada

ಇಪ್ಪತ್ತು ವರ್ಷಗಳಿಂದ 'ಅವನಿ' ಎಲ್ಲಿದ್ದಾಳೆ, ಏನು ಮಾಡ್ತಿದ್ದಾಳೆ ಅಂತ ಸುಳಿವು ಇಲ್ಲದವರಿಗೆ ಈಗ 'ಅವನಿ' ಇರುವ ಜಾಗ ಗೊತ್ತಾಗಿದೆ. 'ಅವನಿ' ಅಪಾಯದಲ್ಲಿ ಇದ್ದಾಳೆ ಅಂತ ಗೊತ್ತಿದ್ದರೂ, ಆಕೆ ಕೈಗೆ ಸಿಗುವವರಿಗೆ ವಿಷಯವನ್ನ ಗುಟ್ಟಾಗಿ ಇಟ್ಟುಕೊಳ್ಳದೇ, ಸಿತಾರ ದೇವಿಗೆ ಫೋನ್ ಮಾಡಿ ಸತ್ಯ ಕಕ್ಕಿದ್ದಾರೆ ರಮಣ್.

''ಅವನಿ'ಯನ್ನ ನೋಡುವವರೆಗೂ ಯಾರಿಗೂ ವಿಷಯ ಹೇಳೋದು ಬೇಡ'' ಅಂತ ರಾಧಾ ಎಷ್ಟೇ ಹೇಳಿದರೂ, ಅದನ್ನ ರಮಣ್ ಕೇಳಲೇ ಇಲ್ಲ. ಹೋಗಿ ಹೋಗಿ ಸಿತಾರ ದೇವಿಗೆ ಫೋನ್ ಮಾಡಿ ಪ್ರಕೃತಿ ಆಸ್ಪತ್ರೆಗೆ ಬನ್ನಿ ಅಂತ ಆಹ್ವಾನ ಬೇರೆ ಕೊಟ್ಟಿದ್ದಾರೆ. (ಸಿತಾರ ದೇವಿ ಪ್ರಕೃತಿ ಆಸ್ಪತ್ರೆಯಲ್ಲೇ ಠಿಕಾಣಿ ಹೂಡಿರುವ ಸತ್ಯ ಪಾಪ ರಮಣ್ ಗೆ ಗೊತ್ತಿಲ್ಲ)

ಇದಕ್ಕೆ ದಡ್ಡತನ ಅನ್ನಬೇಕೋ, ಅಥವಾ ಅತ್ತೆ ಮೇಲೆ ಅಪಾರ ನಂಬಿಕೆ ಅಂತ ಭಾವಿಸಬೇಕೋ, ಇಲ್ಲ ಧಾರಾವಾಹಿಯನ್ನ ಇನ್ನಷ್ಟು ದಿನ ರಬ್ಬರ್ ಎಳೆದಂತೆ ಎಳೆಯುವುದಕ್ಕೆ ನಿರ್ದೇಶಕರು ಮಾಡಿರುವ ತಂತ್ರ ಅಂದುಕೊಳ್ಳಬೇಕೋ, ನೀವೇ ನಿರ್ಧರಿಸಿ.! ಮುಂದೆ ಓದಿರಿ....

ಮಾನಸಿಕ ರೋಗಿ 'ಅವನಿ'

ಪ್ರಕೃತಿ ಆಸ್ಪತ್ರೆಯಲ್ಲಿ 'ಅವನಿ' ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬ ಸತ್ಯ ರಮಣ್ ಮತ್ತು ಫ್ಯಾಮಿಲಿಗೆ ಗೊತ್ತಾಗಿದೆ. 'ಅವನಿ' ಮಾನಸಿಕ ರೋಗಿ ಎಂಬುದು ಕೂಡ ಸದ್ಯ ಗುಟ್ಟಾಗಿ ಉಳಿದಿಲ್ಲ.

ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!

'ಅವನಿ' ಆಪರೇಶನ್ ಸಕ್ಸಸ್

'ಅವನಿ'ಗೆ ಮಾಡಲಾಗುತ್ತಿದ್ದ ಆಪರೇಶನ್ ಸಕ್ಸಸ್ ಆಗಿದೆ. ಆಪರೇಶನ್ ಮುಗಿದ ಮೇಲೆ 'ಅವನಿ' ರುದ್ರನ ಜಪ ಮಾಡುತ್ತಿದ್ದಾಳೆ. ಇದೇ ಗ್ಯಾಪ್ ನಲ್ಲಿ 'ಅವನಿ'ಗೆ ತನ್ನ ಕುಟುಂಬದ ನೆನಪೂ ಕಾಡುತ್ತಿದೆ.

ದೀಪಿಕಾ ಪ್ಲಾನ್ ತಲೆಕೆಳಗು: ಪ್ರಕೃತಿ ಆಸ್ಪತ್ರೆಯಲ್ಲಿ ಏನಾಗುವುದೋ ಇಂದು.?

ದೀಪಿಕಾಗೂ ಗೊತ್ತಾಗ್ಹೋಯ್ತು.!

'ಅವನಿ'ಯನ್ನ ನೋಡಲು ಮನೆ ಮಂದಿಯೆಲ್ಲ ಪ್ರಕೃತಿ ಆಸ್ಪತ್ರೆ ಕಡೆಗೆ ಹೊರಟಿರುವ ಸತ್ಯ ದೀಪಿಕಾಗೂ ಗೊತ್ತಾಗಿದೆ. 'ಅವನಿ'ಯನ್ನ ರಮಣ್ ಕೈಗೆ ಕೊಟ್ಟು, ರಮಣ್ ಕೈಹಿಡಿಯಬೇಕು ಅಂತಿರೋ ದೀಪಿಕಾ ಮಾಸ್ಟರ್ ಪ್ಲಾನ್ ಫ್ಲಾಪ್ ಆಗುವ ಹಂತ ತಲುಪಿರೋದ್ರಿಂದ, ಆಸ್ಪತ್ರೆಯಿಂದ 'ಅವನಿ'ಯನ್ನ ಕಿಡ್ನ್ಯಾಪ್ ಮಾಡಲು ದೀಪಿಕಾ ಸಂಚು ರೂಪಿಸಿದ್ದಾಳೆ.

ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!

ಸಿಕ್ಕಿ ಬೀಳಲಿಲ್ಲ ಸಿತಾರ ದೇವಿ.!

ಈಗಲಾದರೂ ಸಿತಾರ ದೇವಿ ಸಿಕ್ಕಿ ಬೀಳ್ತಾರೆ ಅಂತ ವೀಕ್ಷಕರು ಭಾವಿಸಿದ್ರು. ಆದ್ರೆ, ಅದು ಆಗಲಿಲ್ಲ. ಪ್ರಕೃತಿ ಆಸ್ಪತ್ರೆಗೆ ಬರುವಂತೆ ಸಿತಾರ ದೇವಿಗೆ ರಮಣ್ ಫೋನ್ ಮಾಡಿ ಹೇಳಿದ್ರಿಂದ, ಎಲ್ಲರಿಗೂ ವಿಷಯ ಗೊತ್ತಾಗಿರುವುದು ಸಿತಾರ ಅರಿವಿಗೆ ಬಂದಿದೆ.

ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!

ಇಂದು ಏನಾಗುತ್ತೋ.?

ದೀಪಿಕಾ ಹೇಳಿದಂತೆ ಕೇಳು ಅಂತ ವಿನಯ್ ಗೆ ದಿನಕರ್ ಹೇಳಿದ್ದಾರೆ. ಹಾಗಾದ್ರೆ, 'ಅವನಿ' ಕಿಡ್ನ್ಯಾಪ್ ಆಗುತ್ತಾಳಾ.? ಇಲ್ಲ, ಮನೆಯವರ ಕೈಗೆ 'ಅವನಿ' ಸಿಗುತ್ತಾಳಾ.? ಇಂದಿನ ಸಂಚಿಕೆಯಲ್ಲಿ ಏನು ಕಾದಿದೆಯೋ.?

English summary
Radha Ramana serial written update: Deepika plans to kidnap Avani. ರಾಧಾ ಮಾತನ್ನ ರಮಣ್ ಕೇಳಲಿಲ್ಲ: ಸಿತಾರ ಸಿಕ್ಕಿ ಬೀಳಲಿಲ್ಲ.!

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X