»   » ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!

ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!

Posted By:
Subscribe to Filmibeat Kannada
ರಮಣ್ ತಂಗಿ ಅವನಿ ಕಥೆ ಮುಂದೇನಾಗತ್ತೆ | Filmibeat Kannada

ಅಂತೂ ಇಂತೂ ರಾಧಾ ಟೀಚರ್ ಗೆ ಸತ್ಯ ಗೊತ್ತಾಗಿದೆ. 'ಅವನಿ' ಬದುಕಿರುವ ಸತ್ಯ ಸಂಗತಿ ರಾಧಾ ಮುಂದೆ ಬಟಾ ಬಯಲಾಗಿದೆ.

'ರಾಧಾ ರಮಣ' ಧಾರಾವಾಹಿಯ ಬಹುದೊಡ್ಡ ಸಸ್ಪೆನ್ಸ್ ಅಂದ್ರೆ 'ಅವನಿ'. ಈಕೆ ಬದುಕಿರುವ ಸತ್ಯ ದಿನಕರ್, ದೀಪಿಕಾ ಹಾಗೂ ಸಿತಾರ ದೇವಿಗೆ ಬಿಟ್ಟರೆ ಮನೆಯಲ್ಲಿ ಇನ್ಯಾರಿಗೂ ಗೊತ್ತಿಲ್ಲ.

'ಅವನಿ' ಬಗ್ಗೆ ಗೊತ್ತಾದಾಗಿನಿಂದಲೂ, ರಾಧಾ ಟೀಚರ್ ಆಕೆಯನ್ನ ಹುಡುಕುವ ಪ್ರಯತ್ನ ಮಾಡುತ್ತಿದ್ದರು. ಆದ್ರೆ ಸಫಲ ಆಗಿರಲಿಲ್ಲ. ಈಗ 'ಅವನಿ'ಗೆ ಆಪರೇಶನ್ ನಡೆಯುತ್ತಿರುವಾಗ, ಆಕೆ ಬದುಕಿರುವ ಸಂಗತಿ ರಾಧಾಗೆ ಗೊತ್ತಾಗಿದೆ.

Radha Ramana serial: Radha gets to know the truth about Avani

ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!

ಪ್ರಕೃತಿ ಆಸ್ಪತ್ರೆಯಲ್ಲಿ ಪೇಷೆಂಟ್ ನಂ.111 ಆಗಿ 'ಅವನಿ' ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಸಂಗತಿಯನ್ನ ರಾಧಾ ಮುಂದೆ ಡಾಕ್ಟರ್ ಸ್ನೇಹ ಬಾಯ್ಬಿಟ್ಟಿದ್ದಾರೆ. ಅವನಿ ಬದುಕಿರುವುದು ರಾಧಾಗೆ ಖುಷಿ ತಂದಿದೆ. ಆದ್ರೆ, 'ಅವನಿ' ಪೇಷೆಂಟ್ ಆಗಿರುವ ವಿಚಾರ ಕೇಳಿ ರಾಧಾಗೆ ಶಾಕ್ ಆಗಿದೆ.

'ರಾಧಾ ರಮಣ' ಧಾರಾವಾಹಿಯಲ್ಲಿ ಇಂದು ರೋಚಕ ತಿರುವು: 'ಅವನಿ'ಗೆ ಏನಾಗುತ್ತೋ, ಏನೋ?

'ಅವನಿ' ಮತ್ತೆ ನಾರ್ಮಲ್ ಆಗುವಂತೆ ಆಪರೇಶನ್ ಮಾಡಲು ದೀಪಿಕಾ ಹಣ ನೀಡಿದ್ದಾಳೆ. 'ಅವನಿ'ಗೆ ಆಪರೇಶನ್ ನಡೆಯುತ್ತಿರುವುದು ದಿನಕರ್ ಗೂ ಗೊತ್ತಿದೆ. 'ಅವನಿ' ವಿಚಾರದಲ್ಲಿ ದೀಪಿಕಾ ಹಾಗೂ ದಿನಕರ್ ಇನ್ವಾಲ್ವ್ ಆಗಿರುವುದು ಸಿತಾರ ದೇವಿಗೆ ಇನ್ನೂ ತಿಳಿದು ಬಂದಿಲ್ಲ.

ಆಪರೇಶನ್ ನಿಂದ 'ಅವನಿ' ಮತ್ತೆ ಮೊದಲಿನಂತೆ ಆಗುತ್ತಾಳಾ.? ಸಿತಾರ ದೇವಿ ಮಸಲತ್ತು ಮನೆಯವರ ಮುಂದೆ ಬಯಲಾಗುತ್ತಾ.? ಅಂತ ನಾಳಿನ ಸಂಚಿಕೆ ನೋಡ್ಬೇಕು.!

English summary
Radha Ramana serial written update: Radha gets to know the truth about Avani.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X