For Quick Alerts
  ALLOW NOTIFICATIONS  
  For Daily Alerts

  ಉಲ್ಟಾ ಹೊಡೆದ ರಾಣಿ: ಸಿತಾರ ದೇವಿಗೆ ಹೀಗೇ ಆಗಬೇಕು.!

  By Harshitha
  |
  ಆಸ್ತಿ ಇಲ್ಲ, ಪ್ರೇಮ ಪತ್ರ ಇಲ್ಲ,ನೋಡೋರ್ಗೆ ಟಾರ್ಚರ್ ಕಮ್ಮಿ ಆಗಲ್ಲ.! | Filmibeat Kannada

  ಇಷ್ಟು ದಿನ ತಾನು ಅಂದುಕೊಂಡ ಹಾಗೇ, ಎಲ್ಲವೂ ನಡೆಯುತ್ತಿದೆ ಅಂತ ಸಿತಾರ ದೇವಿ ಬೀಗುತ್ತಿದ್ದರು. 'ಕಳ್ಳಿ' ರಾಣಿಯನ್ನ ಮನೆಗೆ ಕರ್ಕೊಂಡು ಬಂದು 'ಯುವ ರಾಣಿ'ಯ ಪಟ್ಟ ಕೊಟ್ಟರು. ತಾವೇ ಸಾಕಿದ ಮುದ್ದಿನ ಗಿಣಿ, ಹದ್ದಾಗಿ ತಮಗೇ ಬಂದು ಕುಕ್ಕುತ್ತೆ ಅನ್ನೋದು ಪಾಪ ಸಿತಾರ ದೇವಿಗೆ ಗೊತ್ತಿರಲಿಲ್ಲ.

  ''ರಾಣಿಯನ್ನ ಮೊದಲು ಮನೆಯಿಂದ ಹೊರಗೆ ಹಾಕಬೇಕು'' ಎಂದು ದೀಪಿಕಾ ಎಷ್ಟೋ ಬಾರಿ ಹೇಳಿದ್ದಳು. ಆದ್ರೆ, ಅಂದು ಮಗಳ ಮಾತನ್ನ ಸಿತಾರ ದೇವಿ ಕೇಳಿರಲಿಲ್ಲ. ಈಗ ರಾಣಿ ಆಡುತ್ತಿರುವ ಡಬಲ್ ಗೇಮ್ ಕಂಡು ಸಿತಾರ ದೇವಿ ಅಕ್ಷರಶಃ ಶಾಕ್ ಆಗಿದ್ದಾರೆ.

  ಕೋಟ್ಯಾಂತರ ರೂಪಾಯಿ ಆಸ್ತಿ ಪತ್ರ, ಕ್ರೆಡಿಟ್ ಕಾರ್ಡ್... ಎಲ್ಲವೂ ಸದ್ಯ ರಾಣಿ ಕೈ ಸೇರಿದೆ. ಹೀಗಾಗಿ, ಸಿತಾರ ದೇವಿ ಮುಂದೆ ರಾಣಿ ಬಾಲ ಬಿಚ್ಚಿದ್ದಾಳೆ. ''ಆಸ್ಟ್ರೇಲಿಯಾ ಪ್ರಾಜೆಕ್ಟ್ ನ ನನ್ನ ಹೆಸರಿಗೆ ಬರೆದು ಕೊಡು'' ಅಂತ ಸಿತಾರ ದೇವಿ ಕೇಳಿದಾಗ, ರಾಣಿ ಉಲ್ಟಾ ಹೊಡೆದಳು.

  ''ಏನೇ ಮಾಡಿದರೂ ಸಹಿ ಹಾಕಲ್ಲ. ನೀನಾ.. ನಾನಾ.. ನೋಡೇ ಬಿಡೋಣ'' ಅಂತ ರಾಣಿ ಸವಾಲು ಹಾಕಿದ್ದಾಳೆ. ಇದನ್ನೆಲ್ಲ ನೋಡಿ ಬುಸುಗುಡುತ್ತಿರುವ ಸಿತಾರ ದೇವಿ ಇನ್ನೇನ್ ಸ್ಕೆಚ್ ಹಾಕ್ತಾರೋ, ಏನೋ...

  ಸಿಡಿದೆದ್ದ ರಾಣಿ

  ಸಿಡಿದೆದ್ದ ರಾಣಿ

  ವಿವಾಹ ವಾರ್ಷಿಕೋತ್ಸವ ನಡೆಯುತ್ತಿದ್ದ ಜಾಗಕ್ಕೆ ಪೊಲೀಸ್ ರನ್ನ ಕರೆಯಿಸಿ, ಮಾದನನ್ನ ಅರೆಸ್ಟ್ ಮಾಡಿಸಿದ್ದು ಇದೇ ಸಿತಾರ ದೇವಿ ಅನ್ನೋ ಸತ್ಯ ರಾಣಿಗೆ ಗೊತ್ತು. ಹೀಗಾಗಿ, ಸಿತಾರ ದೇವಿ ವಿರುದ್ಧ ರಾಣಿ ಸಿಡಿದೆದ್ದಿದ್ದಾಳೆ.

  ಕೊಟ್ಟ ಬಿಲ್ಡಪ್ ಒಂದು, ಮಾದ ಮಾಡಿದ್ದು ಮತ್ತೊಂದು: ತಲೆ ಚಚ್ಚಿಕೊಂಡ ವೀಕ್ಷಕರು.! ಕೊಟ್ಟ ಬಿಲ್ಡಪ್ ಒಂದು, ಮಾದ ಮಾಡಿದ್ದು ಮತ್ತೊಂದು: ತಲೆ ಚಚ್ಚಿಕೊಂಡ ವೀಕ್ಷಕರು.!

  ಮಾದ ಬಿಡುಗಡೆ ಆಗಬೇಕು.!

  ಮಾದ ಬಿಡುಗಡೆ ಆಗಬೇಕು.!

  ''ಮೊದಲು ಮಾದ ಜೈಲಿನಿಂದ ಬಿಡುಗಡೆ ಆಗಬೇಕು. ಆಮೇಲೆ ಸಹಿ ಹಾಕುವ ವಿಷಯ'' ಅಂತ ಸಿತಾರ ದೇವಿಗೆ ರಾಣಿ ಕಂಡೀಷನ್ ಹಾಕಿದ್ದಾಳೆ. ರಾಣಿ ಕಂಡೀಷನ್ ಗೆ ಬಗ್ಗದ ಸಿತಾರ ದೇವಿ, ಮಾದನ ಮೇಲೆ ಇಲ್ಲದೇ ಇರುವ ಕೇಸ್ ಗಳನ್ನೆಲ್ಲ ಹಾಕಲು ಸೂಚಿಸಿದ್ದಾರೆ.

  ಸಿತಾರ ದೇವಿ ಆಸೆ ನುಚ್ಚುನೂರು: ಅವನಿ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ.! ಸಿತಾರ ದೇವಿ ಆಸೆ ನುಚ್ಚುನೂರು: ಅವನಿ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ.!

  ನೀನಾ... ನಾನಾ....

  ನೀನಾ... ನಾನಾ....

  ಅವನಿ (ರಾಣಿ) ಹೆಸರಿನಲ್ಲಿ ಇರುವ ಆಸ್ಟ್ರೇಲಿಯಾ ಪ್ರಾಜೆಕ್ಟ್ ನ ತಮ್ಮ ಹೆಸರಿಗೆ ಬರೆಯಿಸಿಕೊಳ್ಳಲು ಸಿತಾರ ದೇವಿ ಸರ್ಕಸ್ ಮಾಡ್ತಿದ್ದಾರೆ. ಆಸ್ತಿ ಪತ್ರಕ್ಕೆ ರಾಣಿ ಸಹಿ ಬೇಕು. ಆದ್ರೆ, ಸಹಿ ಹಾಕಲ್ಲ ಅಂತ ಹಠ ಹಿಡಿದಿದ್ದಾಳೆ ರಾಣಿ. ''ನೀನಾ.. ನಾನಾ.. ನೋಡೇ ಬಿಡೋಣ'' ಅಂತ ಸಿತಾರ ದೇವಿಗೆ ಸವಾಲ್ ಹಾಕಿದ್ದಾಳೆ.

  ದಾರಿ ತಪ್ಪುತ್ತಿದೆ 'ರಾಧಾ ರಮಣ' ಕಥೆ: ವೀಕ್ಷಕರದ್ದು ಬರೀ ವ್ಯಥೆ.!ದಾರಿ ತಪ್ಪುತ್ತಿದೆ 'ರಾಧಾ ರಮಣ' ಕಥೆ: ವೀಕ್ಷಕರದ್ದು ಬರೀ ವ್ಯಥೆ.!

  ಪತ್ರದ ಹುಡುಕಾಟದಲ್ಲಿ ರಾಧಾ

  ಪತ್ರದ ಹುಡುಕಾಟದಲ್ಲಿ ರಾಧಾ

  ವಿವಾಹ ವಾರ್ಷಿಕೋತ್ಸವದ ದಿನ ರಮಣ್ ಕೊಟ್ಟಿದ್ದ ಪ್ರೇಮ ಪತ್ರವನ್ನ ರಾಧಾ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಇಡೀ ಮನೆ ಹುಡುಕಾಡುತ್ತಿದ್ದಾರೆ. ಪತ್ರದಲ್ಲಿ ತಮ್ಮ ಭಾವನೆ ಬಿಚ್ಚಿಟ್ಟಂತೆ, ರಾಧಾ ಮುಂದೆ ನೇರವಾಗಿ ತಮ್ಮ ಮನಸ್ಸಿನಲ್ಲಿ ಇರುವ ಭಾವನೆಗಳನ್ನ ರಮಣ್ ಹೇಳಿಕೊಳ್ತಾರಾ.?

  ಇನ್ನೇನ್ ಕಾದಿದೆಯೋ.?

  ಇನ್ನೇನ್ ಕಾದಿದೆಯೋ.?

  ರಾಧಾ-ರಮಣ್ ಗೆ ಪ್ರೇಮ ಪತ್ರದ ಟೆನ್ಷನ್... ಸಿತಾರ ದೇವಿ-ರಾಣಿಗೆ ಆಸ್ತಿ ಪತ್ರದ ಟೆನ್ಷನ್... ಇದು ಇನ್ನೆಲ್ಲಿವರೆಗೂ ಹೋಗಿ ತಲುಪುತ್ತೋ... ಈ ಅಧ್ಯಾಯವನ್ನ ನಿರ್ದೇಶಕರು ಇನ್ನೆಷ್ಟು ದಿನ ಎಳೆಯುತ್ತಾರೋ.. ಏನೋ.?

  English summary
  Radha Ramana serial written update: Rani challenges Sitara Devi

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X