For Quick Alerts
  ALLOW NOTIFICATIONS  
  For Daily Alerts

  ತಪ್ಪು ತಿಳಿಬೇಡಿ...ಉಪೇಂದ್ರ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹಾಗಲ್ಲ..!

  By Naveen
  |

  ಕನ್ನಡದ ಗಾಯಕ ರಾಜೇಶ್ ಅವರು ಸದ್ಯ ನಟ ಉಪೇಂದ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದರು. ಕಿರುತೆರೆಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಆಗಮಿಸಿದ ರಾಜೇಶ್ ಕೃಷ್ಣನ್ ಉಪೇಂದ್ರ ಬಗ್ಗೆ ಒಂದು ಕಾಮೆಂಟ್ ಮಾಡಿದ್ದರು.

  ಕಾರ್ಯಕ್ರಮದಲ್ಲಿ ಅಕುಲ್ 'ಯಾವ ನಟ ಹಾಡುವುದನ್ನು ನಿಲ್ಲಿಸಬೇಕು ಇವತ್ತಿನಿಂದ....' ಅಂತ ಪ್ರಶ್ನೆ ಕೇಳಿದ್ದರು. ಆಗ ರಾಜೇಶ್ ಕೃಷ್ಣನ್ ಉಪೇಂದ್ರ ಅವರ ಹೆಸರು ತೆಗೆದುಕೊಂಡಿದ್ದರು. ರಾಜೇಶ್ ಕೃಷ್ಣ ಅವರ ಈ ಮಾತಿಗೆ ಉಪೇಂದ್ರ ಅಭಿಮಾನಿಗಳು ಕೋಪಗೊಂಡಿದ್ದರು. ಆ ಬಳಿಕ ಈಗ ರಾಜೇಶ್ ಕೃಷ್ಣನ್ ಈ ವಿವಾದದ ಬಗ್ಗೆ ಫೇಸ್ ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ತಮಾಷೆ ಕಾರ್ಯಕ್ರಮ

  ತಮಾಷೆ ಕಾರ್ಯಕ್ರಮ

  ''ಸೂಪರ್ ಟಾಕ್ ಟೈಂ' ಒಂದು ತಮಾಷೆಯ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ನಿರೂಪಕ ಅಕುಲ್ 'ಕನ್ನಡದ ಯಾವ ನಟರು ಹಾಡುವುದನ್ನು ನಿಲ್ಲಿಸಬೇಕು' ಅಂತ ಕೇಳಿದರು. ಆಗ ನಾನು ಉಪೇಂದ್ರ ಅಂತ ಹೇಳಿದ್ದೆ'' ಎಂದು ರಾಜೇಶ್ ಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ.

  ಉಪೇಂದ್ರ ಬಗ್ಗೆ ಹಾಗೆ ಹೇಳಿಲ್ಲ

  ಉಪೇಂದ್ರ ಬಗ್ಗೆ ಹಾಗೆ ಹೇಳಿಲ್ಲ

  ''ಅಕುಲ್ ಪ್ರಶ್ನೆಗೆ ನಾನು ಹೇಳಿದಾಗ ನಾನು ಉಪೇಂದ್ರ.. ಪುನೀತ್... ಈ ರೀತಿಯ ನಟರು ಅಷ್ಟೊಂದು ಚೆನ್ನಾಗಿ ಹಾಡಿದರೆ ನಮಗೆ ಕೆಲಸ ಇರುವುದಿಲ್ಲ. ಅದಕ್ಕೆ ಉಪೇಂದ್ರ ಅವರು ಹಾಡುವುದನ್ನು ನಿಲ್ಲಿಸಬೇಕು ಅಂತ ಹೇಳಿದ್ದೆ'' - ರಾಜೇಶ್ ಕೃಷ್ಣನ್, ಗಾಯಕ.

  ಎಡಿಟ್ ಆಗಿದೆ

  ಎಡಿಟ್ ಆಗಿದೆ

  ''ನನ್ನ ಮಾತನ್ನು ಪೂರ್ಣವಾಗಿ ಹಾಕಿದರೆ ಕಾರ್ಯಕ್ರಮದ ಸಮಯ ಜಾಸ್ತಿ ಆಗುತ್ತದೆ ಎಂದು ಅದನ್ನು ಎಟಿಟ್ ಮಾಡಲಾಗಿದೆ. ಆ ಕಾರಣದಿಂದ ಇದು ತಪ್ಪಾಗಿ ಬಿಂಬಿತವಾಗಿದೆ ಅಷ್ಟೆ'' - ರಾಜೇಶ್ ಕೃಷ್ಣನ್, ಗಾಯಕ.

  ನಾನು ಅವರ ಅಭಿಮಾನಿ

  ನಾನು ಅವರ ಅಭಿಮಾನಿ

  ''ನಾನು ಉಪೇಂದ್ರ ಅವರ ಮೊದಲ ಸಿನಿಮಾದಿಂದ ಹಾಡಿಕೊಂಡು ಬಂದಿದ್ದೇನೆ. ನಾನು ಕೂಡ ಅವರ ಹಾಡಿಗೆ ಅಭಿಮಾನಿ. ಉಪೇಂದ್ರ ಅವರು ನನಗೆ ನಟ ಆಗುವುದಕ್ಕಿಂತ ಮುಂಚೆಯಿಂದಲೂ ಪರಿಚಯ. ನನ್ನ ಆ ಮಾತನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ'' - ರಾಜೇಶ್ ಕೃಷ್ಣನ್, ಗಾಯಕ.

  ಏನಿದು ವಿವಾದ..?

  ಏನಿದು ವಿವಾದ..?

  'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ 'ಯಾವ ನಟ ಹಾಡುವುದನ್ನು ನಿಲ್ಲಿಸಬೇಕು ಇವತ್ತಿನಿಂದ....' ಎಂದು ಗಾಯಕ ರಾಜೇಶ್ ಕೃಷ್ಣನ್ ಗೆ ಅಕುಲ್ ಬಾಲಾಜಿ ಪ್ರಶ್ನೆ ಕೇಳಿದರು. ಜೊತೆಗೆ ''ಪುನೀತ್, ಶರಣ್, ಸುದೀಪ್, ಉಪೇಂದ್ರ'' ಎಂಬ ನಾಲ್ಕು ಆಯ್ಕೆಗಳನ್ನು ಮುಂದಿಟ್ಟರು ನಾಲ್ಕು ಆಯ್ಕೆಗಳ ಪೈಕಿ 'ಉಪೇಂದ್ರ' ಹೆಸರನ್ನು ರಾಜೇಶ್ ಕೃಷ್ಣನ್ ಹೇಳಿದರು. 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಸ್ಪರ್ಶ' ರೇಖಾ, 'ಗಾಳಿಪಟ' ಭಾವನ ಜೊತೆ ಗಾಯಕ ರಾಜೇಶ್ ಕೃಷ್ಣನ್ ಅತಿಥಿಯಾಗಿ ಭಾಗವಹಿಸಿದ್ದರು.

  English summary
  Kannada singer Rajesh Krishnan gives clarity about his statement on Upendra

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X