For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ ನಿರೂಪಣೆಗೆ 1000 ಕೋಟಿ ಸಂಭಾವನೆ! ಸಲ್ಮಾನ್ ಖಾನ್‌ ಹೇಳಿದ್ದೇನು?

  |

  ತೆಲುಗು, ಕನ್ನಡದಲ್ಲಿ ಬಿಗ್‌ಬಾಸ್ ಈಗಾಗಲೇ ಚಾಲ್ತಿಯಲ್ಲಿದೆ. ತೆಲುಗಿನಲ್ಲಿ ನಾಗಾರ್ಜುನ ನಿರೂಪಣೆ ಮಾಡುತ್ತಿದ್ದರೆ, ಕನ್ನಡದಲ್ಲಿ ಯಥಾವತ್ತು ಕಿಚ್ಚ ಸುದೀಪ್ ನಿರೂಪಕರಾಗಿದ್ದಾರೆ. ಇದೀಗ ಹಿಂದಿಯಲ್ಲಿಯೂ ಬಿಗ್‌ಬಾಸ್ ಆರಂಭವಾಗುತ್ತಿದೆ.

  ಹಿಂದಿಯಲ್ಲಿ ಹದಿನಾರನೇ ಸೀಸನ್ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ಸಲ್ಮಾನ್ ಖಾನ್ ಶೋ ಅನ್ನು ನಿರೂಪಣೆ ಮಾಡಿದ್ದಾರೆ. ಹಲವು ವರ್ಷದಿಂದ ಸಲ್ಮಾನ್ ಖಾನ್ ಅವರೇ ಈ ಶೋನ ನಿರೂಪಕರಾಗಿದ್ದು, ಕನ್ನಡದಲ್ಲಿ ಸುದೀಪ್‌ರಂತೆ ಹಿಂದಿಯಲ್ಲಿ ಸಹ ಸಲ್ಮಾನ್ ಖಾನ್ ತಮ್ಮದೇ ಶೈಲಿಯ ನಿರೂಪಣೆಯಿಂದ ಬಿಗ್‌ಬಾಸ್‌ನ ಅವಿಭಾಜ್ಯ ಅಂಗವೇ ಆಗಿಬಿಟ್ಟಿದ್ದಾರೆ.

  Bigg Boss Season 9 Day 3: ಬಿಗ್‌ಬಾಸ್ ಮನೆಯಲ್ಲಿ ಮೂರನೇ ದಿನ ನಡೆದಿದ್ದೇನು?Bigg Boss Season 9 Day 3: ಬಿಗ್‌ಬಾಸ್ ಮನೆಯಲ್ಲಿ ಮೂರನೇ ದಿನ ನಡೆದಿದ್ದೇನು?

  ಇದೀಗ ಹೊರಬಿದ್ದಿರುವ ಹೊಸ ಸುದ್ದಿಯೆಂದರೆ ಬಿಗ್‌ಬಾಸ್ ಸೀಸನ್ 16 ರ ನಿರೂಪಣೆಗೆ ಸಲ್ಮಾನ್ ಖಾನ್ ಭಾರಿ ಮೊತ್ತದ ಸಂಭಾವನೆ ಪಡೆಯಲಿದ್ದಾರೆ ಎಂಬುದು. ಹೊಸ ಸೀಸನ್‌ನ ನಿರೂಪಣೆಗೆ ಸಲ್ಮಾನ್ ಖಾನ್ 1000 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

  ಬಿಗ್‌ಬಾಸ್ ಸೀಸನ್ 16 ರ ಸುದ್ದಿಗೋಷ್ಠಿ ನಿನ್ನೆ ನಡೆದಿದ್ದು ಸುದ್ದಿಗೋಷ್ಠಿಯಲ್ಲಿ ತಮ್ಮ ಸಂಭಾವನೆ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ''ನಾನು ಸಾವಿರ ಕೋಟಿ ಸಂಭಾವನೆ ಪಡೆಯುತ್ತಿದ್ದೇನೆ ಎನ್ನಲಾಗುತ್ತಿದೆ. ನಿಜಕ್ಕೂ ನನ್ನ ಜೀವನದಲ್ಲಿ ಅಷ್ಟೆಲ್ಲ ಹಣವನ್ನು ಒಟ್ಟಿಗೆ ನೋಡಿದ್ದೇ ಇಲ್ಲ'' ಎಂದಿದ್ದಾರೆ ಸಲ್ಮಾನ್ ಖಾನ್.

  ''ಒಂದು ದಿನ ನನಗೆ ಆ ಹಣ ಬರಬಹುದು ಎಂದುಕೊಳ್ಳೋಣ, ಅದು ಬಂದ ದಿನವೂ ಅದಕ್ಕೆ ತಕ್ಕಂತೆ ನನಗೆ ಖರ್ಚುಗಳಿರುತ್ತವೆ, ನನ್ನ ಲಾಯರ್‌ಗಳಿಗೆ ನಾನು ಸಾಕಷ್ಟು ಹಣ ಕೊಡಬೇಕಾಗುತ್ತದೆ. ನನ್ನ ಲಾಯರ್‌ಗಳು ಸಹ 'ಸಲ್ಮಾನ್ ಖಾನ್' ರೀತಿಯೇ, ಈ ಸಲ್ಮಾನ್ ಖಾನ್ ಸಂಪಾದಿಸುತ್ತಾನೆ, ಆ ಸಲ್ಮಾನ್ ಖಾನ್‌ಗಳು ಕೊಂಡೊಯ್ಯುತ್ತಾರೆ'' ಎಂದು ತಮಾಷೆಯಾಗಿ ಹೇಳಿದ್ದಾರೆ ಸಲ್ಮಾನ್ ಖಾನ್.

  ಮಾಧ್ಯಮದವರು, ಅಭಿಮಾನಿಗಳು ದೊಡ್ಡ-ದೊಡ್ಡದಾಗಿ ಸಂಖ್ಯೆಗಳನ್ನು ಹೇಳಿ ಬಿಡುತ್ತೀರಿ. ಅದನ್ನು ಇಡಿ, ಇನ್‌ಕಮ್ ಟ್ಯಾಕ್ಸ್‌ನವರು ಸಹ ನೋಡುತ್ತಿರುತ್ತಾರೆ. ಅವರು ಮನೆಗೆ ಬಂದು ಪರಿಶೀಲನೆ ನಡೆಸುತ್ತಾರೆ ಆಗ ಅವರಿಗೆ ಸತ್ಯದ ಅರಿವಾಗುತ್ತದೆ. 1000 ಕೋಟಿ ಎಂದು ನೀವು ಹೇಳುತ್ತಿದ್ದೀರಿ, ಆದರೆ ಅದರ ಕಾಲು ಭಾಗದಷ್ಟು ಸಹ ನಾನು ಸಂಭಾವನೆಯಾಗಿ ತೆಗೆದುಕೊಂಡಿಲ್ಲ ಎಂದಿದ್ದಾರೆ ಸಲ್ಮಾನ್ ಖಾನ್.

  ಸಲ್ಮಾನ್ ಖಾನ್ ಸಿನಿಮಾ ವೊಂದಕ್ಕೆ ಕನಿಷ್ಟ 100 ಕೋಟಿ ಹಣ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಬಿಗ್‌ಬಾಸ್‌ಗೆ ಅದಕ್ಕಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ ಇದರಲ್ಲಿ ಶೂಟಿಂಗ್ ಪ್ರೋಮೊಷನ್ ಇತರೆಗಳು ಸೇರಿಕೊಂಡಿರುತ್ತವೆ.

  ಈ ಬಾರಿ ಬಿಗ್‌ಬಾಸ್ ಸೀಸನ್ 16 ಅಕ್ಟೋಬರ್ 01 ರಿಂದ ಪ್ರಾರಂಭವಾಗಲಿದೆ. ಈ ಬಾರಿ ಸ್ಪರ್ಧಿಗಳ ಜೊತೆಗೆ ಬಿಗ್‌ಬಾಸ್ ಸಹ ಆಟವಾಡಲಿದ್ದಾರೆ. ಈ ಬಾರಿಯ ಆಟ ಹಿಂದಿನ ಆಟಗಳಿಗಿಂತಲೂ ಭಿನ್ನವಾಗಿರಲಿದೆ ಹಾಗೂ ಬಹಳ ವೇಗದಿಂದ ಕೂಡಿರಲಿದೆ ಎಂದು ಆಯೋಜಕರು ಹೇಳಿದ್ದಾರೆ.

  English summary
  Salman Khan talked about him taking 1000 crore rs as remuneration for Bigg Boss. He said not even 1/4 of the 1000 crore he is charging.
  Wednesday, September 28, 2022, 14:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X