For Quick Alerts
  ALLOW NOTIFICATIONS  
  For Daily Alerts

  ಧಾರಾವಾಹಿ ದೃಶ್ಯ ನೋಡಿ ಹಣೆ-ಹಣೆ ಬಡಿದುಕೊಂಡ ವೀಕ್ಷಕರು!

  |

  ಭಾರತೀಯ ಧಾರಾವಾಹಿಗಳ 'ಕ್ರಿಯೇಟಿವಿಟಿ' ಬಗ್ಗೆ ಹೊಸದಾಗಿ ಪೀಠಿಕೆ ಬೇಕಿಲ್ಲ. ಅದರಲ್ಲಿಯೂ ಹಿಂದಿ ಧಾರಾವಾಹಿಗಳಂತೂ ತರ್ಕ, ಭೌತಶಾಸ್ತ್ರ, ಮಾನವ ಸಹಜ ವರ್ತನೆ ಈ ಎಲ್ಲಾ ವಿಷಯಗಳನ್ನು ಮರೆತೇ ಬಿಟ್ಟಿವೆ ಎಂದೇ ಹೇಳಬೇಕು.

  ಕೆಲವು ದಿನಗಳ ಹಿಂದೆ ವೈರಲ್ ಆಗಿದ್ದ 'ರಸೋಡಿ ಮೇ ಕೌನ್ ಥಾ' ನಿಮಗೆ ನೆನಪಿರಬಹುದು. ಅದಕ್ಕೂ ಹಿಂದೆ ಧಾರಾವಾಹಿ ಪಾತ್ರಧಾರಿಯೊಬ್ಬಾಕೆ ನೆಲದಲ್ಲಿ ನಿಂತುಕೊಂಡೆ ಕರ್ಟನ್‌ಗೆ ನೇಣು ಬಿಗಿದುಕೊಂಡಿದ್ದನ್ನೂ ವೀಕ್ಷಕ ಮಹಾಪ್ರಭುಗಳು ನೋಡಿದ್ದಾರೆ. ಸಾಮಾನ್ಯ ಗೃಹಿಣಿಯೊಬ್ಬಾಕೆ, ಆಪರೇಷನ್ ಥಿಯೇಟರ್‌ಗೆ ನುಗ್ಗಿ ಗಂಡನಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ ದೃಶ್ಯವನ್ನೂ ನೋಡಿದ್ದಾರೆ. ಈಗ ಅವೆಲ್ಲವನ್ನೂ ಮೀರಿಸುವಂತಹಾ ದೃಶ್ಯ ಸೃಷ್ಟಿಸಲಾಗಿದೆ.

  ಹಿಂದಿಯ 'ಸಸುರಾಲ್ ಸಿಮ್ರನ್ ಕಾ' ಹೆಸರಿನ ಧಾರಾವಾಹಿಯಲ್ಲಿ ತರ್ಕರಹಿತ, ಬುದ್ಧಿಹೀನ ದೃಶ್ಯವೊಂದನ್ನು ಚಿತ್ರಿಸಿ ಪ್ರಸಾರ ಮಾಡಲಾಗಿದೆ. ದೃಶ್ಯವನ್ನು ನೋಡಿದವರು ಆ ದೃಶ್ಯದ 'ಬುದ್ಧಿಹೀನತೆ' ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ದೃಶ್ಯದಲ್ಲಿ ನಾಯಕಿ ಸಿಮ್ರನ್ ತನ್ನ ಅಜ್ಜಿಯ ಬಳಿ ಕ್ಷಮಾಪಣೆ ಕೇಳುತ್ತಿದ್ದಾರೆ. ಅಂಗಲಾಚುವಂತೆ ಕೆಳಗೆ ಕೂತು ಅಜ್ಜಿಯ ಶಾಲುವನ್ನು ಹಿಡಿದು ಬೇಡಿಕೊಳ್ಳುತ್ತಿದ್ದಾಳೆ. ಆದರೆ ಅಜ್ಜಿ ಸಿಮ್ರನ್ ಕಡೆ ನೊಡದೇ ಸಿಮ್ರನ್ ಹಿಡಿದಿದ್ದ ಶಾಲನ್ನು ಎಳೆಯುತ್ತಾ ಮುಂದೆ ಹೋಗುಲು ಪ್ರಯತ್ನ ಪಡುತ್ತಿದ್ದಾಳೆ.

  ದೃಶ್ಯ ಇಷ್ಟೇ ಆಗಿದ್ದರೆ ವಿಶೇಷವೇನೂ ಇರಲಿಲ್ಲ. ಭೌತಶಾಸ್ತ್ರದ ಅದ್ಯಾವ ನಿಯಮ ಅಲ್ಲಿ ತನ್ನ ಕರಾಮತ್ತು ತೋರಿಸಿತೋ ಏನೋ ಹಠಾತ್ತನೆ ಸಿಮ್ರನ್ ಹಿಡಿದಿದ್ದ ಶಾಲು ಸಿಮ್ರನ್ ನ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ, ಅಷ್ಟೇ ಅಲ್ಲ ಕುಣಿಕೆಯಂತಾಗಿ ಸಿಮ್ರನ್‌ಗೆ ಉಸಿರಾಡಲು ಸಹ ಆಗುವುದಿಲ್ಲ. ಆದರೆ ಇದಾವುದನ್ನೂ ಗಮನಿಸದೇ ಅಜ್ಜಿ ಶಾಲನ್ನು ಎಳೆಯುತ್ತಲೇ ಇರುತ್ತಾಳೆ.

  ದಶ್ಯ ಅದೆಷ್ಟು ಕೃತಕವಾಗಿ, ಅಸಹಜವಾಗಿ ಇದೆಯೆಂದರೆ ಸಿಮ್ರನ್ ಪಾತ್ರಧಾರಿ ಸ್ವತಃ ಆ ಶಾಲನ್ನು ತನ್ನ ಕುತ್ತಿಗೆ ಸುತ್ತಿಕೊಂಡು ಉಸಿರಾಡಲು ಹೆಣಗಾಡುವ ನಟನೆ (?) ಮಾಡುವುದು ಗೊತ್ತಾಗುತ್ತದೆ. ನೆಟ್ಟಿಗರು ಈ ವಿಡಿಯೋವನ್ನು ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ.

  English summary
  Sasural Ka Simran Tv serial's brain less scene video went viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X