For Quick Alerts
  ALLOW NOTIFICATIONS  
  For Daily Alerts

  ಸತ್ಯ ಮೇಲೆ ಕಾರ್ತಿಕ್‌ಗೆ ಮತ್ತೆ ಲವ್ ಶುರು!

  By ಪ್ರಿಯಾ ದೊರೆ
  |

  ಸತ್ಯ ಸೀರಿಯಲ್‌ನಲ್ಲಿ ಈಗ ಸತ್ಯಗೆ ಹೇಗಾದರೂ ಮಾಡಿ ಗಣೇಶ ಹಬ್ಬಕ್ಕೆ ತನ್ನ ಏರಿಯಾಗೆ ಹೋಗಬೇಕಾಗಿದೆ. ಅತ್ತೆಯ ಕಣ್ಣು ತಪ್ಪಿಸಿ ಹೋಗೋಕೂ ಆಗುತ್ತಿಲ್ಲ. ಬೇರೆ ಯಾವುದೇ ದಾರಿ ಕಾಣದೆ ಕಂಗಾಲಾಗಿದ್ದಾಳೆ.

  ಅತ್ತ ಏರಿಯಾದಲ್ಲಿ ಹುಡುಗರು ಗಣೇಶ ಹಬ್ಬಕ್ಕೆ ತಯಾರಿಯನ್ನು ನೆಡೆಸಿದ್ದಾರೆ. ದೊಡ್ಡ ಗಣೇಶವನ್ನು ಆರಿಸಿ ಫುಲ್ ಖುಷಿಯಲ್ಲಿದ್ದಾರೆ. ಸತ್ಯ ಬರುತ್ತಾಳೆ, ಈ ವರ್ಷವೂ ಏರಿಯಾದಲ್ಲಿ ನಮ್ಮದೇ ಹವಾ ಎಂದು ಕುಣಿಯುತ್ತಿದ್ದಾರೆ. ಸತ್ಯ ಆಗಮನಕ್ಕೆ ಕಾಯುತ್ತಿದ್ದಾರೆ.

  ತಾರಕಕ್ಕೇರಿದೆ ಸುಮಾಳ ಕೋಪ: ಮಗಳ ಮನಸ್ಸು ಹೇಗೆ ಗೆಲ್ಲುತ್ತಾಳೆ ಪುಟ್ಟಕ್ಕ? ತಾರಕಕ್ಕೇರಿದೆ ಸುಮಾಳ ಕೋಪ: ಮಗಳ ಮನಸ್ಸು ಹೇಗೆ ಗೆಲ್ಲುತ್ತಾಳೆ ಪುಟ್ಟಕ್ಕ?

  ಕೀರ್ತನಾಗೆ ಈಗ ಮತ್ತೊಂದು ಚಾನ್ಸ್ ಸಿಕ್ಕಿದೆ. ಸತ್ಯ ಗಣೇಶ ಹಬ್ಬಕ್ಕೆ ಏರಿಯಾಗೆ ಹೋಗಬೇಕು ಎನ್ನುತ್ತಿದ್ದಾಳೆ. ಆದರೆ ಸೀತಾ ಇದಕ್ಕೆ ಖಂಡಿತವಾಗಿಯೂ ಹೋಗಬಾರದು ಎಂದು ಬ್ರೇಕ್ ಹಾಕಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಕೀರ್ತನಾ ಪ್ಲಾನ್ ಮಾಡುತ್ತಿದ್ದಾಳೆ.

  ಚಿಂತೆಯಲ್ಲಿ ಸತ್ಯ!

  ಚಿಂತೆಯಲ್ಲಿ ಸತ್ಯ!

  ಸತ್ಯಗೆ ಈಗ ತನ್ನ ಏರಿಯಾಗೆ ಹೋಗುವ ಚಿಂತೆ ಮೂಡಿದೆ. ಸೀತಾ ನೋಡಿದರೆ ಖಡಕ್ ಆಗಿ ಹೇಳಿದ್ದಾಳೆ. ಹಬ್ಬದ ದಿನ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೆಜ್ಜೆ ಇಡಬಾರದು ಎಂದು ಹೇಳಿದ್ದಾಳೆ. ಹೀಗಾಗಿ ಸತ್ಯಗೆ ಈಗ ಏನು ಮಾಡುವುದು ಎಂದೇ ತಿಳಿಯುತ್ತಿಲ್ಲ. ರಾತ್ರಿಯೆಲ್ಲಾ ನಿದ್ದೆಗೆಟ್ಟು ಯೋಚಿಸುತ್ತಿದ್ದಾಳೆ. ಆದರೆ ಸೀತಾ ಕಣ್ತಪ್ಪಿಸಿ ಹೋಗಲು ಆಗುವುದಿಲ್ಲ. ಆದರೆ ನಾನು ಏರಿಯಾ ಗಣೇಶ ಹಬ್ಬಕ್ಕೆ ಹೋಗುವುದು ಹೇಗೆ. ಹುಡುಗರೆಲ್ಲರೂ ನನಗಾಗಿ ಕಾಯುತ್ತಾ ಕುಳಿತಿರುತ್ತಾರೆ. ನಾನಿಲ್ಲದೆ ಗಣೇಶ ಹಬ್ಬ ನಡೆದಿದ್ದೇ ಇಲ್ಲ ಎಂದು ಯೋಚಿಸುತ್ತಲೇ ಇದ್ದಾಳೆ.

  ಏಜೆ ಸೊಸೆಯಂದಿರ ಕೆಂಗಣ್ಣಿಗೆ ಗುರಿಯಾದ ಕೌಸಲ್ಯಏಜೆ ಸೊಸೆಯಂದಿರ ಕೆಂಗಣ್ಣಿಗೆ ಗುರಿಯಾದ ಕೌಸಲ್ಯ

  ಸತ್ಯ ಮೇಲೆ ಕಾರ್ತಿಕ್‌ಗೆ ಲವ್!

  ಸತ್ಯ ಮೇಲೆ ಕಾರ್ತಿಕ್‌ಗೆ ಲವ್!

  ಇತ್ತ ಸತ್ಯ ರಾತ್ರಿಯಿಂದಲೂ ಏನನ್ನು ಯೋಚಿಸುತ್ತಿದ್ದಾಳೆ ಎಂದು ಕಾರ್ತಿಕ್ ನೋಡುತ್ತಲೇ ಇದ್ದಾನೆ. ಇನ್ನು ಬೆಳಗ್ಗೆ ಹಬ್ಬಕ್ಕೆ ತಯಾರಿ ನಡೆಸುವಾಗಲೂ ಸತ್ಯ ಇದನ್ನೇ ಯೋಚಿಸುತ್ತಿದ್ದಾಳೆ. ಕಾರ್ತಿಕ್ ರೇಗಿಸಿದರೂ ತಾಳ್ಮೆಯಿಂದ ಇದ್ದಾಳೆ. ಯಾವುದಕ್ಕೂ ಹೆಚ್ಚು ರಿಯಾಕ್ಟ್ ಮಾಡುವುದಿಲ್ಲ. ಇದೇ ಸಂದರ್ಭದಲ್ಲಿ ಕಾರ್ತಿಕ್ ಬೀಳುತ್ತಾನೆ. ಅಷ್ಟರಲ್ಲಿ ಸತ್ಯ ಬಂದು ಕಾಪಾಡುತ್ತಾಳೆ. ಇದನ್ನು ನೋಡಿ ಕಾರ್ತಿಕ್ ಸತ್ಯಗೆ ಕರಗುತ್ತಾನೆ. ಅಯ್ಯೋ ನಾನು ಯಾಕೆ ಹೀಗಿದ್ದೀನಿ. ನನಗೆ ಸತ್ಯ ಮೇಲೆ ಮತ್ತೆ ಲವ್ ಆಗುತ್ತಿದೆಯಾ ಎಂದು ಕಾರ್ತಿಕ್ ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಾನೆ.

  ಮನೆಗೆ ಬರ್ತಾಳಾ ಸತ್ಯ!

  ಮನೆಗೆ ಬರ್ತಾಳಾ ಸತ್ಯ!

  ಏರಿಯಾದಲ್ಲಿ ಹುಡುಗರು ದೊಡ್ಡ ಗಣೇಶನನ್ನು ತಂದಿದ್ದಾರೆ. ಏರಿಯಾದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಆದರೆ ಇನ್ನೂ ಸತ್ಯ ಬಂದಿಲ್ಲ. ಸತ್ಯ ಬರುತ್ತಾಳೆ. ಗೌರಿಯನ್ನು ತರುತ್ತಾಳೆ. ಆಮೇಲೆ ಪೂಜೆ ಅಂತ ಹುಡುಗರು ಹಠ ಹಿಡಿದಿದ್ದಾರೆ. ಆದರೆ ಸತ್ಯ ಬರುವುದಿಲ್ಲ. ಈಗ ಅವಳಿಗೆ ಮದುವೆಯಾಗಿದೆ. ಎಂದು ಯಾರು ಹೇಳಿದರೂ ಕೇಳುತ್ತಿಲ್ಲ. ರಾಕೇಶ್ ಕೂಡ ಸತ್ಯ ಬರೋದಿಲ್ಲ. ಅವರ ಅತ್ತೆ ಬಿಡುವುದಿಲ್ಲ. ಪೂಜೆ ಮಾಡಿ ಎಂದರೂ ಕೇಳುತ್ತಿಲ್ಲ. ಹುಡುಗರು ಸತ್ಯ ಹಬ್ಬಕ್ಕೆ ಬಂದೇ ಬರುತ್ತಾಳೆ. ಗೌರಿಯನ್ನು ತರುತ್ತಾಳೆ ಎಂದು ಕಾಯುತ್ತಿದ್ದಾರೆ. ಆದರೆ ಸತ್ಯ ಹಬ್ಬಕ್ಕೆ ಬರುತ್ತಾಳಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

  ದಿವ್ಯಾಗೆ ಅಗ್ನಿ ಪರೀಕ್ಷೆ!

  ದಿವ್ಯಾಗೆ ಅಗ್ನಿ ಪರೀಕ್ಷೆ!

  ಇತ್ತ ಬಾಲ ದಿವ್ಯಾಗೆ ಕೊಡಬಾರದ ಕಷ್ಟಗಳನ್ನು ಕೊಡುತ್ತಿದ್ದಾನೆ. ಗಣೇಶ ಹಬ್ಬಕ್ಕೆ ಊರಿನ ಹೊಸ ಸೊಸೆ ಸಾವಿರ ಮೋದಕ ಮಾಡಬೇಕು, 108 ಬಿಂದಿಗೆ ನೀರು ತರಬೇಕು ಎಂದು ಕಥೆ ಹೇಳಿದ್ದಾನೆ. ಇದನ್ನೆಲ್ಲಾ ಕೇಳಿಸಿಕೊಂಡ ದಿವ್ಯ ಮೊದಲು ಶಾಕ್ ಆದಳು. ಆದರೆ ಈಗ ಅವಳು ಇವನ್ನೆಲ್ಲಾ ಮಾಡಿದರೆ ಗಣೇಶ ಕೇಳಿದ ವರವನ್ನು ಕೊಡುತ್ತಾನೆ ಎಂದು ದಿವ್ಯಾ ನಂಬಿದ್ದಾಳೆ. ಹೀಗಾಗಿ ಕಷ್ಟವಾದರೂ ಪರವಾಗಿಲ್ಲ ಎಂದು ದಿವ್ಯಾ ಎಲ್ಲಾ ಕೆಲಸವನ್ನೂ ಮಾಡುತ್ತಿದ್ದಾಳೆ.

  English summary
  Sathya Tv Serial Written Update On September 1st Episode, Big Twist In Sathya Life,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X