twitter
    For Quick Alerts
    ALLOW NOTIFICATIONS  
    For Daily Alerts

    ಸೇತುರಾಂ ನಿರ್ದೇಶನದ ಹೊಸ ಧಾರಾವಾಹಿ 'ಯುಗಾಂತರ'!

    By ಪ್ರಿಯಾ ದೊರೆ
    |

    ಎಸ್.ಎನ್.ಸೇತುರಾಂ ಎಂದರೆ ಮೊದಲು ನೆನಪಾಗುವುದು ಅವರು ನಟಿಸಿದ 'ಮಾಯಾಮೃಗ' ಧಾರಾವಾಹಿ. ಆ ಧಾರಾವಾಹಿಯಲ್ಲಿ ಸೇತುರಾಂ ಅವರ ನಟನೆಗೆ ಮನಸೋಲದವರಿಲ್ಲ. ಪ್ರತಿಯೊಬ್ಬರ ಮನೆಯಲ್ಲೂ ವಯಸ್ಸಾದವರು ನಡೆದುಕೊಳ್ಳುವಂತೆಯೇ ನಟಿಸಿ ಜನ ಮನ ಗೆದ್ದಿದ್ದಾರೆ. ನಿರ್ದೇಶಕರಾಗಿಯೂ ಕೆಲವು ಒಳ್ಳೆಯ ಧಾರಾವಾಹಿಗಳನ್ನು ತೆರೆಗೆ ತಂದಿರುವ ಸೇತುರಾಂ ಇದೀಗ ಮತ್ತೊಂದು ಧಾರಾವಾಹಿಯೊಟ್ಟಿಗೆ ಬಂದಿದ್ದಾರೆ.

    ರಂಗಭೂಮಿ ಹಾಗೂ ಕಿರುತೆರೆಯ ಕಲಾವಿದರಾಗಿ, ನಿರ್ದೇಶಕ, ಉಪನ್ಯಾಸಕ, ಚಿಂತಕ ಮತ್ತು ಸೃಜನಶೀಲ ಬರಹಗಾರರಾಗಿ ಪ್ರಸಿದ್ದರಾಗಿರುವ ಸೇತುರಾಂ ಅವರು ಜನವರಿ 23, 1953ರಲ್ಲಿ ಹಾಸನ ಜಿಲ್ಲೆಯ ಶಂಖ ಎಂಬಲ್ಲಿ ಜನಿಸಿದರು. ಅರಸೀಕೆರೆ ಹಾಗೂ ಹಾಸನದಲ್ಲಿ ಓದಿದ ಸೇತುರಾಂ ಅವರು ವಿಜ್ಞಾನದಲ್ಲಿ ಪದವಿ ಮಾಡಿದ್ದಾರೆ. ಮೊದಲು ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿದ ಸೇತುರಾಂ ಅವರು ಅಂಚೆ ಚೀಟಿ ಮಾರುವ ಗುಮಾಸ್ತರಾಗಿದ್ದರು.

    ಕೀರ್ತನಾ ಪ್ಲ್ಯಾನ್ ಠುಸ್... ಸತ್ಯ, ಕಾರ್ತಿಕ್ ಮದುವೆಗೆ ಅಪ್ಪನ ನಿರ್ಧಾರ!ಕೀರ್ತನಾ ಪ್ಲ್ಯಾನ್ ಠುಸ್... ಸತ್ಯ, ಕಾರ್ತಿಕ್ ಮದುವೆಗೆ ಅಪ್ಪನ ನಿರ್ಧಾರ!

    ನಂತರ ಆದಾಯ ತೆರಿಗೆ ಇಲಾಖೆಯಲ್ಲಿ ಡೆಪ್ಯೂಟಿ ಕಮಿಷನರ್ ಹುದ್ದೆಯನ್ನು ಅಲಂಕರಿಸಿದರು. 2007ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಸಾಹಿತ್ಯ ಓದು ಸೇತುರಾಂ ಅವರ ಜೀವನದ ಭಾಗ. ಕನ್ನಡದ ಜೊತೆಗೆ ಇತರೆ ಸಾಹಿತ್ಯದ ಅಧ್ಯಯನವನ್ನೂ ಮಾಡುತ್ತಾರೆ. ಕೆಲಸ ಮಾಡುವಾಗಲೇ ಸೇತುರಾಂ ಅವರು ಹವ್ಯಾಸಿ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡರು.

    Sethuram Start New Serial Called Yuganthara

    ಸದಾ ಸೃಜನಶೀಲವಾಗಿರುವ ಸೇತುರಾಂ ಅವರು ಮನೆ ಮಾತಾಗಿದ್ದು. ಟಿ.ಎನ್ ಸೀತಾರಾಮ್ ಅವರ ನಿರ್ದೇಶನದ ಮಾಯಾಮೃಗ, ಮನ್ವಂತರ, ಮುಕ್ತ ಧಾರಾವಾಹಿ ಮೂಲಕ. ಬಳಿಕ ನಿರ್ದೇಶನದತ್ತ ಬಂದ ಸೇತುರಾಂ ಅವರು ಮಂಥನ, ದಿಬ್ಬಣ, ಅನಾವರಣ ಸೇರಿದಂತೆ ಕೆಲವು ಧಾರಾವಾಹಿಗಳನ್ನು ನಿರ್ದೇಶಿಸಿದರು. ಅಷ್ಟೇ ಅಲ್ಲದೇ, ಹಲವು ನಾಟಕಗಳನ್ನು ಬರೆದು ನಿರ್ದೇಶಿಸಿದರು. ನಿಮಿತ್ತ, ಗತಿ, ಅತೀತ, ಉಚ್ಛಿಷ್ಟ ಹಾಗೂ ಸ್ತ್ರೀ ನಾಟಕಗಳು ಸೇತುರಾಂ ಅವರದ್ದೇ.

    ಮದುವೆ ನಿಲ್ಲಲು ಸತ್ಯ ಕಾರಣ ಎಂದು ಸುಳ್ಳು ಕಥೆ ಕಟ್ಟಿದ ಕೀರ್ತನಾ!ಮದುವೆ ನಿಲ್ಲಲು ಸತ್ಯ ಕಾರಣ ಎಂದು ಸುಳ್ಳು ಕಥೆ ಕಟ್ಟಿದ ಕೀರ್ತನಾ!

    ಟಿ.ಎನ್. ಸೀತಾರಾಂ ಹಾಗೂ ಸೇತುರಾಂ ಅವರು ಕೊಟ್ಟಂತಹ ಧಾರಾವಾಹಿಗಳು, ಜನರ ಮನಸನ್ನು ಚಿಂತನೆಗೆ ಹುಚ್ಚುವಂತಹವು. ಒಂದೊಂದು ಪಾತ್ರಗಳು ಕೂಡ ತಮ್ಮ ಮನೆಯವರಿಗೆ ತಮಗೇ ಹೋಲಿಸಿಕೊಳ್ಳುವಂತೆ ಪಾತ್ರಗಳಿರುತ್ತವೆ. ಧಾರಾವಾಹಿಯಲ್ಲಿ ಬರುವ ಒಂದೊಂದು ಸಂಭಾಷಣೆ ಮನ ಮುಟ್ಟುವಂತಿರುತ್ತದೆ. ಈಗಲೂ ಜನ ಈ ಧಾರಾವಾಹಿಗಳ ಸಂಭಾಷಣೆ, ಪಾತ್ರಗಳನ್ನು ಸ್ವಲ್ಪವೂ ಮರೆಯದೆ ನೆನಪಿನಲ್ಲಿಟ್ಟುಕೊಂಡಿದ್ದಾರೆ.

    Sethuram Start New Serial Called Yuganthara

    ಮುಕ್ತ ಮುಕ್ತ, ಮಹಾಪರ್ವ ಸೀರಿಯಲ್ ಗಳು ಮುಗಿದ ಮೇಲೆ ಜನರು ಅಂತಹ ಧಾರಾವಾಹಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಯೂಟ್ಯೂಬ್ ನಲ್ಲಿ ಮಾಯಾಮೃಗ, ಅನಾವರಣ, ಮಂಥನ, ಮುಕ್ತ ಮುಕ್ತ ಧಾರಾವಾಹಿಗಳು ಈಗಲೂ ಮೊದಲಿನಂತೆಯೇ ನೋಡುವವರ ಸಂಖ್ಯೆ ಹೆಚ್ಚಿದೆ. ಇಂಥಹ ಧಾರಾವಾಹಿಗಳನ್ನು ನಿರ್ದೇಶಿಸುವಂತೆ ಪ್ರೇಕ್ಷಕರು ಸೀತಾರಾಂ ಹಾಗೂ ಸೇತುರಾಂ ಅವರಲ್ಲಿ ಕೇಳಿಕೊಂಡಿದ್ದು ಉಂಟು. ಜನರ ಬೇಡಿಕೆಯನ್ನು ಈಡೇರಿಸೋದಿಕ್ಕೋ ಏನೋ ಇದೀಗ ಸೇತುರಾಂ ಅವರು ಹೊಸ ಯುಗಾಂತರವನ್ನು ಆರಂಭಿಸಿದ್ದಾರೆ.

    ಕಂಠಿ ಪ್ರೀತಿಗೆ ಮನಸೋಲುತ್ತಿರುವ ಸ್ನೇಹ, ರಾಜಿಗೆ ತಕ್ಕ ಪಾಠ ಕಲಿಸಿದಳೇ ಬಂಗಾರಮ್ಮ?ಕಂಠಿ ಪ್ರೀತಿಗೆ ಮನಸೋಲುತ್ತಿರುವ ಸ್ನೇಹ, ರಾಜಿಗೆ ತಕ್ಕ ಪಾಠ ಕಲಿಸಿದಳೇ ಬಂಗಾರಮ್ಮ?

    ಹೊಸ ಸೀರಿಯಲ್ ಯುಗಾಂತರ ಅವನ್ನು ಮುಂದಿನವಾರ ಅಂದರೆ ಮೇ 23ರಂದು ಆರಂಭವಾಗಲಿದೆ. ಸಿರಿ ಕನ್ನಡ ಚಾನೆಲ್ ನಲ್ಲಿ ಧಾರಾವಾಹಿಯನ್ನು ಆರಂಬಿಸಲಿದ್ದು, ಈಗಾಗಲೇ ಪ್ರೋಮೋ ಮೂಲಕವೇ ಸೀರಿಯಲ್ ಹಿಟ್ ಆಗಿದೆ ಎನ್ನಬಹುದು. ಯುಗಾಂತರ ಸೀರಿಯಲ್‌ಗೆ ಕಥೆ, ಸಂಭಾಷಣೆಯನ್ನೂ ಬರೆದಿರುವ ಸೇತುರಾಂ ಅವರು ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸೀರಿಯಲ್ ನ ಹಾಡು ಈಗಾಗಲೇ ಎಲ್ಲೆಡೆ ಹರಿದಾಡುತ್ತಿದೆ. ಧಾರಾವಾಹಿಯ ಗೀತೆಯನ್ನು ಹಿರಿಯ ಕವಿ ಎಚ್‌ಎಸ್‌ ವೆಂಕಟೇಶ ಮೂರ್ತಿ ರಚಿಸಿದ್ದಾರೆ. ಈ ಹಾಡಿಗೆ ಪ್ರವೀಣ್ ಡಿ ರಾವ್ ಅವರ ಸಂಗೀತವಿದೆ. ಇನ್ನು 'ಯುಗಾಂತರ' ಧಾರಾವಾಹಿಯಲ್ಲಿ ಸೇತುರಾಂ ಜೊತೆಗೆ ಸುಧಾ ಬೆಳವಾಡಿ, ಶ್ರೀಪತಿ ಮಂಜನ ಬೈಲು, ದಿವ್ಯಾ ಕಾರಂತ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

    English summary
    Sethuram Start New Serial Called Yuganthara, Know More,
    Friday, May 13, 2022, 20:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X